ಕೋಲಾರ: ನಗರದಲ್ಲಿ ಇಂದು ರೈತ ಸಂಘದಿಂದ ವಿನೂತನ ಪ್ರತಿಭಟನೆ ನಡೆಸಲಾಯಿತು. ನಗರದ ಟೇಕಲ್ ಸರ್ಕಲ್ ಬಳಿ ರಸ್ತೆ ತಡೆದು ರೈತ ಸಂಘಟನೆಯ ಸದಸ್ಯರು ಇಂದು ಪ್ರತಿಭಟನೆ ನಡೆಸಿದರು.
ಕೋಲಾರ ಜಿಲ್ಲೆಯ ಶಾಸಕ, ಸಚಿವ ಹಾಗೂ ಸಂಸದರ ಮುಖವಾಡಿ ಹಾಕಿಕೊಂಡು ರಸ್ತೆ ಮಧ್ಯೆ ಬಿದ್ದಿದ್ದ ಗುಂಡಿಯಲ್ಲಿ ನಿಂತ ಮಳೆನೀರಿಗೆ ಪ್ರತಿಭಟನಾಕಾರರು ಬಾಗಿನ ಅರ್ಪಿಸಿ ಪ್ರತಿಭಟನೆ ನಡೆಸಿದರು. ಜೊತೆಗೆ, ನಗರದಲ್ಲಿ ಬೃಹತ್ ಹೊಂಡಗಳಾಗಿ, ಕೆರೆಗಳಂತಾಗಿರುವ ರಸ್ತೆಗಳನ್ನ ಸರಿಪಡಿಸುವಂತೆ ಒತ್ತಾಯ ಮಾಡಿದರು.
ಇತ್ತೀಚೆಗೆ ಬಂದು ಮಳೆಯಿಂದ ರಸ್ತೆಗಳೆಲ್ಲಾ ಕೆರೆ ಕುಂಟೆಗಳಂತ್ತಾಗಿದೆ. ಇದರಿಂದ, ಪ್ರತಿನಿತ್ಯ ವಾಹನ ಸವಾರರು, ಸಾರ್ವಜನಿಕರು ಪರದಾಡುತ್ತಿದ್ದರೂ ಸರಿಪಡಿಸಿಲ್ಲ ಎಂದು ರೈತ ಸಂಘಟನೆ ಅರೋಪಿಸಿದೆ.