AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈತನಿಗೆ ಹುಟ್ಟಿದ್ರೆ ಈ ರೀತಿ ಮಸೂದೆ ತರುತ್ತಿರಲಿಲ್ಲ: ಕೋಡಿಹಳ್ಳಿ ಚಂದ್ರಶೇಖರ್ ತೀಕ್ಷ್ಣ ನುಡಿ

ಬೆಂಗಳೂರು: ಪ್ರಧಾನಿ ಮೋದಿಯವರು ನಾನು ರೈತ, ರೈತನ ಮಗ ಅಂತಾ ಹೇಳ್ತಾರೆ.  ರೈತರ ಪರ ಅಂತಾರೆ. ಆದ್ರೆ  ಕೊರೋನಾ ಸಂದರ್ಭದಲ್ಲಿ ಈ ತಿದ್ದುಪಡಿ ಬೇಕಿತ್ತಾ? ಇದು ರೈತರಿಗೆ ವಿರುದ್ದವಾದ ಕೆಲಸ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಕಿಡಿಕಾರಿದ್ದಾರೆ. ರೈತನಿಗೆ ಹುಟ್ಟಿದ್ರೆ ಈ ರೀತಿ ಮಸೂದೆಯನ್ನಾ ಜಾರಿಗೆ ತರುತ್ತಿರಲಿಲ್ಲ. ಅಡ್ಡ ಹುಟ್ಟಿದವರು ಮಾತ್ರ ಈ ರೀತಿ ಕೆಲಸ ಮಾಡೋದು ಎಂದೂ ಸರ್ಕಾರದ ವಿರುದ್ದ ಕೋಡಿಹಳ್ಳಿ ಚಂದ್ರಶೇಖರ್ ತೀಕ್ಷ್ಣ ನುಡಿಗಳನ್ನಾಡಿದ್ದಾರೆ. ಇಂದು ರಾಜಧಾನಿ ಬೆಂಗಳೂರಿನಲ್ಲಿ  ಭೂ […]

ರೈತನಿಗೆ ಹುಟ್ಟಿದ್ರೆ ಈ ರೀತಿ ಮಸೂದೆ ತರುತ್ತಿರಲಿಲ್ಲ:  ಕೋಡಿಹಳ್ಳಿ ಚಂದ್ರಶೇಖರ್ ತೀಕ್ಷ್ಣ ನುಡಿ
ಕೋಡಿಹಳ್ಳಿ ಚಂದ್ರಶೇಖರ್ (ಸಂಗ್ರಹ ಚಿತ್ರ)
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Sep 21, 2020 | 11:59 AM

Share

ಬೆಂಗಳೂರು: ಪ್ರಧಾನಿ ಮೋದಿಯವರು ನಾನು ರೈತ, ರೈತನ ಮಗ ಅಂತಾ ಹೇಳ್ತಾರೆ.  ರೈತರ ಪರ ಅಂತಾರೆ. ಆದ್ರೆ  ಕೊರೋನಾ ಸಂದರ್ಭದಲ್ಲಿ ಈ ತಿದ್ದುಪಡಿ ಬೇಕಿತ್ತಾ? ಇದು ರೈತರಿಗೆ ವಿರುದ್ದವಾದ ಕೆಲಸ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಕಿಡಿಕಾರಿದ್ದಾರೆ.

ರೈತನಿಗೆ ಹುಟ್ಟಿದ್ರೆ ಈ ರೀತಿ ಮಸೂದೆಯನ್ನಾ ಜಾರಿಗೆ ತರುತ್ತಿರಲಿಲ್ಲ. ಅಡ್ಡ ಹುಟ್ಟಿದವರು ಮಾತ್ರ ಈ ರೀತಿ ಕೆಲಸ ಮಾಡೋದು ಎಂದೂ ಸರ್ಕಾರದ ವಿರುದ್ದ ಕೋಡಿಹಳ್ಳಿ ಚಂದ್ರಶೇಖರ್ ತೀಕ್ಷ್ಣ ನುಡಿಗಳನ್ನಾಡಿದ್ದಾರೆ.

ಇಂದು ರಾಜಧಾನಿ ಬೆಂಗಳೂರಿನಲ್ಲಿ  ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನಾ ಱಲಿ ನಡೆದಿದೆ. ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಿಂದ ಫ್ರೀಡಂಪಾರ್ಕ್​ವರೆಗೆ ರೈತರ ಱಲಿ ನಡೆದಿದೆ.

ಕೋಡಿಹಳ್ಳಿ ನೇತೃತ್ವದಲ್ಲಿನ  ಹೋರಾಟ ಅಂದಿದಕ್ಕೆ ವಿರೋಧ ಈ ಮಧ್ಯೆ, ಇದು ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟ ಎಂದಿದಕ್ಕೆ ಕೆಲವು ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದೆ. ಮೈಕ್ ನಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ ಎಂದು ಕೆಲವು ರೈತರು ಘೋಷಿಸುತ್ತಿದ್ದಂತೆ ರೈತ ಸಂಘಟನೆಗಳ ನಡುವೆ ಬಿರುಕು ಮೂಡಿದೆ.  ಇದು ರೈತರ ಐಕ್ಯತೆ ಹೋರಾಟ. ಇದು ಒಬ್ಬರ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲ ಎಂದು ರೈತರು ಗುಡುಗಿದ್ದಾರೆ.

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು