ತಿರುಪತಿ ನೆಂಟ ತಂದ ಗಂಡಾಂತರ: ಥಣಿಸಂದ್ರದ ಒಂದೇ ಕುಟುಂಬದ 6 ಮಂದಿಗೆ ಕೊರೊನಾ

ಒಂದೇ ಕುಟುಂಬದ 6 ಸದಸ್ಯರಿಗೆ ಕೊರೊನಾ ಸೋಂಕು ತಗುಲಿರುವ ಘಟನೆ ನಗರದ ಥಣಿಸಂದ್ರದಲ್ಲಿ ವರದಿಯಾಗಿದೆ. ಥಣಿಸಂದ್ರದ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ಕುಟುಂಬವೊಂದರ 6 ಮಂದಿ ಸದಸ್ಯರಲ್ಲಿ ಕೊರೊನಾ ಪತ್ತೆಯಾಗಿದೆ.

ತಿರುಪತಿ ನೆಂಟ ತಂದ ಗಂಡಾಂತರ: ಥಣಿಸಂದ್ರದ ಒಂದೇ ಕುಟುಂಬದ 6 ಮಂದಿಗೆ ಕೊರೊನಾ
ಕೊವಿಡ್​ ಪರೀಕ್ಷೆ (ಪ್ರಾತಿನಿಧಿಕ ಚಿತ್ರ)
Edited By:

Updated on: Mar 08, 2021 | 6:08 PM

ಬೆಂಗಳೂರು: ಒಂದೇ ಕುಟುಂಬದ 6 ಸದಸ್ಯರಿಗೆ ಕೊರೊನಾ ಸೋಂಕು ತಗುಲಿರುವ ಘಟನೆ ನಗರದ ಥಣಿಸಂದ್ರದಲ್ಲಿ ವರದಿಯಾಗಿದೆ. ಥಣಿಸಂದ್ರದ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ಕುಟುಂಬವೊಂದರ 6 ಮಂದಿ ಸದಸ್ಯರಲ್ಲಿ ಕೊರೊನಾ ಪತ್ತೆಯಾಗಿದೆ.

ಕುಟುಂಬಸ್ಥರಿಗೆ ಸಂಬಂಧಿಯಿಂದ ಕೊರೊನಾ ಸೋಂಕು ಹರಡಿರುವ ಶಂಕೆ ವ್ಯಕ್ತವಾಗಿದೆ. ಇತ್ತೀಚೆಗೆ ತಿರುಪತಿಯಿಂದ ಬೆಂಗಳೂರಿಗೆ ಬಂದಿದ್ದ ಸಂಬಂಧಿಯಿಂದ ಸೋಂಕು ಹರಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ, ಸೋಂಕಿತರ ಸಂಪರ್ಕದಲ್ಲಿದ್ದ 204 ಜನರಿಗೆ ಕೊವಿಡ್ ಟೆಸ್ಟ್‌ ಮಾಡಿಸಲಾಗಿದೆ. ಆದರೆ, ಪ್ರಾಥಮಿಕ, ದ್ವಿತೀಯ ಸಂಪರ್ಕಿತರಲ್ಲಿ ಕೊರೊನಾ ಪತ್ತೆಯಾಗಿಲ್ಲ.

ಇದನ್ನೂ ಓದಿ: ಅತ್ತೆ, ಗಂಡ ಬೈದ್ರು ಅಂತಾ.. ಮಹಿಳಾ ದಿನಾಚರಣೆಯಂದೇ ಕಂದಮ್ಮನನ್ನು ಕೊಂದು ಮಹಿಳೆ ನೇಣಿಗೆ ಶರಣು