ತುಂಗೆ-ಭದ್ರೆ ಅಬ್ಬರ.. ತೆರೆಯಿತು ಜಲಾಶಯಗಳ 28 ಗೇಟ್​: ಆಹಾ ಇದು ನಯನಮನೋಹರ!

ತುಂಗೆ-ಭದ್ರೆ ಅಬ್ಬರ.. ತೆರೆಯಿತು ಜಲಾಶಯಗಳ 28 ಗೇಟ್​: ಆಹಾ ಇದು ನಯನಮನೋಹರ!

[lazy-load-videos-and-sticky-control id=”jZU2N6Eeukw”] ದಾವಣಗೆರೆ: ರಾಜ್ಯಾದ್ಯಂತ ಭಾರಿ ಮಳೆಯಾಗುತ್ತಿರುವ ಹಿನ್ನೆಲಯಲ್ಲಿ ನದಿಗಳೆಲ್ಲಾ ಮೈದುಂಬಿ ಹರಿಯುತ್ತಿವೆ. ಇದರಿಂದ, ಅಣೆಕಟ್ಟು ಮತ್ತು ಜಲಾಶಯಗಳು ಭರ್ತಿಯಾಗುತ್ತಿದ್ದು ಹಲವೆಡೆ ಅವುಗಳಿಂದ ಅಪಾರ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗುತ್ತಿದೆ. ಅಂತೆಯೇ, ಇಂದು ದಾವಣಗೆರೆಯ ಭದ್ರಾ ಮತ್ತು ತುಂಗಾ ಡ್ಯಾಂಗಳಿಂದ ನೀರು ಬಿಡುಗಡೆ ಮಾಡಲಾಯಿತು. ಭದ್ರಾ ಜಲಾಶಯದಿಂದ ನದಿಗೆ ಸುಮಾರು 60 ಸಾವಿರ ಕ್ಯೂಸೆಕ್ ನೀರು ಹಾಗೂ ತುಂಗಾ ಡ್ಯಾಂನಿಂದ ಬರೋಬ್ಬರಿ 40 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಯಿತು. ಇದರಿಂದ, ನದಿಯಲ್ಲಿ ನೀರಿನ ಮಟ್ಟ 12ಮೀಟರ್​ಗೆ […]

KUSHAL V

| Edited By: sadhu srinath

Sep 22, 2020 | 12:23 PM

[lazy-load-videos-and-sticky-control id=”jZU2N6Eeukw”]

ದಾವಣಗೆರೆ: ರಾಜ್ಯಾದ್ಯಂತ ಭಾರಿ ಮಳೆಯಾಗುತ್ತಿರುವ ಹಿನ್ನೆಲಯಲ್ಲಿ ನದಿಗಳೆಲ್ಲಾ ಮೈದುಂಬಿ ಹರಿಯುತ್ತಿವೆ. ಇದರಿಂದ, ಅಣೆಕಟ್ಟು ಮತ್ತು ಜಲಾಶಯಗಳು ಭರ್ತಿಯಾಗುತ್ತಿದ್ದು ಹಲವೆಡೆ ಅವುಗಳಿಂದ ಅಪಾರ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗುತ್ತಿದೆ.

ಅಂತೆಯೇ, ಇಂದು ದಾವಣಗೆರೆಯ ಭದ್ರಾ ಮತ್ತು ತುಂಗಾ ಡ್ಯಾಂಗಳಿಂದ ನೀರು ಬಿಡುಗಡೆ ಮಾಡಲಾಯಿತು. ಭದ್ರಾ ಜಲಾಶಯದಿಂದ ನದಿಗೆ ಸುಮಾರು 60 ಸಾವಿರ ಕ್ಯೂಸೆಕ್ ನೀರು ಹಾಗೂ ತುಂಗಾ ಡ್ಯಾಂನಿಂದ ಬರೋಬ್ಬರಿ 40 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಯಿತು.

ಇದರಿಂದ, ನದಿಯಲ್ಲಿ ನೀರಿನ ಮಟ್ಟ 12ಮೀಟರ್​ಗೆ ಏರಿಕೆ ಆಗಿ ಇದೀಗ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹಾಗಾಗಿ, ನದಿಪಾತ್ರದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ದಾವಣಗೆರೆ ಜಿಲ್ಲಾಡಳಿತದಿಂದ ಸೂಚನೆ ಕೊಟ್ಟಿದೆ. ತುಂಗಭದ್ರಾ ನದಿಪಾತ್ರದಲ್ಲಿ ಸುಮಾರು 70 ಗ್ರಾಮಗಳಿದ್ದು ಇದರಲ್ಲಿ ಜಿಲ್ಲೆಯ ಹೊನ್ನಾಳಿ ಹಾಗೂ ಹರಿಹರ ತಾಲೂಕಿನ ಗ್ರಾಮಗಳು ಸಹ ಒಳಗೊಂಡಿದೆ.

TB ಡ್ಯಾಂನಿಂದ ನೀರು ಬಿಡುಗಡೆಯ ದೃಶ್ಯ ನಯನಮನೋಹರ! ಬಳ್ಳಾರಿ: ಇತ್ತ ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿರುವ ತುಂಗಾಭದ್ರಾ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದೆ. ಹಾಗಾಗಿ, ತುಂಗಭದ್ರಾ ಜಲಾಶಯದಿಂದ ಸುಮಾರು 65,448 ಕ್ಯೂಸೆಕ್ ನೀರನ್ನು ನದಿಗೆ ಬಿಡುಗಡೆ ಮಾಡಲಾಗಿದೆ. ಜಲಾಶಯದ 28 ಗೇಟ್​ಗಳ ಮ‌ೂಲಕ ತುಂಗಭದ್ರಾ ನದಿಗೆ ನೀರು ಬಿಡುಗಡೆ ಮಾಡಲಾಗುತ್ತಿದೆ. ಈ ಸುಂದರ ದೃಶ್ಯವನ್ನು ಕಣ್ತುಂಬಿಕೊಳ್ಳಲು ಹಲವರು ಇಲ್ಲಿ ಬರುತ್ತಿದ್ದಾರೆ.

ಈ ನಡುವೆ, ತುಂಗಾಭದ್ರಾ ನದಿ ಪಾತ್ರದ ಜನರಿಗೆ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ಒಳಹರಿವಿನ ಪ್ರಮಾಣ ನಾಳೆಯೂ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯಿದ್ದು ಯಾವುದೇ ಕ್ಷಣಾದಲ್ಲೂ ನದಿಗೆ ಮತ್ತಷ್ಟು ನೀರು ಬಿಡುವ ಪರಿಸ್ಥಿತಿಯಿದೆ. ಆದ್ದರಿಂದ, ನದಿ ಪಾತ್ರದ ಜನರಿಗೆ ಮುನ್ನೆಚ್ಚರಿಕೆ ವಹಿಸಲು TB ಡ್ಯಾಂ ಬೋರ್ಡ್ ಸೂಚಿಸಿದೆ.

Follow us on

Related Stories

Most Read Stories

Click on your DTH Provider to Add TV9 Kannada