ನಾನಲ್ಲ, ಮಿಸ್ಟರ್ ಯಡಿಯೂರಪ್ಪನವರೇ ಗೊಂದಲ ಸೃಷ್ಟಿಸ್ತಿದ್ದಾರೆ: ಸಿದ್ದರಾಮಯ್ಯ

ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ಸರ್ಕಾರ ನಾಳೆಗೆ 100 ದಿನ ಪೂರೈಸುತ್ತೆ. ಆದ್ರೆ, ಈ ಸರ್ಕಾರ ಬಂದಿರುವುದೇ ಅನೈತಿಕವಾಗಿ. ಬಿಜೆಪಿ ಸರ್ಕಾರಕ್ಕೆ ಜನಾದೇಶ ಇಲ್ಲ, ಆದರೂ ಹಿಂಬಾಗಿಲಿನಿಂದ ಬಂದು ಸರ್ಕಾರವನ್ನು ರಚಿಸಿದ್ದಾರೆ ಎಂದು ಪ್ರೆಸ್​ಕ್ಲಬ್​ನಲ್ಲಿ ನಡೆದ ಮಾಧ್ಯಮ ಸಂವಾದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಈಗಲೂ ಬಿಜೆಪಿಗೆ ಬಹುಮತ ಇಲ್ಲ, ಈ ಮಾತನ್ನು ನಾನು ಸಿಎಂ ಆಗಬೇಕು ಎಂಬ ಕನಸು ಇಟ್ಕೊಂಡು ಹೇಳ್ತಿಲ್ಲ. ಉಪಚುನಾವಣೆಯಲ್ಲಿ ಬಿಜೆಪಿಗೆ 8 ಸ್ಥಾನ ಬರದಿದ್ರೆ ಬಿಎಸ್​ವೈ ಪರಿಸ್ಥಿತಿ ಏನಾಗುತ್ತೆ? ಒಂದು ವೇಳೆ […]

ನಾನಲ್ಲ, ಮಿಸ್ಟರ್ ಯಡಿಯೂರಪ್ಪನವರೇ ಗೊಂದಲ ಸೃಷ್ಟಿಸ್ತಿದ್ದಾರೆ: ಸಿದ್ದರಾಮಯ್ಯ
sadhu srinath

|

Nov 02, 2019 | 12:17 PM

ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ಸರ್ಕಾರ ನಾಳೆಗೆ 100 ದಿನ ಪೂರೈಸುತ್ತೆ. ಆದ್ರೆ, ಈ ಸರ್ಕಾರ ಬಂದಿರುವುದೇ ಅನೈತಿಕವಾಗಿ. ಬಿಜೆಪಿ ಸರ್ಕಾರಕ್ಕೆ ಜನಾದೇಶ ಇಲ್ಲ, ಆದರೂ ಹಿಂಬಾಗಿಲಿನಿಂದ ಬಂದು ಸರ್ಕಾರವನ್ನು ರಚಿಸಿದ್ದಾರೆ ಎಂದು ಪ್ರೆಸ್​ಕ್ಲಬ್​ನಲ್ಲಿ ನಡೆದ ಮಾಧ್ಯಮ ಸಂವಾದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಈಗಲೂ ಬಿಜೆಪಿಗೆ ಬಹುಮತ ಇಲ್ಲ, ಈ ಮಾತನ್ನು ನಾನು ಸಿಎಂ ಆಗಬೇಕು ಎಂಬ ಕನಸು ಇಟ್ಕೊಂಡು ಹೇಳ್ತಿಲ್ಲ. ಉಪಚುನಾವಣೆಯಲ್ಲಿ ಬಿಜೆಪಿಗೆ 8 ಸ್ಥಾನ ಬರದಿದ್ರೆ ಬಿಎಸ್​ವೈ ಪರಿಸ್ಥಿತಿ ಏನಾಗುತ್ತೆ? ಒಂದು ವೇಳೆ ಮಧ್ಯಂತರ ಚುನಾವಣೆ ಬರಬಹುದು ಅಂಥ ಹೇಳಿದ್ದೇನೆ ಎಂದರು.

ಮಿಸ್ಟರ್ ಯಡಿಯೂರಪ್ಪ ನೀವು ಗೊಂದಲ ಸೃಷ್ಟಿಸುತ್ತಿದ್ದೀರಿ: 2009ರಲ್ಲಿ ಕಟ್ಟಿರುವ ಆಸರೆ ಮನೆಗಳು ಈಗ ಹಾಳಾಗಿವೆ. ಈ ಬಗ್ಗೆ ಪ್ರಶ್ನಿಸಿದ್ರೆ ನಾನು ಗೊಂದಲ ಸೃಷ್ಟಿಸ್ತಿದ್ದೀನಿ ಅಂತಾರೆ. ಗೊಂದಲವನ್ನ ನಾನು ಸೃಷ್ಟಿಸ್ತಿಲ್ಲ ಮಿಸ್ಟರ್ ಯಡಿಯೂರಪ್ಪ, ಗೊಂದಲ ನೀವು ಸೃಷ್ಟಿಸುತ್ತಿದ್ದೀರಿ. ಜನರಿಗೆ ನೀವು ಸುಳ್ಳು ಹೇಳ್ತಿದ್ದೀರಿ. ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಳ್ತಾರೆ. ನಾನು ಆರೋಪ ಮಾಡಿದ ಮೇಲೆ ಜಾಹೀರಾತು ನೀಡ್ತಾರೆ. ಆದ್ರೆ ಅಲ್ಲೂ ಸತ್ಯ ಹೇಳುವುದಿಲ್ಲ. ಕೇಂದ್ರಕ್ಕೆ ಒಂದು ಅಂಕಿ ಅಂಶ, ಜಾಹೀರಾತಿನಲ್ಲಿ ಬೇರೆ ಅಂಕಿ ಇರುತ್ತೆ. ಯಾವುದು ಸುಳ್ಳು, ಯಾವುದು ಸತ್ಯ ಎಂದು ಸಿಎಂ ಯಡಿಯೂರಪ್ಪ ಹೇಳಲಿ ನೋಡೋಣ ಎಂದು ಸಿದ್ದರಾಮಯ್ಯ ಸವಾಲ್ ಹಾಕಿದರು

ನಾನೇ ಟಿಪ್ಪು ಅಂತ ಯಡಿಯೂರಪ್ಪ ಹೇಳಿದ್ರು: ಮಿಸ್ಟರ್ ಅಶೋಕ್ ಟಿಪ್ಪು ಪೇಟ ಹಾಕಿದ್ದವರು ಯಾರು? ಯಡಿಯೂರಪ್ಪ, ಜಗದೀಶ್​ ಶೆಟ್ರು ಎಲ್ಲರೂ ಪೇಟ ಹಾಕಿರಲಿಲ್ವೇ? ನಾನೇ ಟಿಪ್ಪು ಅಂತ ಯಡಿಯೂರಪ್ಪ ಹೇಳಿರಲಿಲ್ವೇ? ಟಿಪ್ಪು ಬಗ್ಗೆ ಗೋವಿಂದ ಕಾರಜೋಳ ಏನಂತ ಬರೆದಿದ್ದಾರೆ ಗೊತ್ತಾ? ಮಿಸ್ಟರ್ ಅಶೋಕ್ ಇದರ ಬಗ್ಗೆ ಮಾತನಾಡಪ್ಪ, ಆಗ ಯಾರು ಅಬ್ದುಲ್ ಅನ್ನೋದು ಗೊತ್ತಾಗುತ್ತದೆ ಎಂದು ಸಚಿವ ಆರ್​.ಅಶೋಕ್​ಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಆಪರೇಷನ್​ ಕಮಲ ಜುಲೈನಲ್ಲಿ ನಡೆದದ್ದಲ್ಲ: ಸಮ್ಮಿಶ್ರ ಸರ್ಕಾರ ರಚನೆಯಾದ ದಿನದಿಂದಲೂ ಆಪರೇಷನ್ ಕಮಲ ನಡೆಯುತ್ತಿತ್ತು. ಹಣದ ಆಮಿಷ ಒಡ್ಡಿ ಶಾಸಕರನ್ನು ಖರೀದಿ ಮಾಡಿದ್ದಾರೆ. ದೇವದುರ್ಗದಲ್ಲಿ ಯಡಿಯೂರಪ್ಪ ಆಡಿಯೋ ರೆಕಾರ್ಡ್ ಆಗಿದ್ದ ಧ್ವನಿ ತಮ್ಮದೇ ಎಂದು ಒಪ್ಪಿಕೊಂಡಿದ್ದರು. ಆದ್ರೆ ನಾವು ಆಪರೇಷನ್ ಕಮಲ ಮಾಡಿಲ್ಲ ಎಂದು ಸುಳ್ಳು ಹೇಳ್ತಾರೆ. ಹಾಗಾದ್ರೆ, ಅನರ್ಹರ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಕೊಟ್ಟಿದ್ಯಾಕೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada