ಬೆಂಗಳೂರು: ದೀಪಾವಳಿ ಸಂದರ್ಭದಲ್ಲಿ ಚಿನ್ನ ಬಹು ಬೇಡಿಕೆ ಪಡೆಯುವುದು ಸಾಮಾನ್ಯ ಅದರಂತೆ ಅದರ ಬೆಲೆಯೂ ಹೆಚ್ಚಾಗುತ್ತದೆ. ಆದರೆ ಈ ಬಾರಿ ದೀಪಾವಳಿ ಬೇಡಿಕೆಯ ಜೊತೆಗೆ ಚಿನ್ನದ ಕ್ಷಮಾದಾನ ಯೋಜನೆ ಜಾರಿಯಾಗುತ್ತಿದೆ ಎಂಬ ಭೂತವೂ ಕಾಡತೊಡಗಿದೆ. ಹಾಗಾಗಿ ಹಾಲಿ ಚಿನ್ನದ ದರಗಳಲ್ಲಿ ಭಾರಿ ವ್ಯತ್ಯಾಸಗಳು ಕಂಡುಬರುವ ನಿರೀಕ್ಷೆ ಇದೆ. ಈ ಮಧ್ಯೆ ಕೇಂದ್ರ ಸರ್ಕಾರವೂ ಯಾವುದೇ ರೀತಿಯ ಚಿನ್ನದ ಮೇಲಿನ ಯೋಜನೆಗಳನ್ನು ಜಾರಿಗೊಳಿಸುವ ಇರಾದೆ ತನಗಿಲ್ಲ ಎಂದು ಸ್ಪಷ್ಟ ಪಡಿಸಿದೆ.
ಈ ಬೆಳವಣಿಗೆಗಳ ಮಧ್ಯೆ ಬೆಂಗಳೂರಿನಲ್ಲಿ ಚಿನ್ನದ ವಹಿವಾಟು ಕಡೆ ಗಮನಹರಿಸುವುದಾದರೆ… ದೀಪಾವಳಿ ಮುಗಿದರೂ ಚಿನ್ನದ ಬೇಡಿಕೆ ಹೆಚ್ಚಾಗಿದ್ದು, ಇಂದು ನಗರದಲ್ಲಿ ಚಿನ್ನದ ಬೆಲೆ ಸ್ವಲ್ಪ ಮಟ್ಟಿಗೆ ಹೆಚ್ಚಿದೆ. ಇಂದು ಚಿನ್ನದ ದರ ಏನು ಎಂದು ನೋಡುವುದಾದರೆ..
ಈ ರೀತಿ ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 150 ರೂಪಾಯಿ ಹೆಚ್ಚಾಗಿದ್ದು, 24 ಕ್ಯಾರೆಟ್ ಚಿನ್ನ 10 ಗ್ರಾಂ ಗೆ 20 ರೂಪಾಯಿ ಹೆಚ್ಚಾಗಿದೆ. ಈ ರೀತಿ ಬೆಂಗಳೂರಿನಲ್ಲಿ 1ಕೆಜಿ ಬೆಳ್ಳಿಯ ದರ ನಿನ್ನೆಗೆ ಹೋಲಿಸಿದರೆ ₹48500 ದಿಂದ ₹48900ಗೆ 400 ರೂಪಾಯಿ ಬೆಲೆ ಹೆಚ್ಚಾಗಿದೆ.
Published On - 4:33 pm, Thu, 31 October 19