ಸಿದ್ದ (ಲೆಕ್ಕ) ರಾಮಯ್ಯ ದಾಖಲೆ ಬಜೆಟ್; ನಿರೀಕ್ಷೆಗಳೇನು? ಮಹತ್ವದ ಘೋಷಣೆಗಳ ಜೊತೆ ಮದ್ಯ ಪ್ರಿಯಕರಿಗೆ ಶಾಕ್?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ದಾಖಲೆಯ 15ನೇ ಬಜೆಟ್ ಮಂಡಿಸಲಿದ್ದಾರೆ. ಬೆಳಗ್ಗೆ 10:15ಕ್ಕೆ ಬಜೆಟ್ ಮಂಡಿಸಲಿರುವ ಸಿದ್ದರಾಮಯ್ಯ ಅವರು ಲೋಕಸಭಾ ಚುನಾವಣೆ ದೃಷ್ಟಿಯಲ್ಲಿ ಮಹತ್ವದ ಘೋಷಣೆಗಳನ್ನು ಮಾಡುವ ಸಾಧ್ಯತೆ ಇದೆ. ಆದರೆ, ಗ್ಯಾರಂಟಿ ಯೋಜನೆಗಳ ಜೊತೆಗೆ ಹೊಸ ಯೋಜನೆ ನೀಡುವ ದೊಡ್ಡ ಸವಾಲು ಸಿದ್ದರಾಮಯ್ಯ ಮುಂದೆ ಇದ್ದು, ಬಜೆಟ್ ಗಾತ್ರ ಮತ್ತು ಸಾಲದ ಹೊರೆ ಹೆಚ್ಚಾಗಲಿದೆ.
ಬೆಂಗಳೂರು, ಫೆ.16: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಇಂದು ದಾಖಲೆಯ 15ನೇ ಬಜೆಟ್ (Karnataka Budget 2024) ಮಂಡಿಸಲಿದ್ದಾರೆ. ಬೆಳಗ್ಗೆ 10:15ಕ್ಕೆ ಬಜೆಟ್ ಮಂಡಿಸಲಿರುವ ಸಿದ್ದರಾಮಯ್ಯ ಅವರು ಲೋಕಸಭಾ ಚುನಾವಣೆ ದೃಷ್ಟಿಯಲ್ಲಿ ಮಹತ್ವದ ಘೋಷಣೆಗಳನ್ನು ಮಾಡುವ ಸಾಧ್ಯತೆ ಇದೆ. ಆದರೆ, ಗ್ಯಾರಂಟಿ ಯೋಜನೆಗಳ (Guarantee Schemes) ಜೊತೆಗೆ ಹೊಸ ಯೋಜನೆ ನೀಡುವ ದೊಡ್ಡ ಸವಾಲು ಸಿದ್ದರಾಮಯ್ಯ ಮುಂದೆ ಇದ್ದು, ಬಜೆಟ್ ಗಾತ್ರ ಮತ್ತು ಸಾಲದ ಹೊರೆ ಹೆಚ್ಚಾಗಲಿದೆ.
ಸಿದ್ದರಾಮಯ್ಯ ಬಜೆಟ್ ನೀರಿಕ್ಷೆಗಳು
- 7ನೇ ವೇತನ ಆಯೋಗದ ವರದಿಯಲ್ಲಿನ ಕೆಲ ಅಂಶಗಳ ಘೋಷಣೆ ಸಾಧ್ಯತೆ
- ಮದ್ಯದ ಮೇಲಿನ ಸುಂಕ ಏರಿಕೆ ಸಾಧ್ಯತೆ
- ಅಲ್ಪಸಂಖ್ಯಾತರ ಅಭಿವೃದ್ದಿಗಾಗಿ ವಿಶೇಷ ಹಣ ಮೀಸಲು
- ಬೆಂಗಳೂರಿನಲ್ಲಿ ಟನಲ್ ನಿರ್ಮಾಣಕ್ಕೆ ಅನುದಾನ
- ನಮ್ಮ ಮೆಟ್ರೋ ಮಾರ್ಗ ವಿಸ್ತರಣೆ ಹೆಚ್ಚಿನ ಅನುದಾನ ಬಿಡುಗಡೆ ಸಾಧ್ಯತೆ
- ಮೇಕೆದಾಟು ಯೋಜನೆಗೆ ಹಣ ಘೋಷಣೆ ಸಾಧ್ಯತೆ
- 100 ಕೋಟಿ ರೂಪಾಯಿ ವೆಚ್ಚದಲ್ಲಿ ದೇವಸ್ಥಾನಗಳ ಅಭಿವೃದ್ಧಿ ಕಾರ್ಯ
- ಸುವರ್ಣ ಮಹೋತ್ಸವ ಹೆಸರಿನಲ್ಲಿ ಹಲವು ಅಭಿವೃದ್ಧಿ ಪೂರಕ ಯೋಜನಗಳು ತರುವ ಸಾಧ್ಯತೆ
- ಬೆಂಗಳೂರು ಅಥವಾ ಕಲಬುರಗಿಯಲ್ಲಿ ‘ವಚನ ಮಂಟಪ’ ಹಾಗೂ ‘ವಚನ ವಿಶ್ವವಿದ್ಯಾಲಯ’ ಸ್ಥಾಪನೆ
- ಚಿಕ್ಕೋಡಿ, ಗೋಕಾಕ್ ಸೇರಿದಂತೆ ಕೆಲ ನೂತನ ಜಿಲ್ಲಾ ಕೇಂದ್ರಗಳ ಘೋಷಣೆ
- ಇಂದಿರಾ ಕ್ಯಾಂಟೀನ್ಗಳನ್ನು ಜಿಲ್ಲಾ ಕೇಂದ್ರ , ತಾಲ್ಲೂಕಿನ ಕೇಂದ್ರಗಳಿಗೆ ವಿಸ್ತರಿಸುವ ಸಾಧ್ಯತೆ
- ಬಿಬಿಎಂಪಿ ಚುನಾವಣಾ ದೃಷ್ಟಿಯಿಂದ, ಬ್ರ್ಯಾಂಡ್ ಬೆಂಗಳೂರಿಗೆ ಹೆಚ್ಚು ಒತ್ತು
- 2006ಕ್ಕಿಂತ ಮುಂಚೆ ನೇಮಕಾತಿ ಆದೇಶವಾದ ಸರ್ಕಾರಿ ನೌಕಕರಿಗೆ OPS ಭಾಗ್ಯ
ಬಜೆಟ್ ಭಾಷಣದಲ್ಲೂ ಕೇಂದ್ರ ಸರ್ಕಾರದ ತೆರಿಗೆ ತಾರತಮ್ಯ ಬಗ್ಗೆ ಉಲ್ಲೇಖಿಸಲಿರುವ ಸಿದ್ದರಾಮಯ್ಯ, ತೆರಿಗೆ ತಾರತಮ್ಯದ ಅಂಕಿ ಅಂಶಗಳ ಗ್ರಾಫಿಕ್ ಸಿದ್ದಪಡಿಸಿಕೊಂಡಿದ್ದಾರೆ. ತೆರಿಗೆ ಹಣ ಎಲ್ಲಾ ಕೊಟ್ಟಿದ್ದೇವೆ ಎಂದು ಹೇಳುತ್ತಿರುವ ಕೇಂದ್ರ ಸರ್ಕಾರಕ್ಕೆ ತಮ್ಮ ಬಜೆಟ್ ಭಾಷಣದಲ್ಲಿ ತಿರುಗೇಟು ನೀಡಲಿದ್ದಾರೆ.
ಸಿದ್ದರಾಮಯ್ಯ ಮುಂದಿರುವ ಸವಾಲುಗಳೇನು?
ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ಸಿದ್ದರಾಮಯ್ಯ ಬಜೆಟ್ ಮಂಡನೆ ಸಾಕಷ್ಟು ಕೂತಹಲ ಮೂಡಿಸಿದೆ. ಐದು ಗ್ಯಾರಂಟಿ ಹಾಗೂ ಬರ ನಿರ್ವಹಣೆಗೆ ಹೆಚ್ಚಿನ ಹಣ ಹೊಂದಿಸುವ ಅನಿರ್ವಾಯತೆ ಇದೆ. ಸಾರ್ವಜನಿಕರಿಗೆ ಹೊರ ಹಾಕದೇ ಸಮತೋಲನ ಬಜೆಟ್ ಮಂಡಿಸುವ ಸವಾಲು ಸಿದ್ದರಾಮಯ್ಯ ಮುಂದಿದೆ.
ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ಬಾರಿ ಬಜೆಟ್ ಗಾತ್ರ ಹೆಚ್ಚಾಗಲಿದೆ. ಕಳೆದ ಬಾರಿ ಬಜೆಟ್ ಗಾತ್ರ 3 ಲಕ್ಷದ 27 ಸಾವಿರ ಕೋಟಿ ರೂಪಾಯಿ ಇತ್ತು. ಈ ವರ್ಷದ ಬಜೆಟ್ ಗಾತ್ರ 3 ಲಕ್ಷದ 50 ರಿಂದ 80 ಸಾವಿರ ಕೋಟಿ ರೂಪಾಯಿ ದಾಟುವ ಸಾಧ್ಯತೆ ಇದೆ. ಇನ್ನೂ ಸಾಲದ ಹೊರೆಯೂ ಈ ಬಾರಿ ಹೆಚ್ಚಳವಾಗಲಿದೆ. ರಾಜ್ಯದಲ್ಲಿ ಪ್ರತಿ ವರ್ಷವೂ ಬಜೆಟ್ ಗಾತ್ರದಂತೆ ಸಾಲದ ಹೊರೆಯೂ ಹೆಚ್ಚಳವಾಗುತ್ತಿದೆ. ಕಳೆದ ಬಾರಿ 85,815 ಕೋಟಿ ಸಾಲದ ಮೊರೆ ಹೋಗಿತ್ತು. ಈ ಬಾರಿ ಅಂದಾಜು 1 ಲಕ್ಷದ ಕೋಟಿಯವರೆಗೂ ಸಾಲ ಹೆಚ್ಚಳವಾಗುವ ಸಾಧ್ಯತೆ ಇದೆ.
ಈ ಬಾರಿ ಉಳಿತಾಯ ಬಜೆಟ್ (ಸರ್ ಪ್ಲಸ್) ಮಂಡನೆ ಮಾಡುವ ಸಾಧ್ಯತೆ ಇದೆ. ಕಳೆದ ಬಾರಿ ಆದಾಯ ಕೊರತೆಯ ಬಜೆಟ್ ಮಂಡಿಸಿದ್ದ ಸಿದ್ದರಾಮಯ್ಯ ಅವರಿಗೆ ಈ ಬಾರಿ ಐದು ಗ್ಯಾರಂಟಿ ಯೋಜನೆಗಳಿಗೆ 58 ಸಾವಿರ ಕೋಟಿ ಮೀಸಲು ಇಡಬೇಕಾದ ಅನಿವಾರ್ಯತೆ ಇದೆ. ಗ್ಯಾರಂಟಿ ಯೋಜನೆಗೆ ಇಷ್ಟು ದೊಡ್ಡ ಪ್ರಮಾಣದ ಹಣ ಮೀಸಲಿಡೋದೇ ದೊಡ್ಡ ಸವಾಲಾಗಿದೆ.
ಬರ ನಿರ್ವಹಣೆಗೆ ಹೆಚ್ಚಿನ ಒತ್ತು
ಈ ಬಾರಿಯ ಬಜೆಟ್‌ನಲ್ಲಿ ಬರ ನಿರ್ವಣೆಗೆ ಹೆಚ್ಚಿನ ಅನುದಾನ ಮೀಸಲಿಡುವ ಸಾಧ್ಯತೆ ಇದೆ. ಕೇಂದ್ರದಿಂದ ಇನ್ನೂ ಬರ ಪರಿಹರ ಹಣ ಬಿಡುಗಡೆ ಆಗಿಲ್ಲ. ಮುಂದಿನ ಮುಂಗಾರು ತನಕ ಬರ ನಿರ್ವಹಣೆ ಮಾಡಬೇಕಾದ ಸಂದಿಗ್ಧ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರವಿದೆ. ಹೀಗಾಗಿ ಬರ ನಿರ್ವಹಣೆಗಾಗಿ ಹೆಚ್ಚಿನ ಅನುದಾನ ಮೀಸಲಿಡಬೇಕಿದೆ. ಅದರಲ್ಲಿ ಕುಡಿಯುವ ನೀರು ಮತ್ತು ಜಾನುವಾರುಗಳ ಮೇವಿಗಾಗಿ ಹೆಚ್ಚಿನ ಒತ್ತು ನೀಡುವ ಸಾಧ್ಯತೆ ಇದೆ.
ತೆರಿಗೆ ಹೆಚ್ಚಳವಾಗುತ್ತಾ?
ಗ್ಯಾರಂಟಿ ಯೋಜನೆಗಾಗಿ ಸಂಪನ್ಮೂಲಗಳ ಕೃಡೀಕರಣಕ್ಕಾಗಿ ಕೆಲವು ವಿಭಾಗದಲ್ಲಿ ತೆರಿಗೆ ಹೆಚ್ಚಳ ಮಾಡುತ್ತಾರೆ ಎನ್ನಲಾಗಿದೆ. ಆದರೆ ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ತೆರಿಗೆ ಹೆಚ್ಚಳ ಮಾಡಿದರೆ ಹೇಗೆ ಎಂಬ ಭಯ ಸರ್ಕಾರಕ್ಕೆ ಇದೆ. ಹೀಗಾಗಿ ತೆರಿಗೆ ಹೆಚ್ಚಳ ಮಾಡದೇ ಬಜೆಟ್ ಮಂಡಿಸುವ ಸವಾಲು ಸಿದ್ದರಾಮಯ್ಯ ಅವರ ಮುಂದಿದೆ.
ಮದ್ಯದ ಮೇಲಿನ ಸುಂಕ ಹೆಚ್ಚಳ
ಬಜೆಟ್‌ನಲ್ಲಿ ಮದ್ಯದ ಮೇಲಿನ ಸುಂಕವನ್ನು ಹೆಚ್ಚಳ ಮಾಡುವ ಸಾಧ್ಯತೆ ಇದೆ. ಆ ಮೂಲಕ ಆದಾಯ ಕ್ರೋಢೀಕರಣಕ್ಕೆ ಸಿದ್ದರಾಮಯ್ಯ ಕ್ರಮಕೈಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ ರಾಜ್ಯದಲ್ಲಿ ಹಲವು ಬಾರಿ ಮದ್ಯದ ದರ ಏರಿಕೆ ಮಾಡಲಾಗಿದ್ದು, ಕಳೆದ ಬಜೆಟ್‌ನಲ್ಲಿ ಹಾರ್ಡ್ ಲಿಕ್ಕರ್ ಬೆಲೆ ಶೇ.20ರಷ್ಟು ಏರಿಕೆಯಾಗಿತ್ತು. ಕಳೆದ ಬಜೆಟ್‌ನಲ್ಲಿ ಬಿಯರ್ ಸುಂಕ ಶೇ.185ಕ್ಕೆ ಏರಿಕೆ ಆಗಿತ್ತು. ಈ ಬಾರಿಯೂ ಬಜೆಟ್‌ನಲ್ಲಿ ಮದ್ಯದ ಸುಂಕ ಹೆಚ್ಚಳ ಸಾಧ್ಯತೆ ಇದೆ.
ಬಜೆಟ್ ಮೇಲೆ ಬಿಬಿಎಂಪಿ ನಿರೀಕ್ಷೆ
ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿರುವ ಬಿಬಿಎಂಪಿ 8050 ಕೋಟಿ ರೂ. ಅನುದಾನದ ಪ್ರಸ್ತಾವನೆಗೆ ಒಪ್ಪಿಗೆ ಸಿಗುವ ನಿರೀಕ್ಷೆಯಲ್ಲಿದೆ. ಪ್ರಮುಖ ಜಂಕ್ಷನ್‌ಗಳಲ್ಲಿ ಸುರಂಗ ಮಾರ್ಗಕ್ಕೆ ಅನುದಾನ ಸಿಗುವ ನಿರೀಕ್ಷೆ ಇಡಲಾಗಿದ್ದು, ಮೊದಲ ಹಂತದಲ್ಲಿ 3 ಕಿ.ಮೀ. ಸುರಂಗ ಮಾರ್ಗಕ್ಕೆ ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಈ ಸುರಂಗ ಮಾರ್ಗಗಳ ನಿರ್ಮಾಣಕ್ಕೆ 1,500 ಕೋಟಿ ರೂ. ಸಿಗುವ ನಿರೀಕ್ಷೆ ಇದೆ.
ಇದನ್ನೂ ಓದಿ: Karnataka Budget 2024 Date: ಕರ್ನಾಟಕ ಬಜೆಟ್ ಯಾವಾಗ, ಸಮಯ? ಗಾತ್ರ ಎಷ್ಟು? ಎಲ್ಲಿ ಲೈವ್ ವೀಕ್ಷಿಸಬಹುದು? ಇಲ್ಲಿದೆ ವಿವರ
ಅಲ್ಲದೆ, ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ 200 ರೂ. ಕೋಟಿ, ಘನತ್ಯಾಜ್ಯ ನಿರ್ವಹಣೆಗೆ ₹600 ಕೋಟಿ ಪ್ರಸ್ತಾವನೆಗೆ ಒಪ್ಪಿಗೆ, ರಾಜಕಾಲುವೆ ಬಫರ್ ಝೋನ್ ಸುಗಮ ಸಂಚಾರಕ್ಕೆ ಬಳಕೆ, ಸುಗಮ ಸಂಚಾರಕ್ಕೆ 200 ಕೋಟಿ ರೂಪಾಯಿ ಅನುದಾನ, 75 ಸಂಚಾರ ದಟ್ಟಣೆ ಜಂಕ್ಷನ್‌ಗಳ ಅಭಿವೃದ್ಧಿಗೆ 100 ಕೋಟಿ ರೂ, ಪ್ರವಾಸಿತಾಣ ಅಭಿವೃದ್ಧಿಗೆ ಸ್ಕೈಡೆಕ್ ಗೋಪುರಕ್ಕೆ ಅನುದಾನ, ಬಿಬಿಎಂಪಿ ಶಾಲಾ-ಕಾಲೇಜುಗಳ ಅಭಿವೃದ್ಧಿಗೆ ಅನುದಾನ ಸಿಗುವ ನಿರೀಕ್ಷೆಯಲ್ಲಿದೆ.
BBMP ಚುನಾವಣೆ ದೃಷ್ಟಿಯಿಂದ ಬ್ರ್ಯಾಂಡ್ ಬೆಂಗಳೂರಿಗೆ ಒತ್ತು
ಬಿಬಿಎಂಪಿ ಚುನಾವಣೆ ದೃಷ್ಟಿಯಿಂದ ಬಜೆಟ್‌ನಲ್ಲಿ ಬ್ರ್ಯಾಂಡ್ ಬೆಂಗಳೂರಿಗೆ ಹೆಚ್ಚಿನ ಒತ್ತು ನೀಡುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಟನಲ್ ನಿರ್ಮಾಣಕ್ಕೆ ಅನುದಾನ, ಮೆಟ್ರೋ ಮಾರ್ಗ ವಿಸ್ತರಣೆಗೆ ಹೆಚ್ಚಿನ ಅನುದಾನ, ಬೆಂಗಳೂರಿನ ರಸ್ತೆಗಳು, ಫುಟ್‌ಪಾತ್ ಅಭಿವೃದ್ಧಿಗೆ ಅನುದಾನ ನೀಡುವ ನಿರೀಕ್ಷೆ ಇಡಲಾಗಿದೆ. ಅಲ್ಲದೆ, ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಬಗೆಹರಿಸುವ ಯೋಜನೆಗಳು ಜಾರಿ ಮಾಡುವುದು, ಬೆಂಗಳೂರಿನ ಪೆರಿಫೆರಲ್ ರಸ್ತೆ ನಿರ್ಮಾಣಕ್ಕೆ ಹಾಗೂ ಅರ್ಧಕ್ಕೆ ನಿಂತ ಕಾಮಗಾರಿಗಳ ಪುನಾರಂಭಕ್ಕೆ ಒತ್ತು ನೀಡುವ ಸಾಧ್ಯತೆ ಇದೆ.
ಬಜೆಟ್ ಗಾತ್ರ ಮತ್ತು ಸಾಲದ ಪ್ರಮಾಣದಲ್ಲಿ ಹೆಚ್ಚಳ
ಬಜೆಟ್ ಗಾತ್ರ ಮತ್ತು ಸಾಲದ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಕಳೆದ ಬಾರಿ ಬಜೆಟ್ ಗಾತ್ರ 3.27 ಲಕ್ಷ ಕೋಟಿ ರೂಪಾಯಿ ಇತ್ತು, ಈ ಬಾರಿ 3.50 ಲಕ್ಷ ಕೋಟಿ ರೂ. ಅಥವಾ 3.80 ಲಕ್ಷ ಕೋಟಿ ರೂ.ಗೆ ಹೆಚ್ಚಾಗುವ ಸಾಧ್ಯತೆ ಇದೆ. ಕಳೆದ ಬಜೆಟ್‌ನಲ್ಲಿ 85,815 ಕೋಟಿ ರೂ. ಸಾಲದ ಮೊರೆ ಹೋಗಿತ್ತು. ಈ ಬಾರಿ ಅಂದಾಜು 1 ಲಕ್ಷ ಕೋಟಿ ರೂ. ಸಾಲ ಹೆಚ್ಚಾಗುವ ಸಾಧ್ಯತೆ ಇದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:51 am, Fri, 16 February 24