ಪಿತೃಪಕ್ಷದ ಪೂಜೆಗೆ ತೆರಳಿದ್ದ ವಕೀಲನ ಮನೆಗೆ ಕನ್ನ: ಚಿನ್ನಾಭರಣ, ಬೆಳ್ಳಿ ಹೊತ್ತೊಯ್ದ ಖದೀಮರು

ಪಿತೃಪಕ್ಷದ ಪೂಜೆಗೆ ತೆರಳಿದ್ದ ವಕೀಲನ ಮನೆಗೆ ಕನ್ನ: ಚಿನ್ನಾಭರಣ, ಬೆಳ್ಳಿ ಹೊತ್ತೊಯ್ದ ಖದೀಮರು

ಬೆಂಗಳೂರು ಗ್ರಾಮಾಂತರ: ಪಿತೃಪಕ್ಷದ ಪೂಜಾ ಕಾರ್ಯಕ್ಕೆ ತೆರಳಿದ್ದಾಗ ವಕೀಲನ ಮನೆ ಕಳ್ಳತನವಾಗಿರುವ ಘಟನೆ ಜಿಲ್ಲೆಯ ನೆಲಮಂಗಲದ ಸುಭಾಷ್ ನಗರದಲ್ಲಿ ನಡೆದಿದೆ.

ಸುಭಾಷ್​ನಗರದ ವಕೀಲ ಹನುಮಂತರಾಜು ಮನೆಯಲ್ಲಿ ಕೃತ್ಯ ನಡೆದಿದೆ. ಹನುಮಂತರಾಜು ಬೆಂಗಳೂರಿನಲ್ಲಿರುವ ತಮ್ಮ ಸಂಬಂಧಿಕರ ಮನೆಯಲ್ಲಿ ಪಿತೃಪಕ್ಷದ ಪೂಜಾ ಕಾರ್ಯ ಮುಗಿಸಿ ವಾಪಸ್ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ.

ಬಾಗಿಲು ಮೀಟಿದ್ದ ಕಳ್ಳರು ಮನೆಯಲ್ಲಿದ್ದ 200 ಗ್ರಾಂ ಚಿನ್ನಾಭರಣ, 1 ಕೆ.ಜಿ ಬೆಳ್ಳಿ ಹಾಗೂ 25 ಸಾವಿರ ರೂಪಾಯಿ ನಗದು ಕದ್ದು ಪರಾರಿಯಾಗಿದ್ದಾರೆ.  ಸ್ಥಳಕ್ಕಾಗಮಿಸಿದ ನೆಲಮಂಗಲ ನಗರ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Click on your DTH Provider to Add TV9 Kannada