ಐ ಆ್ಯಮ್​ ಟೋಟಲಿ ಫಿಟ್ -ಸಿದ್ದರಾಮಯ್ಯ

ಬೆಂಗಳೂರು: ಆಂಜಿಯೋಪ್ಲಾಸ್ಟಿ​ ಚಿಕಿತ್ಸೆ ಹಿನ್ನೆಲೆಯಲ್ಲಿ ಮಲ್ಲೇಶ್ವರಂನ ಖಾಸಗಿ ಆಸ್ಪತ್ರೆಯಲ್ಲಿ ಸಿದ್ದರಾಮಯ್ಯಗೆ ಚಿಕಿತ್ಸೆ ಮುಂದುವರೆದಿದೆ. ಈ ಸಂಬಂಧ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಾನು ಆರೋಗ್ಯವಾಗಿದ್ದೇನೆ, ನನಗೆ ಯಾವುದೇ ತೊಂದರೆ ಇಲ್ಲ. ನಾನು ಇವತ್ತೇ ದಿಸ್ಚಾರ್ಜ್​​ ಆಗಬೇಕು ಅಂದುಕೊಂಡಿದ್ದೆ. ಮನೆಗೆ ಹೋದ್ರೆ ಜನ ಜಾಸ್ತಿ ಬರಲು ಶುರು ಮಾಡುತ್ತಾರೆ, ಆದ್ದರಿಂದ ಇನ್ನೂ 2-3 ದಿನ ಆಸ್ಪತ್ರೆಯಲ್ಲಿ ಇರಬೇಕು ಎಂದರು. 19 ವರ್ಷಗಳ ಹಿಂದೆ 2 ರಕ್ತನಾಳಗಳು ಬ್ಲಾಕ್​ ಆಗಿದ್ದವು. ಹೀಗಾಗಿ ಆಗ ಸ್ಟೆಂಟ್​ ಹಾಕಿಸಿದ್ದೆ. ಬೇರೆಯವರಿಗೆಲ್ಲ ಐದಾರು ವರ್ಷಕ್ಕೆ ಮತ್ತೆ ಸಮಸ್ಯೆ […]

ಐ ಆ್ಯಮ್​ ಟೋಟಲಿ ಫಿಟ್ -ಸಿದ್ದರಾಮಯ್ಯ
ಸಾಧು ಶ್ರೀನಾಥ್​

Updated on: Dec 12, 2019 | 8:22 PM

ಬೆಂಗಳೂರು: ಆಂಜಿಯೋಪ್ಲಾಸ್ಟಿ​ ಚಿಕಿತ್ಸೆ ಹಿನ್ನೆಲೆಯಲ್ಲಿ ಮಲ್ಲೇಶ್ವರಂನ ಖಾಸಗಿ ಆಸ್ಪತ್ರೆಯಲ್ಲಿ ಸಿದ್ದರಾಮಯ್ಯಗೆ ಚಿಕಿತ್ಸೆ ಮುಂದುವರೆದಿದೆ. ಈ ಸಂಬಂಧ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಾನು ಆರೋಗ್ಯವಾಗಿದ್ದೇನೆ, ನನಗೆ ಯಾವುದೇ ತೊಂದರೆ ಇಲ್ಲ. ನಾನು ಇವತ್ತೇ ದಿಸ್ಚಾರ್ಜ್​​ ಆಗಬೇಕು ಅಂದುಕೊಂಡಿದ್ದೆ. ಮನೆಗೆ ಹೋದ್ರೆ ಜನ ಜಾಸ್ತಿ ಬರಲು ಶುರು ಮಾಡುತ್ತಾರೆ, ಆದ್ದರಿಂದ ಇನ್ನೂ 2-3 ದಿನ ಆಸ್ಪತ್ರೆಯಲ್ಲಿ ಇರಬೇಕು ಎಂದರು.

19 ವರ್ಷಗಳ ಹಿಂದೆ 2 ರಕ್ತನಾಳಗಳು ಬ್ಲಾಕ್​ ಆಗಿದ್ದವು. ಹೀಗಾಗಿ ಆಗ ಸ್ಟೆಂಟ್​ ಹಾಕಿಸಿದ್ದೆ. ಬೇರೆಯವರಿಗೆಲ್ಲ ಐದಾರು ವರ್ಷಕ್ಕೆ ಮತ್ತೆ ಸಮಸ್ಯೆ ಕಾಣಿಸಿಕೊಳ್ಳತ್ತೆ. ಆದ್ರೆ ನನಗೆ 19 ವರ್ಷ ಆದ್ರೂ ಯಾವುದೇ ಸಮಸ್ಯೆ ಆಗಿರಲಿಲ್ಲ. ಈಗ ನನಗೆ ಯಾವುದೇ ತೊಂದರೆ ಅಗಿಲ್ಲ. ನಾನು ಆರೋಗ್ಯವಾಗಿದ್ದೇನೆ, ಐ ಆ್ಯಮ್​ ಟೋಟಲಿ ಫಿಟ್. ಯಾರೂ ಈಗ ಆಸ್ಪತ್ರೆಗೆ ಬರಬೇಡಿ. ಮನೆಗೆ ಬಂದ ನಂತರ ಆರೋಗ್ಯ ವಿಚಾರಿಸುವುದಕ್ಕೆ ಬನ್ನಿ ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದ ಬಿಎಸ್​ವೈ:
ಸಿದ್ದರಾಮಯ್ಯಗೆ ಆಂಜಿಯೋಪ್ಲಾಸ್ಟಿ​ ಚಿಕಿತ್ಸೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ತೆರಳಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಪ್ರತಿಕ್ರಿಯಿಸಿದ ಬಿಎಸ್​ವೈ, 2-3 ದಿನ ಆಸ್ಪತ್ರೆಯಲ್ಲೇ ವಿಶ್ರಾಂತಿ ಪಡೆಯುವಂತೆ ವೈದ್ಯರ ಸೂಚಿಸಿದ್ದಾರೆ. ರಾಜಕಾರಣವೇ ಬೇರೆ, ಸ್ನೇಹವೇ ಬೇರೆ ಎಂದರು. ಈ ವೇಳೆ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಉಪಸ್ಥಿತರಿದ್ದರು.

Published On - 8:21 pm, Thu, 12 December 19

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us