ಮಂಗಳೂರು-ಯಶವಂತಪುರ ಎಕ್ಸಪ್ರೆಸ್ ರೈಲು ಸಮಯದಲ್ಲಿ ಬದಲಾವಣೆ
ವಾರಕ್ಕೆ ಮೂರು ಬಾರಿ ಮಂಗಳೂರು ಜಂಕ್ಷನ್ನಿಂದ ಬೆಂಗಳೂರಿನ ಯಶವಂತಪುರದವರೆಗೆ ಸಂಚರಿಸುವ ಎಕ್ಸ್ಪ್ರೆಸ್ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಲಾಗುತ್ತದೆ ಎಂದು ನೈಋತ್ಯ ರೈಲ್ವೆ ವಲಯ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಹಾಗಿದ್ದರೆ ಪರಿಷ್ಕೃತ ವೇಳಾಪಟ್ಟಿ ಹೇಗಿದೆ? ರೈಲು ಯಾವ ಸಮಯಕ್ಕೆ ಮಂಗಳೂರು ನಿಲ್ದಾಣದಿಂದ ಹೊರಡಲಿದೆ ಎಂಬ ಮಾಹಿತಿ ಇಲ್ಲಿದೆ.
ಮಂಗಳೂರು, ಆಗಸ್ಟ್ 05: ಶಿರಾಡಿ ಘಾಟ್ನ (Shiradi Ghat) ಎಡಕುಮೇರಿ ಕಡಗರವಳ್ಳಿ ಮಧ್ಯೆ ಭೂಕುಸಿತದಿಂದಾಗಿ ಬೆಂಗಳೂರು-ಮಂಗಳೂರು ರೈಲು (Bengaluru-Mangaluru Train) ಸಂಚಾರ ಕಳೆದ 14 ದಿನಗಳಿಂದ ರದ್ದಾಗಿತ್ತು. ಈ ಮಾರ್ಗದ ರೈಲು ಸಂಚಾರ ಪುನಃ ಆರಂಭವಾಗಲಿದ್ದು, ಕೊಂಕಣ ರೈಲ್ವೆ ವಲಯ ಶೀಘ್ರದಲ್ಲೇ ಮಾಧ್ಯಮ ಪ್ರಕಟಣೆ ಹೊರಡಿಸುವ ಸಾಧ್ಯತೆ ಇದೆ. ಈ ನಡುವೆ ಮಂಗಳೂರು-ಬೆಂಗಳೂರು ಯಶವಂತಪುರ ಎಕ್ಸಪ್ರೆಸ್ (Mangaluru-Bengaluru Yesvantpur Express) ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ.
ವೇಳಾಪಟ್ಟಿ ಪರಿಷ್ಕರಣೆ
ವಾರಕ್ಕೆ ಮೂರು ಬಾರಿ ಮಂಗಳೂರು ಜಂಕ್ಷನ್ನಿಂದ ಬೆಂಗಳೂರಿನ ಯಶವಂತಪುರದವರೆಗೆ ಸಂಚರಿಸುವ ಎಕ್ಸ್ಪ್ರೆಸ್ (ರೈಲು ಸಂಖ್ಯೆ 16576) ರೈಲಿನ ವೇಳಾಪಟ್ಟಿಯನ್ನು ನವೆಂಬರ 1 ರಿಂದ ಜಾರಿಗೆ ಬರುವಂತೆ ಪರಿಷ್ಕರಣೆ ಮಾಡಲಾಗುತ್ತದೆ ಎಂದು ನೈಋತ್ಯ ರೈಲ್ವೆ ವಲಯ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ಪರಿಷ್ಕೃತ ಸಮಯದ ಪ್ರಕಾರ ಈ ರೈಲು (16576) ಮಂಗಳೂರು ಜಂಕ್ಷನ್ನಿಂದ ಬೆಳಿಗ್ಗೆ 11.30 ರ ಬದಲು ಬೆಳಿಗ್ಗೆ 7 ಗಂಟೆಗೆ ಹೊರಟು, ಅದೇ ದಿನ ರಾತ್ರಿ 8:45 ರ ಬದಲು ಸಂಜೆ 4.30ಕ್ಕೆ ಯಶವಂತಪುರ ನಿಲ್ದಾಣವನ್ನು ತಲುಪಲಿದೆ.
ಇದನ್ನೂ ಓದಿ: ಬೆಳಗಾವಿ-ಮೀರಜ್ ವಿಶೇಷ ರೈಲು ಸೇವೆ ಈ ದಿನಾಂಕದವರೆಗೆ ವಿಸ್ತರಣೆ
ಬಂಗಾರಪೇಟೆ-ಮಾರಿಕುಪ್ಪಂ ರೈಲು ವೇಳಾಪಟ್ಟಿ ಪರಿಷ್ಕರಣೆ
ರೈಲು ಸಂಖ್ಯೆ 61782 ಬಂಗಾರಪೇಟೆ-ಮಾರಿಕುಪ್ಪಂ ಮೆಮು ಸ್ಪೆಷಲ್ ರೈಲು ಸಂಖ್ಯೆ 01772 ಮಾರಿಕುಪ್ಪಂ-ಕೆಎಸ್‌ಆರ್ ಬೆಂಗಳೂರು ಮೆಮು ಸ್ಪೆಷಲ್ ಮತ್ತು ರೈಲು ಸಂಖ್ಯೆ 08396 ಕೆಎಸ್‌ಆರ್ ಬೆಂಗಳೂರು-ಮಾರಿಕುಪ್ಪಂ ಮೆಮು ಸ್ಪೆಷಲ್ ರೈಲುಗಳ ವೇಳಾಪಟ್ಟಿಯನ್ನು ಅಗಸ್ಟ್ 8 ರಿಂದ ಜಾರಿಗೆ ಬರುವಂತೆ ಪರಿಷ್ಕರಣೆ ಮಾಡಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ https://swr.indianrailways.gov.in/viewdetail.jsp?lang-o&dcd-7714&id=0,4,268 ಮೇಲೆ ಕ್ಲಿಕ್ ಮಾಡಿ. ಅಥವಾ ಸಹಾಯವಾಣಿ ಸಂಖ್ಯೆ 139 ಅನ್ನು ಸಂಪರ್ಕಿಸಿ ಅಥವಾ ವೆಬ್ಸೈಟ್ಗೆ (www.enquiry.Indianrail.gov.in) ಭೇಟಿ ನೀಡಿ.
ನೈರುತ್ಯ ರೈಲ್ವೆಗೆ ಹರಿದು ಬಂತು ಹಣ
ನೈಋತ್ಯ ರೈಲ್ವೆಯ ಪ್ರಯಾಣಿಕರ ಆದಾಯವು 2024 ರ ಜುಲೈ ತಿಂಗಳಲ್ಲಿ 286.28 ಕೋಟಿ ರೂ.ಗಳಾಗಿದ್ದು, ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 7.51% ಹೆಚ್ಚಾಗಿದೆ
ನೈಋತ್ಯ ರೈಲ್ವೆಯ ಪಾರ್ಸೆಲ್ ಆದಾಯವು 2024 ರ ಜುಲೈ ತಿಂಗಳಲ್ಲಿ 14.19 ಕೋಟಿ ರೂ.ಗೆ ತಲುಪಿದೆ, ಕಳೆದ ವರ್ಷದ ಇದೇ ಅವಧಿಯಲ್ಲಿ 12.83 ಕೋಟಿ ರೂ.ಗಳಿಂದ 10.60% ಹೆಚ್ಚಳಕ್ಕೆ ಸಾಕ್ಷಿಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:00 am, Mon, 5 August 24