ಮಸ್ಕಿ ಉಪಚುನಾವಣೆಯಲ್ಲಿ ಬಿಜೆಪಿಯಿಂದ 50 ಕೋಟಿ ಖರ್ಚು: ಸಿದ್ದರಾಮಯ್ಯ ಗಂಭೀರ ಆರೋಪ

ಬಸನಗೌಡ ತುರವಿಹಾಳ ಬಹಳ ಒಳ್ಳೆಯ ಮನುಷ್ಯ. ಕಡಿಮೆ ಅಂತರದಿಂದ ಸೋತ ಹಿನ್ನೆಲೆ ಟಿಕೆಟ್ ಕೊಟ್ಟಿದ್ದೇವೆ. ತುರವಿಹಾಳಗೆ ಟಿಕೆಟ್ ನೀಡಬೇಕೆಂಬುದು ಜನರು ಕೂಡಾ ಒತ್ತಾಯ ಮಾಡಿದ್ದರು ಎಂದು ತಿಳಿಸಿದ ಸಿದ್ದರಾಮಯ್ಯ ನೀವು ನಮಗೆ ಮತ ನೀಡಬೇಕು ಎಂದರು.

ಮಸ್ಕಿ ಉಪಚುನಾವಣೆಯಲ್ಲಿ ಬಿಜೆಪಿಯಿಂದ 50 ಕೋಟಿ ಖರ್ಚು: ಸಿದ್ದರಾಮಯ್ಯ ಗಂಭೀರ ಆರೋಪ
ಕಾಂಗ್ರೆಸ್​ನಿಂದ ಚುನಾವಣಾ ಪ್ರಚಾರ
Follow us
sandhya thejappa
| Updated By: ganapathi bhat

Updated on: Apr 05, 2021 | 5:32 PM

ರಾಯಚೂರು: ಮಸ್ಕಿ ಉಪಚುನಾವಣೆಯಲ್ಲಿ ಬಿಜೆಪಿ ಸುಮಾರು 50 ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ರಾಯಚೂರಿನ ತುರವಿಹಾಳ ಗ್ರಾಮದಲ್ಲಿ ಕಾಂಗ್ರೆಸ್​ನಿಂದ ನಡೆದ ಬೃಹತ್ ಸಮಾವೇಶದಲ್ಲಿ ಗಂಭೀರ ಆರೋಪ ಮಾಡಿದ್ದಾರೆ. ಲೂಟಿ ಹೊಡೆದ ದುಡ್ಡನ್ನು ಬಿಜೆಪಿಯವರು ಖರ್ಚು ಮಾಡುತ್ತಿದ್ದಾರೆ. ಹಿಂದೆ ಪ್ರತಾಪ್ ಗೌಡರನ್ನು ಗೆಲ್ಲಿಸಿದ್ರಿ. ಆದರೆ, ಅವರನ್ನೇ ಮಾರಿಕೊಂಡು ಪ್ರತಾಪ್ ಗೌಡ ಅವಮಾನ ಮಾಡಿದ್ದರು. ಈ ಅವಮಾನ ಸಹಿಸಿಕೊಳ್ಳುತ್ತೀರಾ ಎಂದು ಪ್ರಶ್ನಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಾಪ್ ಗೌಡನಿಗೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.

ಬಸನಗೌಡ ತುರವಿಹಾಳ ಬಹಳ ಒಳ್ಳೆಯ ಮನುಷ್ಯ. ಕಡಿಮೆ ಅಂತರದಿಂದ ಸೋತ ಹಿನ್ನೆಲೆ ಟಿಕೆಟ್ ಕೊಟ್ಟಿದ್ದೇವೆ. ತುರವಿಹಾಳಗೆ ಟಿಕೆಟ್ ನೀಡಬೇಕೆಂಬುದು ಜನರು ಕೂಡಾ ಒತ್ತಾಯ ಮಾಡಿದ್ದರು ಎಂದು ತಿಳಿಸಿದ ಸಿದ್ದರಾಮಯ್ಯ ನೀವು ನಮಗೆ ಮತ ನೀಡಬೇಕು ಎಂದರು. ನಂತರ ಅವರು ಈಗ ಯಡಿಯೂರಪ್ಪ 7 ಕೆಜಿ ಅಕ್ಕಿಯನ್ನ 5 ಕೆಜಿ ಮಾಡಿದ್ದಾರೆ. ನಾವು 2023ಕ್ಕೆ ಅಧಿಕಾರಕ್ಕೆ ಬಂದೇ ಬರುತ್ತೇವೆ. ನಮ್ಮ ಮೊದಲ ಕಾರ್ಯಕ್ರಮ 10 ಕೆಜಿ ಅಕ್ಕಿ ಕೊಡುವುದು ಎಂದು ಹೇಳಿದರು.

ವಿಜಯೇಂದ್ರ ಆರ್​ಟಿಜಿಎಸ್ ಮೂಲಕ ಹಣ ಪಡೆಯುತ್ತಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚೆಕ್​ನಲ್ಲಿ ಹಣ ಪಡೆಯುತ್ತಾರೆ. ಚುನಾವಣೆಯಲ್ಲಿ ಕೋಟಿಗಟ್ಟಲೇ ಹಣ ಖರ್ಚು ಮಾಡುತ್ತಿದ್ದಾರಲ್ಲ ಆ ದುಡ್ಡು ಯಾರದ್ದು ಎಂದು ಸಿದ್ದರಾಮಯ್ಯ ಸಮಾವೇಶದಲ್ಲಿ ಗರಂ ಆಗಿದ್ದಾರೆ.

ಸಂತೆಯಲ್ಲಿ ಕುರಿ ಕೋಳಿ ಹೇಗೆ ಮಾರಾಟ ಮಾಡುತ್ತಾರೋ ಅದೇ ರೀತಿ ಪ್ರತಾಪಗೌಡ ಮಾರಾಟವಾಗಿದ್ದಾರೆ. 25, 30 ಕೋಟಿಗೆ ಪ್ರತಾಪಗೌಡ ಮಾರಾಟವಾಗಿದ್ದಾರೆ. ಬಿಜೆಪಿವರ ಹತ್ತಿರ ಲೂಟಿ ಹೊಡೆದ ದುಡ್ಡಿದೆ. ನಮ್ಮ ಹತ್ತಿರ ಜನರು ಇದ್ದಾರೆ. ಪ್ರಜಾಪ್ರಭುತ್ವದಲ್ಲಿ ಮತದಾರ ಬಂಧುಗಳೇ ದೇವರು. ಅಕ್ಕಿ ಕೊಡಿ ಎಂದರೆ ಬಿಜೆಪಿಯವರು ದುಡ್ಡಿಲ್ಲ ಅಂತಾರೆ. ಇಲ್ಲಿ ಬಂದು ಲೂಟಿ ಹೊಡಿತಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ

ಪಶ್ಚಿಮ ಬಂಗಾಳ ಚುನಾವಣೆ: 3ನೇ ಹಂತದ ಬಹುತೇಕ ಕ್ಷೇತ್ರಗಳಲ್ಲಿ ಟಿಎಂಸಿ ಉಕ್ಕಿನ ಹಿಡಿತ, ಮುಸ್ಲಿಂ ಮತದಾರರೇ ನಿರ್ಣಾಯಕ

ಮಂತ್ರಿಗಿರಿ ಆದಮೇಲೆ ನಿರಾಣಿಗೆ ಹುಚ್ಚು ಹಿಡಿದಿದೆ ಹೀಗಾಗಿ ಏನೇನೋ ಮಾತಾಡ್ತಾರೆ

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ