ನಾನು ವಿದೇಶಕ್ಕೆ ಹೋದಾಗ ಅದರ ಬಾಗಿಲು ಮಾತ್ರ ನೋಡಿದ್ದೆ -ಸಿದ್ದರಾಮಯ್ಯರ ‘ಕ್ಯಾಸಿನೋ’ ಬಾತ್​

ನಾನು ವಿದೇಶಕ್ಕೆ ಹೋದಾಗ ಅದರ ಬಾಗಿಲು ಮಾತ್ರ ನೋಡಿದ್ದೆ -ಸಿದ್ದರಾಮಯ್ಯರ ‘ಕ್ಯಾಸಿನೋ’ ಬಾತ್​

[lazy-load-videos-and-sticky-control id=”P88lRiiFbmY”]

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಶಾಸಕ ಜಮೀರ್ ಹೆಸರು ಕೇಳಿಬಂದ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ರಾಜಕೀಯ ದುರುದ್ದೇಶದಿಂದ ತನಿಖೆಯನ್ನ ಮಾಡಬಾರದು. ಡ್ರಗ್ಸ್ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ಮಾಡಬೇಕು ಎಂದಿದ್ದಾರೆ.

ಡ್ರಗ್ಸ್ ಪ್ರಕರಣ ಈಗ ಬೆಳಕಿಗೆ ಬಂದಿರುವುದಲ್ಲ. ಬಹಳ ವರ್ಷಗಳಿಂದ ಇದೆ. ಡ್ರಗ್ಸ್ ಬಗ್ಗೆ ತನಿಖೆಯಾಗುತ್ತಿದೆ. ಹೀಗಾಗಿ, ಅದು ನಿಷ್ಪಕ್ಷಪಾತವಾಗಿ ಆಗಲಿ. ಸರ್ಕಾರದ ವೈಫಲ್ಯ ಮುಚ್ಚಿಹಾಕಲು ಇದನ್ನು ಮಾಡ್ತಿದ್ದಾರೆ ಎಂದು ಸಹ ಗುಡುಗಿದರು. ಜೊತೆಗೆ, ಜಮೀರ್ ಕೊಲಂಬೊಗೆ ಹೋಗುವುದು ಅಪರಾಧವಲ್ಲ. ಅವರು ಡ್ರಗ್ಸ್ ಜಾಲದಲ್ಲಿ ಇದ್ದಾರಾ, ಅದು ಗೊತ್ತಿದ್ಯಾ? ಎಂದು ಸಿದ್ದರಾಮಯ್ಯ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.

ಅವರು ಕ್ಯಾಸಿನೋಗೆ ಹೋಗಿದ್ರೋ ಇಲ್ವೋ ಗೊತ್ತಿಲ್ಲ. ನಾನು ವಿದೇಶಕ್ಕೆ ಹೋದಾಗ ಅದರ ಬಾಗಿಲು ಮಾತ್ರ ನೋಡಿದ್ದೆ. ಜಮೀರ್ ಈ ಜಾಲದಲ್ಲಿದ್ದಾರೆಂದು ಸಂಬರಗಿ ಏನಾದರೂ ಹೇಳಿದ್ದಾರಾ? ಅಂತಾ ಪ್ರಶ್ನಿಸಿದರು. ಡ್ರಗ್ಸ್ ದಂಧೆಯಲ್ಲಿ ಫಾಝಿಲ್ ಇದ್ದಾರೆಂದು ಹೇಳಿದ್ದಾರೆ. ಆದ್ದರಿಂದ ಶೇಖ್ ಫಾಝಿಲ್ ವಿರುದ್ಧ ಬೇಕಿದ್ದರೆ ಕ್ರಮ ಕೈಗೊಳ್ಳಲಿ ಅಂತಾ ಹೇಳಿದ್ದಾರೆ.

‘ಪ್ರಶಾಂತ್ ಸಂಬರಗಿ ಬಿಜೆಪಿ ನಾಯಕರ ಜೊತೆ ಇಲ್ವಾ?’
ಫೋಟೋಗಳಲ್ಲಿ ನನ್ನ ಜೊತೆಯೂ ಒಬ್ಬ ಕಳ್ಳ ಇರುತ್ತಾನೆ. ಹಾಗಂತ ನನ್ನನ್ನು ಕಳ್ಳ ಎಂದು ಹೇಳೋಕೆ ಆಗುತ್ತಾ? ಪ್ರಶಾಂತ್ ಸಂಬರಗಿ ಬಿಜೆಪಿ ನಾಯಕರ ಜೊತೆ ಇಲ್ವಾ? ಹಾಗಂತ ನಾವು ಅವರ ವಿರುದ್ಧ ಆರೋಪಿಸಲು ಆಗುತ್ತಾ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದರು.

ಶಾಸಕ ಜಮೀರ್ ಅಹ್ಮದ್ ನನ್ನನ್ನು ಭೇಟಿಯಾಗಿದ್ದರು. ಆಗ ಏನಪ್ಪಾ ನಿನ್ನ ಮೇಲೆ ಆರೋಪ ಎಂದು ಕೇಳಿದ್ದೇನೆ. ತನ್ನ ತಪ್ಪು ಏನೂ ಇಲ್ಲವೆಂದು ಅವರು ನನಗೆ ತಿಳಿಸಿದ್ದಾರೆ. ನೀವು ಸಂಬರಗಿ, ಜಮೀರ್ ಅವರನ್ನೇ ಕೇಳಿ. ಡ್ರಗ್ಸ್ ಜಾಲದಲ್ಲಿ ‌ಯಾರಿದ್ದಾರೆ ಅವರ ಮೇಲೆ ಕ್ರಮತೆಗೆದುಕೊಳ್ಳಲಿ. ಅದು ಬಿಟ್ಟು ರಾಜಕೀಯ ಉದ್ದೇಶದಿಂದ ತಪ್ಪು ಹೊರಿಸೋದು ಸರಿಯಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Click on your DTH Provider to Add TV9 Kannada