AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾದಾ-ಗೋಡೆ ಚರ್ಚೆಯ ಫಲಶೃತಿ: ಬೆಂಗಳೂರಿಗೆ ಬಿಸಿಸಿಐ ಕಚೇರಿ ಸ್ಥಳಾಂತರ?

ಬೆಂಗಳೂರು: ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಗಾದಿಯನ್ನ ಅಲಂಕರಿಸುತ್ತಿದ್ದಂತೆ, ಬೆಂಗಾಲ್ ಟೈಗರ್ ಸೌರವ್ ಗಂಗೂಲಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಕೆಲಸಮಾಡ್ತಿದ್ದಾರೆ. ಅಲ್ಲದೇ, ಕೋಲ್ಕತ್ತಾ ಟೆಸ್ಟ್ ಪಂದ್ಯವನ್ನ ಹೊನಲು-ಬೆಳಕಿನ ಪಂದ್ಯವಾಗಿ ಆಯೋಜಿಸೋದ್ರೊಂದಿಗೆ ಭಾರತೀಯ ಕ್ರಿಕೆಟ್​ನಲ್ಲಿ ಹೊಸ ಸಂಚಲವನ್ನ ಸೃಷ್ಟಿಸಿದ್ದಾರೆ. ದೇಶದಲ್ಲಿ ಕ್ರಿಕೆಟ್ ಅಭಿವೃದ್ಧಿಗೆ ನಾನಾ ಯೋಜನೆಗಳನ್ನ ಜಾರಿಗೆ ತರಲು ಪಣತೊಟ್ಟಿರೋ ದಾದಾ, ಸಿಲಿಕಾನ್ ಸಿಟಿಗೆ ಭೇಟಿ ನೀಡಿದ್ರು. ಕ್ರಿಕೆಟ್ ಅಭಿಮಾನಿಗಳಲ್ಲಿ ದಾದಾ ಹಾಗೂ ಗೋಡೆ ಎಂದೆ ಖ್ಯಾತರಾಗಿರೋ ಇಬ್ಬರು ದಿಗ್ಗಜರು, ಬಿಸಿಸಿಐನ ಸೆಂಟರ್ ಆಫ್ ಆಟ್ರಾಕ್ಷನ್ ಬೆಂಗಳೂರಿನ […]

ದಾದಾ-ಗೋಡೆ ಚರ್ಚೆಯ ಫಲಶೃತಿ: ಬೆಂಗಳೂರಿಗೆ ಬಿಸಿಸಿಐ ಕಚೇರಿ ಸ್ಥಳಾಂತರ?
ಸಾಧು ಶ್ರೀನಾಥ್​
|

Updated on:Oct 31, 2019 | 2:55 PM

Share

ಬೆಂಗಳೂರು: ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಗಾದಿಯನ್ನ ಅಲಂಕರಿಸುತ್ತಿದ್ದಂತೆ, ಬೆಂಗಾಲ್ ಟೈಗರ್ ಸೌರವ್ ಗಂಗೂಲಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಕೆಲಸಮಾಡ್ತಿದ್ದಾರೆ. ಅಲ್ಲದೇ, ಕೋಲ್ಕತ್ತಾ ಟೆಸ್ಟ್ ಪಂದ್ಯವನ್ನ ಹೊನಲು-ಬೆಳಕಿನ ಪಂದ್ಯವಾಗಿ ಆಯೋಜಿಸೋದ್ರೊಂದಿಗೆ ಭಾರತೀಯ ಕ್ರಿಕೆಟ್​ನಲ್ಲಿ ಹೊಸ ಸಂಚಲವನ್ನ ಸೃಷ್ಟಿಸಿದ್ದಾರೆ.

ದೇಶದಲ್ಲಿ ಕ್ರಿಕೆಟ್ ಅಭಿವೃದ್ಧಿಗೆ ನಾನಾ ಯೋಜನೆಗಳನ್ನ ಜಾರಿಗೆ ತರಲು ಪಣತೊಟ್ಟಿರೋ ದಾದಾ, ಸಿಲಿಕಾನ್ ಸಿಟಿಗೆ ಭೇಟಿ ನೀಡಿದ್ರು. ಕ್ರಿಕೆಟ್ ಅಭಿಮಾನಿಗಳಲ್ಲಿ ದಾದಾ ಹಾಗೂ ಗೋಡೆ ಎಂದೆ ಖ್ಯಾತರಾಗಿರೋ ಇಬ್ಬರು ದಿಗ್ಗಜರು, ಬಿಸಿಸಿಐನ ಸೆಂಟರ್ ಆಫ್ ಆಟ್ರಾಕ್ಷನ್ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ ಭೇಟಿಯಾದ್ರು. ಬರೋಬ್ಬರಿ ನಾಲ್ಕೂವರೆ ಗಂಟೆ ದ್ರಾವಿಡ್ ಜೊತೆ ಚರ್ಚೆ, ಶಾ ಕೂಡ ಸಾಥ್! ಚಿನ್ನಸ್ವಾಮಿ ಮೈದಾನದಲ್ಲಿರುವ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಗೆ ಬುಧವಾರ ಬೆಳಗ್ಗೆ 11.45ಕ್ಕೆ ಆಗಮಿಸಿದ ಸೌರವ್ ಗಂಗೂಲಿ, ಎನ್​ಸಿಎ ಅಧ್ಯಕ್ಷ ರಾಹುಲ್​ ದ್ರಾವಿಡ್ ಜೊತೆ ಬರೋಬ್ಬರಿ ನಾಲ್ಕೂವರೆ ಗಂಟೆಗಳ ಚರ್ಚೆ ನಡೆಸಿದ್ರು.. ಅಧ್ಯಕ್ಷ ಗಂಗೂಲಿಗೆ, ಕಾರ್ಯದರ್ಶಿ ಜಯ್ ಶಾ ಕೂಡ ಸಾಥ್ ನೀಡಿದ್ರು.

ಎನ್​ಸಿಎನಲ್ಲಿ ಒಂದೂವರೆ ದಶಕದಿಂದ ಗಾಯಾಳು ಹಾಗೂ ಫಾರ್ಮ್ ಕಳೆದುಕೊಂಡ ಆಟಗಾರರು ತರಬೇತಿಯನ್ನ ಪಡೆಯುತ್ತಿದ್ದಾರೆ. ಹೀಗಾಗಿ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯನ್ನ ಮೇಲ್ದರ್ಜೆಗೇರಿಸಬೇಕಾದ ಅವಶ್ಯಕತೆಯಿದೆ. ಹೀಗಾಗಿ ಎನ್​ಸಿಎ ಅಭಿವೃದ್ಧಿಯ ಕುರಿತು ರಾಹುಲ್ ದ್ರಾವಿಡ್ ಜೊತೆ ಗಂಗೂಲಿ ಚರ್ಚಿಸಿದ್ರು. ಅಲ್ಲದೇ, ಪ್ರಥಮ ದರ್ಜೆ ಕ್ರಿಕೆಟಿಗರು ಸೇರಿದಂತೆ ಹಿರಿಯ ಕ್ರಿಕೆಟಿಗಾಗಿ ಹಲವು ಯೋಜನೆಗಳನ್ನ ರೂಪಿಸಲು ಸಜ್ಜಾಗಿರೋ ದಾದಾ, ದ್ರಾವಿಡ್ ಜೊತೆ ತಮ್ಮ ಅಭಿಪ್ರಾಯವನ್ನ ಹಂಚಿಕೊಂಡ್ರು.

ಹಾಗಾದ್ರೆ, ನಿನ್ನೆ ಬಿಸಿಸಿಐ ಬಿಗ್​ಬಾಸ್ ದಾದಾ ಹಾಗೂ ದಿ ವಾಲ್ ದ್ರಾವಿಡ್ ನಡೆಸಿದ ಚರ್ಚೆಯ ಹೈಲೈಟ್ಸ್ ಏನು ಅನ್ನೋದನ್ನ ನೋಡೋದಾದ್ರೆ -ಬೆಂಗಳೂರಿಗೆ ಬಿಸಿಸಿಐ ಕಚೇರಿ ಸ್ಥಳಾಂತರ -ಪ್ರಥಮ ದರ್ಜೆ ಕ್ರಿಕೆಟಿಗರಿಗೆ ಸಂಬಂಧಿಸಿದ ಯೋಜನೆಗಳು -ನ್ಯಾಷನಲ್ ಕ್ರಿಕೆಟ್ ಅಕಾಡೆಮಿ ಅಭಿವೃದ್ಧಿ -ಏರ್​ಪೋರ್ಟ್ ಹತ್ತಿರದ ಎನ್​ಸಿಎ ಅಭಿವೃದ್ಧಿಗೆ ಒಲವು

ದೇವನಹಳ್ಳಿ ಏರ್​ಪೋರ್ಟ್ ಬಳಿ NCA ಸ್ಥಾಪನೆಗೆ 43ಎಕರೆ ಭೂಮಿ ಖರೀದಿಯಾಗಿದೆ! ಪ್ರಥಮ ದರ್ಜೆ ಕ್ರಿಕೆಟಿಗೆ ಬಗ್ಗೆ ಸಾಕಷ್ಟು ಕಾಳಜಿಯನ್ನ ಹೊಂದಿರೋ ದಾದಾ, ಮುಂದೆ ಯಾವೆಲ್ಲಾ ಯೋಜನೆಗಳನ್ನ ರೂಪಿಸಬೇಕು ಅನ್ನೋದ್ರ ಕುರಿತು ದ್ರಾವಿಡ್ ಜೊತೆ ಚರ್ಚೆಸಿದ್ರು. ಹಾಗೂ ಸದ್ಯ ಚಿನ್ನಸ್ವಾಮಿ ಮೈದಾನದಲ್ಲಿರೋ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯನ್ನ ಮತ್ತಷ್ಟು ಮೇಲ್ದರ್ಜೆಗೇರಿಸಲು ಚರ್ಚೆ ನಡೆಸಲಾಯ್ತು.

ಹಾಗೇ ಬೆಂಗಳೂರಿನ ದೇವನಹಳ್ಳಿ ಏರ್​ಪೋರ್ಟ್ ಬಳಿ ಎನ್​ಸಿಎ ಸ್ಥಾಪನೆಗೆ 43ಎಕರೆ ಭೂಮಿಯನ್ನ ಖರೀದಿ ಮಾಡಿದ್ದು, ಅಭಿವೃದ್ಧಿ ಪಡಿಸಬೇಕಾದ ಬಗ್ಗೆ ಮಾತುಕತೆ ನಡೀತು. ಅಲ್ಲದೇ, ಬೆಂಗಳೂರಿನಲ್ಲೇ ಬಿಸಿಸಿಐ ಕೇಂದ್ರ ಕಚೇರಿಯನ್ನ ಶಿಫ್ಟ್ ಮಾಡೋ ಕುರಿತು ಗಂಗೂಲಿ ದ್ರಾವಿಡ್ ಜೊತೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಇದೇ ವೇಳೆ ಚಿನ್ನಸ್ವಾಮಿ ಮೈದಾನವನ್ನ ನೋಡಿದ ದಾದಾ ಫುಲ್ ಫಿದಾ ಆಗಿ ಹೋದ್ರು. ಎಷ್ಟೇ ಮಳೆ ಬಂದ್ರೂ ಇಲ್ಲಿನ ಸಬ್​ವೇರ್ ಸಿಸ್ಟಮ್​ನಿಂದಾಗಿ ಕ್ಷಣಾರ್ಧದಲ್ಲಿ ಖಾಲಿ ಮಾಡೋ ಟೆಕ್ನಿಕ್​ ಅನ್ನ ದಾದಾ ಶ್ಲಾಘಿಸಿದ್ರು. ಒಟ್ನಲ್ಲಿ ನಾಲ್ಕೂವರೆ ಗಂಟೆಗಳ ಕಾಲ ಬಿಸಿಸಿಐ ಬಿಗ್​ಬಾಸ್ ಸೌರವ್ ಗಂಗೂಲಿ ಹಾಗೂ ರಾಹುಲ್ ದ್ರಾವಿಡ್ ನಡುವಿನ ಮಾತುಕತೆ ಸಾಕಷ್ಟು ಕುತೂಹಲವನ್ನ ಸೃಷ್ಟಿಸಿದೆ.

Published On - 2:32 pm, Thu, 31 October 19

Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!