Shivratri 2023: ನಾಡಿನೆಲ್ಲೆಡೆ ಶಿವ ಜಪ, ದೇವಾಲಯಗಳಲ್ಲಿ ಭಕ್ತ ಸಾಗರ

ಆಡಂಬರಗಳಿಂದ ಮುಕ್ತನಾಗಿ ಹಾವನ್ನೇ ಆಭರಣವಾಗಿ ತೊಟ್ಟು, ಭಸ್ಮ ಬಳಿದುಕೊಂಡು, ಹುಲಿ ಚರ್ಮವನ್ನು ಉಟ್ಟು, ಸ್ಮಶಾನದಲ್ಲಿ ವಾಸಿಸುವ ಸರಳ ಮತ್ತು ಅಮೋಘ ಶಕ್ತಿಯ ಭೋಲೇಶಂಕರನಿಗೆ ಇಂದು ಭಕ್ತರು ನಾನಾ ರೀತಿಯಲ್ಲಿ ಪೂಜಿಸಿ ಅವನ ಕೃಪೆಗೆ ಪಾತ್ರರಾಗುತ್ತಾರೆ.

Follow us
ಆಯೇಷಾ ಬಾನು
|

Updated on:Feb 18, 2023 | 9:10 AM

ಬೆಂಗಳೂರು: ಮಾಘ ಮಾಸ ಕೃಷ್ಣ ಪಕ್ಷದ ಚತುರ್ದಶಿಯಂದು ಬರುವ ಮಹಾಶಿವರಾತ್ರಿ(Shivratri 2023) ಪರಮೇಶ್ವರನ ಆರಾಧನೆಗೆ ಅತ್ಯಂತ ವಿಶೇಷ. ಹೀಗಾಗಿ ಇಂದು ರಾಜ್ಯದೆಲ್ಲೆಡೆ ಶಿವನ ಆರಾಧನೆ, ಪೂಜೆ ಜೋರಾಗಿದೆ. ಆಡಂಬರಗಳಿಂದ ಮುಕ್ತನಾಗಿ ಹಾವನ್ನೇ ಆಭರಣವಾಗಿ ತೊಟ್ಟು, ಭಸ್ಮ ಬಳಿದುಕೊಂಡು, ಹುಲಿ ಚರ್ಮವನ್ನು ಉಟ್ಟು, ಸ್ಮಶಾನದಲ್ಲಿ ವಾಸಿಸುವ ಸರಳ ಮತ್ತು ಅಮೋಘ ಶಕ್ತಿಯ ಭೋಲೇಶಂಕರನಿಗೆ ಇಂದು ಭಕ್ತರು ನಾನಾ ರೀತಿಯಲ್ಲಿ ಪೂಜಿಸಿ ಅವನ ಕೃಪೆಗೆ ಪಾತ್ರರಾಗುತ್ತಾರೆ.

ಬೆಂಗಳೂರಿನ ದೇವಾಲಯಗಳಲ್ಲಿ ಶಿವನ ಆರಾಧನ

ಶಿವರಾತ್ರಿ ಹಬ್ಬ ಹಿನ್ನೆಲೆ ಬೆಂಗಳೂರಿನ ಶಿವನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಮಲ್ಲೇಶ್ವರಂನ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ಹಾಗೂ ಬಸವನಗುಡಿಯಲ್ಲಿರುವ ಗವಿಗಂಗಾಧರ ದೇಗುಲದಲ್ಲಿ ಇಂದು ತಡರಾತ್ರಿವರೆಗೂ ಪೂಜಾ ಕೈಂಕರ್ಯಗಳು ನಡೆಯಲಿವೆ. ದೇವಸ್ಥಾನಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆ ನಗರದ ದೇವಸ್ಥಾನಗಳ ಸುತ್ತಮುತ್ತ ಬ್ಯಾರಿಕೇಡ್ ಅವಳಡಿಸಲಾಗಿದೆ. ದೇವಸ್ಥಾನಗಳಲ್ಲಿ ವಿಶೇಷ ಅರ್ಚನೆ, ಪೂಜೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತಾಧಿಗಳಿಗೆ ಪ್ರಸಾದ ವಿತರಣೆ ಮಾಡಲಾಗುತ್ತೆ. ರಾತ್ರಿ 8ಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿದೆ. ದೇವಾಲಯವನ್ನು ಹೂವುಗಳಿಂದ ಅಲಂಕಾರ ಮಾಡಲಾಗಿದೆ. ಹಾಗೂ ದೇವರಿಗೆ ವಿಶೇಷವಾಗಿ ಸಿದ್ದಗೊಳಿಸಲಾಗಿದ್ದು ಬೆಳಗ್ಗೆ 4 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಭಕ್ತರು ದರ್ಶನ ಪಡೆಯುತ್ತಿದ್ದಾರೆ.

ಸಾಂಸ್ಕೃತಿಕ ನಗರಿಯಲ್ಲಿ ಶಿವ ರಾತ್ರಿ

ಮೈಸೂರು ಅರಮನೆ ಆವರಣದಲ್ಲಿರುವ ತ್ರಿನೇಶ್ವರ ದೇಗುಲದಲ್ಲಿ ಮೂಲ ಶಿವಲಿಂಗಕ್ಕೆ ಚಿನ್ನದ ಮುಖವಾಡ ಧಾರಣೆ ಮಾಡಲಾಗಿದೆ. ಶಿವ ಲಿಂಗಕ್ಕೆ 11 ಕೆಜಿ ತೂಕದ ಚಿನ್ನದ ಮುಖವಾಡ ಧಾರಣೆ ಮಾಡಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಜನಿಸಿದ ಹಿನ್ನೆಲೆ ಜಯಚಾಮರಾಜೇಂದ್ರ ಒಡೆಯರ್ ಅವರು ಈ ಚಿನ್ನದ ಮುಖವಾಡ ಕೊಡುಗೆಯಾಗಿ ನೀಡಿದ್ದರು. ಪ್ರತಿ ವರ್ಷವೂ ಮಹಾ ಶಿವರಾತ್ರಿಯ ದಿನದಂದು ಚಿನ್ನದ ಮುಖವಾಡ ಧಾರಣೆ ಮಾಡಲಾಗುತ್ತೆ. ನಾಳೆ ಭಾನುವಾರ ಸರ್ಕಾರಿ ರಜೆ ಇರುವುದರಿಂದ ನಾಳೆಯೂ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಬೆಳಗ್ಗೆಯಿಂದಲೂ ವಿಶೇಷ ಚಿನ್ನದ ಮುಖವಾಡ ನೋಡಲು ಭಕ್ತರು ಆಗಮಿಸಿದ್ದಾರೆ.

ಯಾದಗಿರಿ ಆತ್ಮಲಿಂಗ ದೇವಸ್ಥಾನದಲ್ಲಿ ಭರ್ಜರಿ ಸಿದ್ಧತೆ

‌ಶಿವರಾತ್ರಿ ಹಿನ್ನಲೆ ಯಾದಗಿರಿ ನಗರದ ಆತ್ಮಲಿಂಗ ದೇವಸ್ಥಾನದಲ್ಲಿ ವಿಶೇಷ ಪೂಜೆ, ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆನೇ ಭಕ್ತರ ದಂಡು ದೇವಸ್ಥಾನಕ್ಕೆ ಹರಿದು ಬರುತ್ತಿದೆ. ಇನ್ನು ಸಂಜೆ ವೇಳೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈಶ್ವರನ ದರ್ಶನ ಪಡೆಯುವ ಸಾಧ್ಯತೆ ಇದೆ. ಇದೆ ಕಾರಣಕ್ಕ ದೇವಸ್ಥಾನದಲ್ಲಿ ಸಾಕಷ್ಟು ಸಿದ್ದತೆ ಮಾಡಿಕೊಳ್ಳಲಾಗಿದೆ. ದೇವಸ್ಥಾನದ ಸುತ್ತಲೂ ಕಲರ್ ಫುಲ್ ಲೈಟಿಂಗ್ ಗಳನ್ನ ಅಳವಡಿಸಲಾಗಿದೆ. ಸಂಜೆ ದೇವಸ್ಥಾನದ ಆವರಣದಲ್ಲಿ ಶಿವನ ಬಗ್ಗೆ ಈಶ್ವರಿ ಬ್ರಹ್ಮಕುಮಾರಿ ಸಂಸ್ಥೆಯಿಂದ ಪ್ರವಚನ ನಡೆಯಲಿದೆ.

ಇದನ್ನೂ ಓದಿ: Isha Maha shivratri 2023: ಶನಿವಾರ ಈಶ ಮಹಾಶಿವರಾತ್ರಿ ಆಚರಣೆ, ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗಿ- ಕಾರ್ಯಕ್ರಮದ ವಿವರ ಇಲ್ಲಿದೆ

ಕೋಲಾರದಲ್ಲಿ ಶಿವ ಸ್ಮರಣೆ

ಮಹಾಶಿವರಾತ್ರಿ ಹಿನ್ನೆಲೆ ಕೋಲಾರ ತಾಲೂಕು ಕೋರಗೊಂಡನಹಳ್ಳಿ ಗ್ರಾಮದ ಕಾಶಿವಿಶ್ವೇಶ್ವರಸ್ವಾಮಿ ದೇವಾಲಯದಲ್ಲಿ ಚಮತ್ಕಾರ ನಡೆಯುತ್ತದೆ, ಬೆಳಿಗ್ಗೆ ಕಾಶಿವಿಶ್ವೇಶ್ವರ ಸ್ವಾಮಿ ದೇವಾಲಯಕ್ಕೆ ರುದ್ರಾಭಿಷೇಕ ಮಾಡುವ ಸಂಧರ್ಭದಲ್ಲಿ ಸೂರ್ಯರಶ್ಮಿಗಳು ಶಿವಲಿಂಗವನ್ನು ಸ್ಪರ್ಶಿಸುವ ಚಮತ್ಕಾರ ನಡೆಯುತ್ತದೆ, ಸುಮಾರು 900 ವರ್ಷಗಳ ಇತಿಹಾಸ ಹೊಂದಿರುವ ಈ ದೇವಾಲಯವನ್ನು ಇತ್ತೀಚಿಗೆ ಜೀರ್ಣೋದ್ಧಾರ ಮಾಡಲಾಗಿದ್ದು, ಕಾಶಿವಿಶ್ವೇಶ್ವರ ಸ್ವಾಮಿಯ ದರ್ಶನಕ್ಕೆ ನೂರಾರು ಸಂಖ್ಯೆಯ ಭಕ್ತರು ದೇವಾಲಯಕ್ಕೆ ಆಗಮಿಸಿದ್ದಾರೆ. ಮಹಾಶಿವರಾತ್ರಿಯ ಜಾಗರಣೆಗೆ ವಿವಿದ ಸಾಂಸ್ಕೃತಿಕ ಕಾರ್ಯಕ್ರಗಳನ್ನು ದೇವಾಲಯದ ಆಡಳಿತ ಮಂಡಳಿ ಆಯೋಜನೆ ಮಾಡಿದೆ. ಇನ್ನು ಕೋಲಾರದ ಪ್ರಸಿದ್ದ ಸ್ಥಳಗಳಾದ ಅಂತರಗಂಗೆ, ವಕ್ಕಲೇರಿ ಮಾರ್ಕಂಡೇಶ್ವರ ಸ್ವಾಮಿಯ ದೇವಾಲಯ ಹಾಗೂ ಮಾರ್ಕಂಡೇಶ್ವರ ಸ್ವಾಮಿಯ ಬೆಟ್ಟ, ಕೋಟಿಲಿಂಗೇಶ್ವರ ಕ್ಷೇತ್ರಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಕೋಲಾರದ ಬಹುತೇಕ ಪುಣ್ಯ ಕ್ಷೇತ್ರಗಳು ಭಕ್ತರಿಂದ ತುಂಬಿ ಹೋಗಿವೆ.

ಮಾದಪ್ಪನ ದರ್ಶನ ಮಾಡಿ ಪುನೀತರಾದ ಭಕ್ತರು

ಚಾಮರಾಜನಗರದ ಮಲೈಮಹದೇಶ್ವರ ಬೆಟ್ಟಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ. ಮಲೈ ಮಹದೇಶ್ವರ ದೇವಾಲಯದಲ್ಲಿ ಹಿಂದಿನಿಂದ ಒಂದು ವಾರಗಳ ಕಾಲ ವಿಶೇಷ ಪೂಜೆ ಮೂಲಕ ಶಿವರಾತ್ರಿ ಜಾತ್ರಾ ಮಹೋತ್ಸವ ಜರುಗಲಿದೆ. ಈಗಾಗಲೇ ಕಾಲ್ನಡಿಗೆ ಹಾಗೂ ವಾಹನದ ಮೂಲಕ ಲಕ್ಷಾಂತರ ಭಕ್ತರು ಆಗಮಿಸಿದ್ದು ಜನ ಸಾಗರವೇ ಕಂಡು ಬಂದಿದೆ. ಪ್ರತಿವರ್ಷ ಶಿವರಾತ್ರಿ ಸಮಯದಲ್ಲಿ‌ ಪಾದಯಾತ್ರೆ ಮೂಲಕ ಲಕ್ಷಾಂತರ ಭಕ್ತರು‌ ಆಗಮಿಸಿ ಮಾದಪ್ಪನ ದರ್ಶನ ಪಡೆಯುತ್ತಾರೆ. ಮಲೈಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡಲು ಲಕ್ಷಾಂತರ ಲಾಡುಗಳನ್ನು ತಯಾರಿಸಲಾಗಿದೆ.

112 ಅಡಿಗಳ ಆದಿಯೋಗಿ ಮುಂದೆ ಶಿವರಾತ್ರಿ

ಚಿಕ್ಕಬಳ್ಳಾಪುರ ತಾಲೂಕಿನ ಅವಲಗುರ್ಕಿ ಗ್ರಾಮದ ಬಳಿ ಹೊಸದಾಗಿ ನಿರ್ಮಾಣ ಮಾಡಿರುವ 112 ಅಡಿಗಳ ಆದಿಯೋಗಿ ಪ್ರತಿಮೆಯ ಮುಂದೆ ಶಿವರಾತ್ರಿ ಸಂಭ್ರಮಾಚರಣೆ ಜೋರಾಗಿದೆ. ಶಿವರಾತ್ರಿ ಪ್ರಯುಕ್ತ ಆದಿಯೋಗಿಗೆ ಮಣ್ಣಿನ ದೀಪದ ಆರತಿ, ಯೋಗೇಶ್ವರ ಲಿಂಗಕ್ಕೆ ಅಭಿಷೇಕ ಸೇರಿದಂತೆ ನಾಗಪೂಜೆಯಲ್ಲಿ ಭಕ್ತರು ಭಾಗಿಯಾಗಬಹುದಾಗಿದ್ದು ಬೆಳಿಗ್ಗೆಯಿಂದಲೆ ಪೂಜೆ ಪುನಸ್ಕಾರಗಳು ಆರಂಭವಾಗಿವೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ 

Published On - 7:26 am, Sat, 18 February 23

ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಬೇಕರಿ ಮಾಲೀಕ ಹೇಳುವಂತೆ ಕೇಕ್ ಕಟ್ ಮಾಡುವ ಕ್ರೇಜ್ ಕಡಿಮೆಯಾಗಿದೆ!
ಬೇಕರಿ ಮಾಲೀಕ ಹೇಳುವಂತೆ ಕೇಕ್ ಕಟ್ ಮಾಡುವ ಕ್ರೇಜ್ ಕಡಿಮೆಯಾಗಿದೆ!
ಮೈಸೂರು; ಹುಚ್ಚು ಸಾಹಸಗಳನ್ನು ಸೆರೆಹಿಡಿಯಲು ಸಿಸಿಟಿವಿ ಕೆಮೆರಾಗಳು: ಡಿಸಿಪಿ
ಮೈಸೂರು; ಹುಚ್ಚು ಸಾಹಸಗಳನ್ನು ಸೆರೆಹಿಡಿಯಲು ಸಿಸಿಟಿವಿ ಕೆಮೆರಾಗಳು: ಡಿಸಿಪಿ
ಮರಳಿನಲ್ಲಿ ಸಿಲುಕಿಕೊಂಡ ಫೆರಾರಿ ಕಾರು; ರಸ್ತೆಗೆ ಎಳೆದು ತಂದ ಎತ್ತಿನ ಗಾಡಿ
ಮರಳಿನಲ್ಲಿ ಸಿಲುಕಿಕೊಂಡ ಫೆರಾರಿ ಕಾರು; ರಸ್ತೆಗೆ ಎಳೆದು ತಂದ ಎತ್ತಿನ ಗಾಡಿ