ವಿದ್ಯುತ್ ಸ್ಪರ್ಶ: ಕೂಡ್ಲಿಗಿಯ ಶಿವಪುರ ಗ್ರಾಮ‌ ಪಂಚಾಯತ್ ಸದಸ್ಯ ಸಾವು

| Updated By: ಆಯೇಷಾ ಬಾನು

Updated on: Mar 22, 2022 | 4:17 PM

ದಾಳಿ ಕೃಷ್ಣಮೂರ್ತಿ ಇಂದು ಬೆಳಿಗ್ಗೆ ಮೋಟಾರ ಅಳವಡಿಸಿ ಪೈಪಿನಿಂದ ನೀರು ಬಿಡುವಾಗ ಆಕಸ್ಮಿಕ ವಿದ್ಯುತ್ ಸ್ಪರ್ಶದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತನು ಇಬ್ಬರು ಪತ್ನಿಯರು ಮತ್ತು ಇಬ್ಬರು ಮಕ್ಕಳು, ಅಪಾರ ಬಂಧು ಮಿತ್ರರು, ಗ್ರಾಮಪಂಚಾಯಿತಿ ಸದಸ್ಯರ ಬಳಗವನ್ನು ಅಗಲಿದ್ದಾರೆ.

ವಿದ್ಯುತ್ ಸ್ಪರ್ಶ: ಕೂಡ್ಲಿಗಿಯ ಶಿವಪುರ ಗ್ರಾಮ‌ ಪಂಚಾಯತ್ ಸದಸ್ಯ ಸಾವು
ವಿದ್ಯುತ್ ಸ್ಪರ್ಶ: ಕೂಡ್ಲಿಗಿಯ ಶಿವಪುರ ಗ್ರಾಮ‌ ಪಂಚಾಯತ್ ಸದಸ್ಯ ಸಾವು
Follow us on

ವಿಜಯನಗರ: ಮನೆಯ ಹತ್ತಿರದಲ್ಲಿ ನೀರು ಬಿಡುವಾಗ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶದಿಂದ(Electric Shock) ಶಿವಪುರ ಗ್ರಾಮ ಪಂಚಾಯಿತಿ ಸದಸ್ಯ ಮನೆಯ ಮುಂದೆ ಸ್ಥಳದಲ್ಲೆ ಸಾವನ್ನಪ್ಪಿರುವ(Death) ಘಟನೆ ನಡೆದಿದೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಶಿವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಲ್ಲರಹಟ್ಟಿಯಲ್ಲಿ ಇಂದು ಬೆಳಿಗ್ಗೆ ಶಿವಪುರ ಗ್ರಾಮ ಪಂಚಾಯಿತಿ ಸದಸದ್ಯ ಕೃಷ್ಣಮೂರ್ತಿ (35) ವಿದ್ಯುತ್ ಸ್ಪರ್ಶಕ್ಕೆ ಬಲಿಯಾಗಿದ್ದಾರೆ.

ಶಿವಪುರ ಗ್ರಾಮಪಂಚಾಯಿತಿ ಹಾಲಿ ಸದಸ್ಯನಾಗಿದ್ದ
ದಾಳಿ ಕೃಷ್ಣಮೂರ್ತಿ ಇಂದು ಬೆಳಿಗ್ಗೆ ಮೋಟಾರ ಅಳವಡಿಸಿ ಪೈಪಿನಿಂದ ನೀರು ಬಿಡುವಾಗ ಆಕಸ್ಮಿಕ ವಿದ್ಯುತ್ ಸ್ಪರ್ಶದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತನು ಇಬ್ಬರು ಪತ್ನಿಯರು ಮತ್ತು ಇಬ್ಬರು ಮಕ್ಕಳು, ಅಪಾರ ಬಂಧು ಮಿತ್ರರು, ಗ್ರಾಮಪಂಚಾಯಿತಿ ಸದಸ್ಯರ ಬಳಗವನ್ನು ಅಗಲಿದ್ದಾರೆ. ಈತನ ಆಕಸ್ಮಿಕ ಸಾವಿಗೆ ಕೂಡ್ಲಿಗಿ ತಾಲೂಕಿನ ಗ್ರಾಮಪಂಚಾಯಿತಿ ಸದಸ್ಯರ ಒಕ್ಕೂಟದ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.

ಗ್ಯಾಸ್ ಸ್ಪೋಟಗೊಂಡು ಆಸ್ಪತ್ರೆ ಸೇರಿದ್ದ ವೃದ್ಧ ಚಿಕಿತ್ಸೆ ಫಲಿಸದೇ ಸಾವು
ಬೆಂಗಳೂರು: ಸಿಗರೇಟ್ ಹಚ್ಚಿಕೊಂಡು ಗ್ಯಾಸ್ ಆನ್ ಮಾಡಲು ಹೋಗಿ ಗ್ಯಾಸ್ ಸ್ಪೋಟಗೊಂಡು ಆಸ್ಪತ್ರೆ ಸೇರಿದ್ದ ವೃದ್ಧ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಇದೇ ತಿಂಗಳ 19 ರಂದು ನಡೆದಿದ್ದ ಘಟನೆಯಲ್ಲಿ ಮಹಮದ್ (64) ಸಾವನ್ನಪ್ಪಿದ್ದಾರೆ. ಚಂದ್ರಲೇಔಟ್ನ ನಿವಾಸದಲ್ಲಿದ್ದ ಮಹಮದ್ ವಾಸವಾಗಿದ್ದರು. ಟೀ ಮಾಡಲೆಂದು ಸಿಗರೇಟ್ ಹಚ್ಚಿಕೊಂಡು ಅಡುಗೆ ಮನೆಗೆ ತೆರಳಿದ್ದರು. ಈ ವೇಳೆ ಗ್ಯಾಸ್ ಆನ್ ಮಾಡಲು ಹೋದಾಗ ಘಟನೆ ನಡೆದಿತ್ತು. ಕೈನಲ್ಲಿದ್ದ ಸಿಗರೇಟ್ ಬೆಂಕಿ ಸಿಲಿಂಡರ್ ಗೆ ತಗುಲಿ ಸ್ಪೋಟಗೊಂಡಿತ್ತು. ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಇಂದು ಮೃತಪಟ್ಟಿದ್ದಾರೆ.

ಬಾವಿಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ನೀರುಪಾಲು
ಮೀನುಹಿಡಿಯಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ಬಾವಿಯಲ್ಲಿ ಮುಳುಗಿ ನೀರುಪಾಲಾಗಿರುವ ಘಟನೆ ಯಾದಗಿರಿ ನಗರದ ಅಮರ್ ಲೇಔಟ್ನಲ್ಲಿ ನಡೆದಿದೆ. ನಕುಲ್(11), ನಿಹಾಲ್ ಸಿಂಗ್(11) ನೀರುಪಾಲಾದವರು. ಶಾಲೆಗೆ ಬಂಕ್ ಹಾಕಿ ನಾಲ್ವರು ಸ್ನೇಹಿತರು ಮೀನು ಹಿಡಿಯಲು ಬಂದಿದ್ರು. ನಾಲ್ವರಲ್ಲಿ ಇಬ್ಬರು ನೀರಿನಲ್ಲಿ ಇಳಿದು ಮೀನು ಹಿಡಿಯಲು ಮುಂದಾಗಿದ್ದು ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ: ಪಾರ್ವತಮ್ಮ, ಪುನೀತ್ ಹೆಸರಲ್ಲಿ 2 ಬಂಗಾರದ ಪದಕ ಘೋಷಿಸಿದ ಅಶ್ವಿನಿ; ‘ದೊಡ್ಮನೆ ಯಾವತ್ತಿಗೂ ದೊಡ್ಮನೆ’ ಎಂದ ಅಭಿಮಾನಿಗಳು

ಹೆಬ್ಬಾಳ ಬಸ್ ಅಪಘಾತ: ನನ್ನಕ್ಕನ ಸಾವಿಗೆ ಕಾರಣರಾದವರಿಗೆ ಶಿಕ್ಷೆಯಾಗಲೇಬೇಕು ಅನ್ನುತ್ತಾಳೆ ಅಕ್ಷಯ ತಂಗಿ ಸಂಧ್ಯಾ

Published On - 4:11 pm, Tue, 22 March 22