ಶಿವಮೊಗ್ಗ: ಮದುವೆಯಾಗಿ ಎರಡು ವರ್ಷವಾದರೂ ಮಗುವಿಲ್ಲವೆಂಬ ನೋವು; ನವವಿವಾಹಿತೆ ನೇಣಿಗೆ ಶರಣು

ಮದುವೆಯಾಗಿ ಕೇವಲ ಎರಡು ವರ್ಷ ಆಗಿತ್ತು. ನವದಂಪತಿಗಳು ಖುಷಿ ಖುಷಿಯಾಗಿ ಇದ್ದರು. ಆದರೆ ಪತ್ನಿಗೆ ಮಗು ಇನ್ನೂ ಆಗಿಲ್ಲ ಎನ್ನುವ ಚಿಂತೆ ಶುರುವಾಗಿತ್ತು. ಈ ನಡುವೆ ಮೈದುನ ಮದುವೆಯಾಗಿ ಆತನ ಪತ್ನಿ ಗರ್ಭೀಣಿಯಾಗಿದ್ದಳು. ತನಗೆ ಬೇಗ ಮಗುವಾಗಲಿಲ್ಲವೆಂದು ಬೇಸರದಿಂದ ಮಹಿಳೆಯು ಸಾವಿನ ಮನೆ ಸೇರಿದ್ದಾಳೆ.

ಶಿವಮೊಗ್ಗ: ಮದುವೆಯಾಗಿ ಎರಡು ವರ್ಷವಾದರೂ ಮಗುವಿಲ್ಲವೆಂಬ ನೋವು; ನವವಿವಾಹಿತೆ ನೇಣಿಗೆ ಶರಣು
ಆತ್ಮಹತ್ಯೆ ಮಾಡಿಕೊಂಡ ಮಹಿಳೆ
Follow us
ಕಿರಣ್ ಹನುಮಂತ್​ ಮಾದಾರ್
|

Updated on:Apr 02, 2023 | 8:37 AM

ಶಿವಮೊಗ್ಗ: ಮದುವೆಯಾಗಿ ಎರಡು ವರ್ಷ ಆಗಿತ್ತು. ದಂಪತಿಗಳು ಖುಷಿ ಖುಷಿಯಾಗಿಯೇ ಇದ್ದರು. ಸಂಸಾರದಲ್ಲಿ ಯಾವುದೇ ಸಮಸ್ಯೆಗಳಿರಲಿಲ್ಲ. ಶಿವಮೊಗ್ಗ ನಗರದ ಮಿಳಘಟ್ಟದಲ್ಲಿ ಸಂಗೀತಾ(22) ಮತ್ತು ಪತಿ ಗುರುಮೂರ್ತಿ ಇಬ್ಬರು ವಾಸವಾಗಿದ್ದರು. ಮದುವೆಯ ಸಂತಸ ಮತ್ತು ಉತ್ಸಾಹದ ಖುಷಿಯಲ್ಲೇ ದಂಪತಿಗಳಿದ್ದರು. ಆದರೆ ಈ ನಡುವೆ ಕೆಲವು ದಿನಗಳಿಂದ ಸಂಗೀತಾಗೆ ಇನ್ನೂ ಮಗು ಆಗಿಲ್ಲ ಎನ್ನುವ ಬೇಸರ ಶುರುವಾಗಿತ್ತು. ಇದೇ ಕಾರಣಕ್ಕೆ ಸಂಗೀತಾ ಪತಿ ಮನೆಯಲ್ಲಿ ಇಲ್ಲದ ಸಮಯದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಹೌದು ಪತ್ನಿ ಮಗುವಿಲ್ಲದೇ ಬೇಸರವಾಗಿದ್ದುದ್ದನ್ನ ಗಮನಿಸಿ ಪತಿ ಮತ್ತು ಕುಟುಂಬಸ್ಥರು ಮಹಿಳೆಗೆ ಧೈರ್ಯ ಮತ್ತು ಸಮಾಧಾನಪಡಿಸಿದ್ದರು. ಮಗು ಆಗುತ್ತದೆ ಸ್ವಲ್ಪ ತಾಳ್ಮೆಯಿಂದ ಇರಬೇಕು. ತುಂಬಾ ತಲೆಕೆಡಿಸಿಕೊಳ್ಳಬೇಡ ಎಂದು ಎಲ್ಲರೂ ಬುದ್ದಿವಾದ ಹೇಳಿದ್ದರು. ಆದರೆ ಈ ನಡುವೆ ಒಂದೂವರೆ ತಿಂಗಳ ಹಿಂದೆ ಮೈದುನ ಮದುವೆಯಾಗಿದ್ದು, ಮೈದುನ ಪತ್ನಿಯು ಕೆಲ ದಿನಗಳ ಹಿಂದೆ ಗರ್ಭೀಣಿಯಾಗಿದ್ದಾಳೆ ಎನ್ನುವ ಮಾಹಿತಿಯು ಸಂಗೀತಾ ಸಿಕ್ಕಿತ್ತು. ಇದಾದ ಮೇಲೆ ತಾನು ಮದುವೆಯಾಗಿ ಎರಡೂವರೆ ವರ್ಷ ಆದರೂ ಇನ್ನೂ ಮಗುವಾಗಿಲ್ಲ ಎನ್ನುವ ನೋವು ಸಮಸ್ಯೆಯು ಸಂಗೀತಾಳಿಗೆ ಕಾಡತೊಡಗಿತು. ಇದೇ ನೋವಿನಲ್ಲಿ ಪತಿ ಕೆಲಸಕ್ಕೆ ಹೋದ ಸಮಯದಲ್ಲಿ ಸಂಗೀತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇನ್ನು ರಾತ್ರಿ ಮನೆಗೆ ಬಂದ ಪತಿಗೆ ಪತ್ನಿ ಸಾವಿನ ಸುದ್ದಿ ದೊಡ್ಡ ಶಾಕ್ ತಂದಿತ್ತು.

ಇದನ್ನೂ ಓದಿ:ಮಂಗಳೂರು: ಸಾಲಬಾಧೆಯಿಂದ ಹೆಂಡತಿ ಮಕ್ಕಳನ್ನು ಕೊಂದು ಪತಿ ಆತ್ಮಹತ್ಯೆ

ನಿನ್ನೆ(ಮಾ.31) ಮದ್ಯಾಹ್ನ ತಾಯಿ ರಾಧಾಗೆ ಸಂಗೀತಾ ಕಾಲ್ ಮಾಡಿದ್ದಳು. ಅಮ್ಮ ನನಗೆ ಜಾತ್ರೆಗೆ ಕರೆಯುವುದಿಲ್ಲವೇ ಎಂದು ಕೇಳಿದ್ದಳು. ತಾಯಿ ನಾನು ಕೂಲಿ ಕೆಲಸದಲ್ಲಿದ್ದೇನೆ ಬಳಿಕ ಮಾತನಾಡುವುದಾಗಿ ಹೇಳಿದ ಬೆನ್ನಲ್ಲೇ ಸಂಜೆ ಸಂಗೀತಾ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಸಂಗೀತಾ ಸಾವಿನ ಹಿಂದೆ ಏನೆಲ್ಲಾ ಕಾರಣಗಳಿವೆ ಎನ್ನುವುದು ತಾಯಿಗೆ ಮಾತ್ರಗೊತ್ತಿಲ್ಲ. ಯಾವುದೇ ಸಮಸ್ಯೆ ಇದ್ದಿದ್ದರೆ ನನಗೆ ಹೇಳಬೇಕಿತ್ತು ಎಂದು ತಾಯಿ ರೋಧಿಸುತ್ತಿದ್ದಾಳೆ. ಮೃತ ದೇಹ ಕೊಟ್ಟು ಬಿಡಿ ಸಾಕೆಂದು ತಾಯಿಯು ಮಗಳ ಕಳೆದಕೊಂಡ ನೋವಿನ ಆಘಾತದಲ್ಲಿದ್ದಳು.

ಇತ್ತ ಕುಟುಂಬಸ್ಥರು ಮತ್ತು ಸಂಬಂಧಿಕರು ಸಂಗೀತಾ ಸಾವಿಗೆ ಬೇಸರ ಹೊರಹಾಕುತ್ತಿದ್ದರು. ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿ ಸಂಗೀತಾಳನ್ನ ವೈದ್ಯಕೀಯ ಪರೀಕ್ಷೆ ಮಾಡಿಸಿದ್ದರು. ವೈದ್ಯರು ಚಿಕಿತ್ಸೆ ಶುರು ಮಾಡಿದ್ದರು. ಮಾತ್ರೆ ಔಷಧಿಗಳನ್ನು ಕೊಟ್ಟಿದ್ದರು. ಸ್ವಲ್ಪ ದಿನ ಕಾಯಬೇಕು. ಮಗು ಆಗುತ್ತದೆ ಎಂದು ಸಲಹೆ ಕೂಡ ಕೊಟ್ಟಿದ್ದರು. ಈ ನಡುವೆ ಸಂಗೀತಾಗೆ ಏನು ಆಯ್ತೋ ಗೊತ್ತಿಲ್ಲ. ಸಂಗೀತಾ ಸಾಯುವ ನಿರ್ಧಾರಕ್ಕೆ ಬಂದುಬಿಟ್ಟಿದ್ದಳು. ಪತಿಯ ಜೊತೆ ಏನೆಲ್ಲಾ ಚರ್ಚೆ ಮನಸ್ತಾಪ ಇತ್ತೋ ಗೊತ್ತಿಲ್ಲ. ಸಂಗೀತಾಳ ಬೆಡ್ ರೂಂ ನಲ್ಲಿ ಸೀರೆ ಬಳಿಸಿಕೊಂಡು ಆತ್ಮಹತ್ಯೆ ಮಾಡಿಕೊಡಿದ್ದಳು.

ಇದನ್ನೂ ಓದಿ:Gurugram: ಪ್ರಿಯಕರನ ಆತ್ಮಹತ್ಯೆ ಸುದ್ದಿ ಕೇಳಿ ನೊಂದು ಬೆಂಕಿ ಹಚ್ಚಿಕೊಂಡು ಯುವತಿ ಆತ್ಮಹತ್ಯೆ

ಆತ್ಮಹತ್ಯೆ ಪ್ರಕರಣದ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಆಗಿದೆ. ಶಿವಮೊಗ್ಗ ಮೆಗ್ಗಾನ್ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಯ ಬಳಿಕ ಸಂಗೀತಾಳ ಮೃತದೇಹವನ್ನು ಪೋಷಕರಿಗೆ ಕೊಟ್ಟಿದ್ದು, ಮಗಳ ಅಂತ್ಯಸಂಸ್ಕಾರ ತವರು ಮನೆಯಲ್ಲಿ ಮಾಡುವುದಕ್ಕೆ ಹೆತ್ತವರು ನಿರ್ಧರಿಸಿದ್ದಾರೆ. ತುಂಬಾ ಪ್ರೀತಿಯಿಂದ ಸಾಕಿದ್ದ ಮಗಳು ಇನ್ನೂ ನೆನಪು ಮಾತ್ರ. ಕೊನೆ ಪಕ್ಷ ಅವಳ ಅಂತ್ಯಸಂಸ್ಕಾರ ಮತ್ತು ಅವಳ ಸಮಾಧಿ ತಮ್ಮ ಊರಿನಲ್ಲಿ ನಡೆದರೆ ಮಗಳು ಸದಾ ನಮ್ಮೊಂದಿಗೆ ಇರುತ್ತಾಳೆ ಎನ್ನುವ ಭಾವನಾತ್ಮಕ ವಿಚಾರ. ಈ ಹಿನ್ನಲೆಯಲ್ಲಿ ಮಗಳ ಅಂತ್ಯ ಸಂಸ್ಕಾರ ತವರೂರಿನಲ್ಲಿ ಮಾಡುವುದಕ್ಕೆ ಹೆತ್ತವರು ತೀರ್ಮಾನ ಮಾಡಿದ್ದರು.

ಮುದ್ದಾದ ಮಗಳ ಮದುವೆಯನ್ನ ಮಾಡಿ ಇನ್ನೂ ಎರಡು ವರ್ಷ ಆಗಿಲ್ಲ. ಅವಾಗಲೇ ಮಗಳು ಸಾವಿನ ಮನೆ ಸೇರಿದ್ದಾಳೆ. ಮಗಳ ಸಾವಿನ ದೊಡ್ಡ ಆಘಾತ ಹೆತ್ತವರಿಗಾಗಿತ್ತು. ಎರಡು ವರ್ಷಕ್ಕೆ ಮಗುವಾಗಿಲ್ಲ ಎಂದು ಸಂಗೀತಾ ಆತ್ಮಹತ್ಯೆ ಮಾಡಿಕೊಂಡಳಾ ಅಥವಾ ಸಂಸಾರದಲ್ಲಿ ಮತ್ತೇನಾದರೂ ಸಮಸ್ಯೆಗಳಿದ್ದವಾ ಎನ್ನುವುದು ತನಿಖೆಯಿಂದ ಗೊತ್ತಾಗಬೇಕಿದೆ.

ವರದಿ: ಬಸವರಾಜ್ ಯರಗಣವಿ ಟವಿ9 ಶಿವಮೊಗ್ಗ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:36 am, Sun, 2 April 23