ಬೆಂಗಳೂರಿನ ಮಕ್ಕಳಲ್ಲಿ ಹೆಚ್ಚಾಗುತ್ತಿದೆ ಚರ್ಮ ರೋಗ; ಎಚ್ಚರ ವಹಿಸುವಂತೆ ವೈದ್ಯರ ಸಲಹೆ

| Updated By: ಆಯೇಷಾ ಬಾನು

Updated on: Aug 05, 2024 | 8:19 AM

ಸಿಲಿಕಾನ್ ಸಿಟಿಯಲ್ಲಿ ಈಗಾಗಲೇ ಡೆಂಗ್ಯೂ, ವೈರಲ್ ಫೀವರ್ ಸೇರಿದಂತೆ ಅನೇಕ ಖಾಯಿಲೆಗಳು ಜನರನ್ನು ಕಾಡ್ತಿದೆ. ಅದರಲ್ಲೂ ಈಗ ನಗರದಲ್ಲಿ ಮಳೆ ಹೆಚ್ಚಾಗಿರುವುದರಿಂದ ಜನರಲ್ಲಿ ಮತ್ತೊಂದು ಆತಂಕ ಶುರುವಾಗಿದೆ. ಜನರು ಇನ್ಮುಂದೆ ತಮ್ಮ ಚರ್ಮದ ಕಾಳಜಿ ಬಗ್ಗೆ ಕೊಂಚ ಎಚ್ಚರವಹಿಸಬೇಕಿದೆ.

ಬೆಂಗಳೂರಿನ ಮಕ್ಕಳಲ್ಲಿ ಹೆಚ್ಚಾಗುತ್ತಿದೆ ಚರ್ಮ ರೋಗ; ಎಚ್ಚರ ವಹಿಸುವಂತೆ ವೈದ್ಯರ ಸಲಹೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಆಗಸ್ಟ್.05: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಈಗಾಗಲೇ ಜನರಿಗೆ ಎಲ್ಲಿಲ್ಲದ ಆರೋಗ್ಯದ ಸಮಸ್ಯೆಗಳು ಎದುರಾಗುತ್ತಿವೆ. ಅದರಲ್ಲೂ ಮಿತಿ ಮೀರಿದ ಡೆಂಗ್ಯೂ (Dengue) ಪ್ರಕರಣಗಳು ಕೂಡಾ ಕಂಡು ಬರ್ತಿದೆ. ನಿನ್ನೆಯವರೆಗೂ ನಗರದಲ್ಲೇ 8,800 ಪ್ರಕರಣಗಳು ಕಂಡು ಬಂದಿದೆ. ಇದರ ಆತಂಕ ಒಂದು ಕಡೆಯಾದ್ರೆ, ಜನರಿಗೆ ಮತ್ತೊಂದು ಸಮಸ್ಯೆ ಶುರುವಾಗಿದೆ.

ರಾಜಧಾನಿಯಲ್ಲಿ ಕಳೆದ ಒಂದು ತಿಂಗಳಿನಿಂದ ಬಿಟ್ಟು ಬಿಟ್ಟು ಮಳೆ ಬರ್ತಿದ್ದು ಈ ನಡುವೆ ಮಕ್ಕಳು ಸೇರಿದಂತೆ ವಯಸ್ಕರಲ್ಲಿ ಫಂಗಲ್ ಇನ್ಫಕ್ಷನ್ ಹಾಗೂ ಸ್ಕಿನ್ ಡಿಸೀಜ್ ಶುರುವಾಗಿದೆ. ಸದ್ಯ ಈ ಖಾಯಿಲೆಗಳು ಒಬ್ಬರಿಂದ ಒಬ್ಬರಿಗೆ ಹರಡುತ್ತಿದೆ. ಅದರಲ್ಲೂ ಮಕ್ಕಳಲ್ಲಿ ಹೆಚ್ಚಾಗಿ ಹರಡುತ್ತಿದೆ. ಇದು ಮಕ್ಕಳ ಆರೋಗ್ಯದ ಮೇಲೆ ನಾನಾ ರೀತಿಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಮನೆಯಲ್ಲಿ ಒಂದು ಮಗುವಿಗೆ ಈ ರೀತಿಯ ಖಾಯಿಲೆಗಳು ಕಂಡು ಬಂದ್ರೆ ವೇಗವಾಗಿ ಎಲ್ಲರಿಗೂ ಹರಡುತ್ತಿದೆ. ನಿರಂತರ ಮಳೆಯಾಗುತ್ತಿರುವುದರಿಂದ ಮಕ್ಕಳ ಆರೋಗ್ಯ ಬಿಗಡಾಯಿಸುವ ಸಾಧ್ಯತೆ ಇದೆ. ಈ ಫಂಗಲ್‌ ಇನ್‌ಫೆಕ್ಷನ್‌ ಅತಿಯಾಗಿ ಚರ್ಮ ಒದ್ದೆಯಾಗಿರುವುದು, ಹಾಗೂ ಮಳೆಯಲ್ಲಿ ನೆನೆಯುವುದರಿಂದ ಹೆಚ್ಚಾಗಿ ಕಂಡು ಬರ್ತಿದೆ.

ಇದನ್ನೂ ಓದಿ: ಮಂಗಳೂರು-ಯಶವಂತಪುರ ಎಕ್ಸಪ್ರೆಸ್​ ರೈಲು ಸಮಯದಲ್ಲಿ ಬದಲಾವಣೆ

ಚರ್ಮದ ಮೇಲಿನ ಅತಿಯಾದ ತೇವಾಂಶವು ಈ ಇನ್‌ಫೆಕ್ಷನ್​ಗೆ ಕಾರಣವಾಗಿದೆ. ಹೀಗಾಗಿ ನೈಮರ್ಲ್ಯ ಕಾಪಾಡಿಕೊಳ್ಳುವುದು ಅವಶ್ಯಕವಾಗಿದ್ದು ಆಂಟಿಫಂಗಲ್‌ ಸೋಪು ಅಥವಾ ಹ್ಯಾಂಡ್‌ವಾಶ್ ಬಳಕೆ‌, ಮಳೆ ನೀರಿನಲ್ಲಿ ನೆನೆದು ಬಂದ ಮೇಲೆ ಸ್ನಾನ ಮಾಡುವುದು, ಕೈ ಕಾಲು ತೊಳೆಯುವುದನ್ನು ಮರೆಯದಿರಿ. ಚರ್ಮವನ್ನ ಸ್ವಚ್ಛವಾಗಿ ಸಾಧ್ಯವಾದಷ್ಟು ಗಾಯಗಳಾಗದಂತೆ ನೋಡಿಕೊಳ್ಳಿ ಎಂದು ವೈದ್ಯರು ಎಚ್ಚರಿಸಿದ್ದಾರೆ. ಪೋಷಕರು ಮಕ್ಕಳಿಗೆ ಮಳೆಗಾಲ ಮುಗಿಯುವವರೆಗೂ ಕಾದಾರಿಸಿದ ಬಿಸಿ ನೀರು ಕುಡಿಸುವಂತೆ ಪೋಷಕರಿಗೆ ವೈದ್ಯರು ಸಲಹೆ ನೀಡಿದ್ದಾರೆ.

ನಗರದ ಬೌರಿಂಗ್, ಕೆ.ಸಿ.ಜನರಲ್ ಆಸ್ಪತ್ರೆ ಸೇರಿದಂತೆ ಅನೇಕ ಕಡೆಗಳಲ್ಲಿ ದಿನಕ್ಕೆ 10 ಮಂದಿಯಲ್ಲಿ 2-3 ಜನರಲ್ಲಿ ಫಂಗಲ್ ಇನ್‌ಫೆಕ್ಷನ್ ಪ್ರರಕರಣಗಳು ಕಾಣಿಸುತ್ತಿದೆ‌. ಜೊತೆಗೆ ಜನರು ಬಳಕೆ ಮಾಡುವ ಲೋಷನ್‌ಗಳು, ಬಾಡಿ ಕ್ರೀಂಗಳ ಬಗ್ಗೆಯೂ ನಿಗಾವಹಿಸಬೇಕಿದೆ. ಹಾಗೂ ಚರ್ಮದಲ್ಲಿ ಸ್ವಲ್ಪ ಬದಲಾವಣೆ ಕಂಡು ಬಂದ್ರೂ, ಕೂಡಲೇ ವೈದ್ಯರನ್ನ ಸಂಪರ್ಕಿಸಿ ಹಾಗೂ ವೈದ್ಯರು ಹೇಳುವ ಮೆಡಿಸನ್‌ ಪಡೆಯುವಂತೆ ಸೂಚಿಸುತ್ತಿದ್ದಾರೆ ಇಲ್ಲವಾದ್ರೆ, ಇದ್ರಿಂದ ಮತ್ತಷ್ಟು ಬೇರೆಯ ಚರ್ಮದ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿರುತ್ತವೆ.

ಒಟ್ನಲ್ಲಿ ಬೆಂಗಳೂರಿನಲ್ಲಿ ಬಿಟ್ಟು ಬಿಟ್ಟು ಬರ್ತಿರೋ ಮಳೆಯಿಂದ ಕೇವಲ ಡೆಂಗ್ಯೂ ಮಾತ್ರವಲ್ಲದೆ, ಬೇರೆ ಸಮಸ್ಯೆಗಳು ಕಂಡು ಬರ್ತಿದ್ದು, ಜನರು ಈ ಬಗ್ಗೆ ಗಮನ ಹರಿಸಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ