KC ವ್ಯಾಲಿ ನೀರಿನಿಂದ ಮೈದುಂಬಿದ S. ಅಗ್ರಹಾರ ಕೆರೆ.. ಗಣ್ಯರಿಂದ ಬಾಗಿನ ಅರ್ಪಣೆ
[lazy-load-videos-and-sticky-control id=”UZmBj2YfFug”] ಕೋಲಾರ: ಜಿಲ್ಲೆಯ S.ಅಗ್ರಹಾರ ಕೆರೆ ತುಂಬಿ ಹರಿದ ಹಿನ್ನಲೆಯಲ್ಲಿ ಇಂದು ಗಣ್ಯರಿಂದ ಬಾಗಿನ ಅರ್ಪಣೆ ಮಾಡಲಾಯಿತು. ಜಿಲ್ಲೆಯ S.ಅಗ್ರಹಾರ ಕೆರೆಗೆ ಸಂಸದ ಎಸ್.ಮುನಿಸ್ವಾಮಿ, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಮಾಜಿ ಸಚಿವ ಕೃಷ್ಣ ಬೈರೇಗೌಡ, ಶಾಸಕ ಶ್ರೀನಿವಾಸಗೌಡ ಪಕ್ಷಾತೀತವಾಗಿ ಆಗಮಿಸಿ ಬಾಗಿನ ಅರ್ಪಿಸಿದ್ರು. ಇತ್ತೀಚೆಗೆ ಸುರಿದ ಮಳೆ ಹಾಗೂ ಸಿದ್ದರಾಮಯ್ಯರ ಸರ್ಕಾರದ ಅವಧಿಯ ವೇಳೆ ಶರವೇಗದಲ್ಲಿ ಪೂರ್ಣವಾಗಿದ್ದ KC ವ್ಯಾಲಿ ಯೋಜನೆಯನ್ನು ಹೈದರಾಬಾದ್ನ ಮೆಗಾ ಎಂಜಿನಿಯರಿಂಗ್ ಌಂಡ್ ಇನ್ಫ್ರಾಸ್ಟ್ರಕ್ಚರ್ ಕಂಪನಿ ಸವಾಲಾಗಿ ಸ್ವೀಕರಿಸಿ ಪೂರ್ಣಗೊಳಿಸಿತ್ತು. […]

[lazy-load-videos-and-sticky-control id=”UZmBj2YfFug”]
ಕೋಲಾರ: ಜಿಲ್ಲೆಯ S.ಅಗ್ರಹಾರ ಕೆರೆ ತುಂಬಿ ಹರಿದ ಹಿನ್ನಲೆಯಲ್ಲಿ ಇಂದು ಗಣ್ಯರಿಂದ ಬಾಗಿನ ಅರ್ಪಣೆ ಮಾಡಲಾಯಿತು.
ಜಿಲ್ಲೆಯ S.ಅಗ್ರಹಾರ ಕೆರೆಗೆ ಸಂಸದ ಎಸ್.ಮುನಿಸ್ವಾಮಿ, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಮಾಜಿ ಸಚಿವ ಕೃಷ್ಣ ಬೈರೇಗೌಡ, ಶಾಸಕ ಶ್ರೀನಿವಾಸಗೌಡ ಪಕ್ಷಾತೀತವಾಗಿ ಆಗಮಿಸಿ ಬಾಗಿನ ಅರ್ಪಿಸಿದ್ರು. ಇತ್ತೀಚೆಗೆ ಸುರಿದ ಮಳೆ ಹಾಗೂ ಸಿದ್ದರಾಮಯ್ಯರ ಸರ್ಕಾರದ ಅವಧಿಯ ವೇಳೆ ಶರವೇಗದಲ್ಲಿ ಪೂರ್ಣವಾಗಿದ್ದ KC ವ್ಯಾಲಿ ಯೋಜನೆಯನ್ನು ಹೈದರಾಬಾದ್ನ ಮೆಗಾ ಎಂಜಿನಿಯರಿಂಗ್ ಌಂಡ್ ಇನ್ಫ್ರಾಸ್ಟ್ರಕ್ಚರ್ ಕಂಪನಿ ಸವಾಲಾಗಿ ಸ್ವೀಕರಿಸಿ ಪೂರ್ಣಗೊಳಿಸಿತ್ತು.
ಅದರ ಪರಿಣಾಮ ಇಂದು KC ವ್ಯಾಲಿಯ ನೀರು ಜಿಲ್ಲೆಯ ಕೆರೆಗಳನ್ನು ತುಂಬಿಸಿದೆ. ಈ ಹಿನ್ನೆಲೆಯಲ್ಲಿ 1, 200 ಎಕರೆ ವಿಸ್ತೀರ್ಣದ ಜಿಲ್ಲೆಯ ಬಹು ದೊಡ್ಡಕೆರೆ ಎಂದೇ ಖ್ಯಾತಿ ಪಡೆದಿರುವ S.ಅಗ್ರಹಾರ ಕೆರೆಗೆ ಇಂದು ಬಾಗಿನ ಅರ್ಪಿಸಲಾಗಿದೆ. ಇದುವರೆಗೂ KC ವ್ಯಾಲಿ ಯೋಜನೆಯಿಂದ 75 ಕೆರೆಗಳು ತುಂಬಿದೆ. ಜೊತೆಗೆ, ಮೊದಲ ಹಂತದಲ್ಲಿ 126 ಕೆರೆ ಹಾಗೂ ಎರಡನೆ ಹಂತದಲ್ಲಿ 225 ಕೆರೆಗಳನ್ನ ತುಂಬಿಸುವ ಯೋಜನೆ ಹಾಕಿಕೊಳ್ಳಲಾಗಿದೆ.
Published On - 7:09 pm, Sun, 13 September 20