ಬೆಂಗಳೂರು, ಸೆಪ್ಟೆಂಬರ್ 02: ಸಿಲಿಕಾನ್ ಸಿಟಿಯಲ್ಲಿ ಒಂದು ವಾರದಿಂದ ಮಳೆಯಾಗುತ್ತಿದೆ (rain). ಪರಿಣಾಮ ತರಕಾರಿಗಳ (vegetables) ಬೆಲೆ ಕೊಂಚ ಏರಿಕೆಯಾಗಿದೆ. ಕಳೆದ ವಾರಕ್ಕಿಂತ ಈ ವಾರ 10 ರಿಂದ 20 ರೂಪಾಯಿ ಹಚ್ಚಾಗಿದ್ದು, ಹಬ್ಬದ ವೇಳೆಗೆ ಮತ್ತಷ್ಡು ದುಬಾರಿಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ತರಕಾರಿಗಳ ಬೆಲೆ ಕೆಳುತ್ತಿದ್ದಂತೆ ಗ್ರಾಹಕರು ಶಾಕ್ ಆಗುತ್ತಿದ್ದಾರೆ.
ಮಳೆಯ ಪರಿಣಾಮ ಹಾಗೂ ಹಬ್ಬದ ಸಲುವಾಗಿ ಈ ವಾರ ತರಕಾರಿಗಳ ಬೆಲೆ ಕೊಂಚ ಜಾಸ್ತಿಯಾಗಿದೆ. ಕಳೆದ ವಾರ ಟೊಮೆಟೊ ಬೆಲೆ 20 ರೂ ಇತ್ತು. ಈ ವಾರ 25 ರೂ ಆಗಿದೆ. ಇನ್ನು ಆಲೂಗಡ್ಡೆ ಕಳೆದ ವಾರ 35 ರೂ ಇತ್ತು. ಈ ವಾರ 45 ರೂ ಆಗಿದೆ. ಇನ್ನು ಈರುಳ್ಳಿಯಂತು ಮಾರುಕಟ್ಟೆಯಲ್ಲಿ ಕೆಜಿಗೆ 60 ರೂ ಇದ್ದರೆ, ತಳ್ಳುವ ಗಾಡಿಗಳಲ್ಲಿ, ಮನೆಗಳ ಅಕ್ಕಪಕ್ಕದ ಅಂಗಡಿಗಳಲ್ಲಿ 70 ರಿಂದ 100 ರವರೆಗೂ ವ್ಯಾಪಾರವಾಗುತ್ತಿದೆಯಂತೆ. ಇನ್ನು ಕ್ಯಾರೆಟ್, ಬೀನ್ಸ್, ನಾಟಿ ಬಟಾಣಿ, ಹಸಿರು ಮೆಣಸಿನಕಾಯಿ ಎಲ್ಲವೂ 100 ರ ಗಡಿದಾಟಿವೆ. ಇನ್ನು, ಹಬ್ಬಕ್ಕೆ ಈ ಬೆಲೆ ಇನ್ನು ಜಾಸ್ತಿಯಾಗುವ ಸಾಧ್ಯತೆ ಇದೆಯಂತೆ. ಹಾಗಾದರೆ ಈ ವಾರ ತರಾಕಾರಿಗಳ ಬೆಲೆ ಎಷ್ಟೇಷ್ಟು ಇದೆ ಅಂತ ನೋಡುವುದಾದರೆ,
ಈ ಬೆಲೆ ಇನ್ನು ಎರಡು ಮೂರು ದಿನದಲ್ಲಿ ದುಪ್ಪಾಟ್ಟಾಗುವ ಸಾಧ್ಯತೆ ಇದೆ. ಸದ್ಯ ಮಳೆ ಇರುವ ಕಾರಣ ಈರುಳ್ಳಿ ಸೇರಿದಂತೆ ಹಲವು ತರಕಾರಿಗಳು ಮಾರುಕಟ್ಟೆಗೆ ಬರ್ತಿಲ್ಲ. ಬೇರೆ ಬೇರೆ ರಾಜ್ಯಗಳಿಂದ ತರಕಾರಿಗಳ ಬರುತ್ತಿರುವ ಪರಿಣಾಮ ಬೇಡಿಕೆಗೆ ತಕ್ಕಷ್ಟು ತರಕಾರಿ ಪೂರೈಕೆಯಾಗುತ್ತಿದೆ. ಹೀಗಾಗಿ ತರಕಾರಿಗಳ ಬೆಲೆ ಏರಿಕೆಯಾಗಿದ್ದು, ಹಬ್ಬಕ್ಕೆ ಮತ್ತೆ 10 ರಿಂದ 20 ರೂಪಾಯಿ ಜಾಸ್ತಿಯಾಲಿದೆ.
ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳಿಂದ 8 ದಿನಗಳಲ್ಲಿ 3 ಕೋಟಿ ಮೌಲ್ಯದ ವಸ್ತುಗಳು ವಶ
ಹೀಗಾಗಿ ಈಗಾಗಲೇ ಗ್ರಾಹಕರು ತರಕಾರಿಗಳ ಖರೀದಿ ಮಾಡುತ್ತಿದ್ದಾರೆ. ನಿರೀಕ್ಷೆಗೆ ತಕ್ಕಷ್ಟು ವ್ಯಾಪಾರ ವಹಿವಾಟು ನಡೆಯುತ್ತಿಲ್ಲ. ಒಂದು ಕೆಜೆ ತೆಗೆದುಕೊಳ್ಳುವಲ್ಲಿ ಅರ್ಧ ಕೆಜೆ ಖರೀದಿ ಮಾಡುತ್ತಿದ್ದಾರೆ. ಹೀಗಾಗಿ ವ್ಯಾಪಾರ ವಹಿವಾಟು ಕಡಿಮೆ ಇದೆ ಅಂತ ವ್ಯಾಪಾರಸ್ಥ ಇನಾಯತ್ ಎಂಬುವವರು ಹೇಳಿದ್ದಾರೆ.
ಇನ್ನು ತರಕಾರಿಗಳ ಬೆಲೆ ತುಂಬ ದುಬಾರಿ ಆಗಿದೆ. ಬೆಲೆ ಕೇಳಿಯೇ ಶಾಕ್ ಆಗುತ್ತಿದೆ. ಆದರೆ ಏನು ಮಾಡುವುದಕ್ಕೆ ಆಗುವುದಿಲ್ಲ. ಹಬ್ನವನ್ನ ಮಾಡಲೇಬೇಕು. ಹಾಗಾಗಿ ಇಂದೇ ಬಂದು ತರಾಕಾರಿಗಳನ್ನ ಖರೀದಿ ಮಾಡುತ್ತಿದ್ದೇವೆ ಅಂತ ಗ್ರಾಹಕ ಮಹಿಳೆ ರತ್ನ ಎಂಬುವವರು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್ ಆರಂಭ: ಎರಡೇ ದಿನಕ್ಕೆ ಶತಕ ದಾಟಿದ ವಾಹನಗಳ ಸಂಖ್ಯೆ
ಹಬ್ಬಕ್ಕೆ ಇನ್ನು ಕೆಲ ದಿನಗಳು ಬಾಕಿ ಇರುವಾಗಲೇ ತರಕಾರಿಗಳ ಬೆಲೆ ಏರಿಕೆಯಾಗಿದ್ದು, ಹಬ್ಬದ ವೇಳೆಗೆ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.