ಐಪಿಎಸ್ ಸೇರಿದಂತೆ ನಿವೃತ್ತ ಅಧಿಕಾರಿಗಳಿಗೆ ಶಾಕ್: ಮನೆಯಲ್ಲಿ ಕೆಲಸ‌ ಮಾಡಿತ್ತಿದ್ದ ಸಿಬ್ಬಂದಿ ವಾಪಸ್

| Updated By: ಗಂಗಾಧರ​ ಬ. ಸಾಬೋಜಿ

Updated on: Dec 22, 2023 | 7:07 PM

ನಿವೃತ್ತಿ ಆದರೂ ತಮ್ಮ ಮನೆಯಲ್ಲಿ ಬೇಕಾಬಿಟ್ಟಿ ಕೆಲಸಕೆ ಬಳಿಸಿಕೊಳ್ಳಲಾಗುತ್ತಿದ್ದ ಸಿಬ್ಬಂದಿಗಳ ವಾಪಸ್​ಗೆ ಸರ್ಕಾರ ಸೂಚನೆ ನೀಡಿದೆ. ಆ ಮೂಲಕ ಐಪಿಎಸ್ ಅಧಿಕಾರಿಗಳು ಸೇರಿದಂತೆ ನಿವೃತ್ತ ಅಧಿಕಾರಿಗಳಿಗೆ ಶಾಕ್ ನೀಡಲಾಗಿದೆ. ಐಪಿಎಸ್ ಅಧಿಕಾರಿಗಳು ನಿವೃತ್ತಿ ಹೊಂದಿದ್ದರು ಸಹ ತಮ್ಮ ಮನೆಯಲ್ಲಿ ಕೆಎಸ್ಆರ್​ಪಿ ಸಿಬ್ಬಂದಿಗಳನ್ನು ಬಳಸಿಕೊಂಡು ಕೆಲಸ ಮಾಡಿಸುತ್ತಿದ್ದರು. ಇದರಿಂದ ಸಾಕಷ್ಟು ಆರೋಪಗಳು, ಟೀಕೆಗಳು ಕೇಳಿ ಬರುತ್ತಿದ್ದವು.

ಐಪಿಎಸ್ ಸೇರಿದಂತೆ ನಿವೃತ್ತ ಅಧಿಕಾರಿಗಳಿಗೆ ಶಾಕ್: ಮನೆಯಲ್ಲಿ ಕೆಲಸ‌ ಮಾಡಿತ್ತಿದ್ದ ಸಿಬ್ಬಂದಿ ವಾಪಸ್
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು, ಡಿಸೆಂಬರ್​​ 22: ನಿವೃತ್ತಿ ಆದರೂ ತಮ್ಮ ಮನೆಯಲ್ಲಿ ಬೇಕಾಬಿಟ್ಟಿ ಕೆಲಸಕ್ಕೆ ಸಿಬ್ಬಂದಿಗಳನ್ನು ಬಳಕೆ ಮಾಡುತ್ತಿದ್ದ ಅಧಿಕಾರಿಗಳಿಗೆ ಸರ್ಕಾರದಿಂದ ಖಡಕ್ ಸೂಚನೆ ನೀಡಲಾಗಿದೆ. ನಿವೃತ್ತ ಐಪಿಎಸ್ (IPS) ಅಧಿಕಾರಿಗಳ ಮನೆಯಲ್ಲಿ ಕೆಲಸ‌ ಮಾಡಿತ್ತಿದ್ದ ಸಿಬ್ಬಂದಿಗಳು ವಾಪಸ್​ಗೆ ಸರ್ಕಾರ ಸೂಚನೆ ನೀಡಿದೆ. ಆ ಮೂಲಕ ಐಪಿಎಸ್ ಅಧಿಕಾರಿಗಳು ಸೇರಿದಂತೆ ನಿವೃತ್ತ ಅಧಿಕಾರಿಗಳಿಗೆ ಶಾಕ್ ಉಂಟಾಗಿದೆ.

ಐಪಿಎಸ್ ಅಧಿಕಾರಿಗಳು ನಿವೃತ್ತಿ ಹೊಂದಿದ್ದರು ಸಹ ತಮ್ಮ ಮನೆಯಲ್ಲಿ ಕೆಎಸ್ಆರ್​ಪಿ ಸಿಬ್ಬಂದಿಗಳನ್ನು ಬಳಸಿಕೊಂಡು ಕೆಲಸ ಮಾಡಿಸುತ್ತಿದ್ದರು. ಇದರಿಂದ ಸಾಕಷ್ಟು ಆರೋಪಗಳು, ಟೀಕೆಗಳು ಕೇಳಿ ಬರುತ್ತಿದ್ದವು. ಹೀಗಾಗಿ ಸರ್ಕಾರದಿಂದ ಖಡಕ್ ಸೂಚನೆ ನೀಡಲಾಗಿದ್ದು, ತಕ್ಷಣದಿಂದ ಯಾರೊಬ್ಬ ನಿವೃತ್ತ ಐಪಿಎಸ್ ಅಧಿಕಾರಿಗಳ ಮನೆಯಲ್ಲಿ ಕೆಲಸ‌ ಮಾಡುತ್ತಿರುವವರು ವಾಪಸ್ ಬರುವಂತೆ ಸೂಚನೆ ನೀಡಲಾಗಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಂಪುಟ ಉಪ ಸಮಿತಿ ರಚನೆ: ಸಮಿತಿಯಲ್ಲಿ ಯಾರ್ಯಾರು ಇದ್ದಾರೆ?

ಇದರ ಜೊತೆಗೆ ನಿವೃತ್ತಿ ಹೊಂದಿದ್ದರು ಸಹ ಕೆಲಸ ಮಾಡಿಸುತ್ತಿದ್ದ ಬಗ್ಗೆ ವರದಿ ನೀಡಬೇಕು ಎಂದು ಹೇಳಲಾಗಿತ್ತು. ಸಿಎಂ ಸಿದ್ದರಾಮಯ್ಯರಿಗೆ ಈ ಬಗ್ಗೆ ಡಿಜಿ-ಐಜಿ ವರದಿ ನೀಡುವಂತೆ ಸೂಚನೆ ನೀಡಲಾಗಿತ್ತು.

ಇದನ್ನೂ ಓದಿ: ಹೊಸವರ್ಷಾಚರಣೆ ಸಂಬಂಧ ಗೃಹ ಸಚಿವ ಡಾ.ಪರಮೇಶ್ವರ್ ಸಭೆ; ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಸೂಚನೆ

ಅಧಿಕಾರಿಗಳ ಮನೆಯಲ್ಲಿ ಕೆಲಸ ಮಾಡುತ್ತಿರುವ ಪೊಲೀಸ್ ಇಲಾಖೆಯ ಸಿಬ್ಬಂದಿಗಳನ್ನು ಹಿಂಪಡೆದು ಒಂದು ವಾರದೊಳಗಾಗಿ ಡಿಜಿ ಮತ್ತು ಐಜಿಪಿ ಅವರಿಗೆ ವರದಿ ನೀಡುವಂತೆ ತಿಳಿಸಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:05 pm, Fri, 22 December 23