AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ತವ್ಯದಲ್ಲಿದ್ದ ಯೋಧ ಸಾವು; ಮೃತದೇಹ ಇಂದು ಅಥವಾ ನಾಳೆ ತವರಿಗೆ ಆಗಮಿಸುವ ನಿರೀಕ್ಷೆ

ಎರಡು ತಿಂಗಳ ಹಿಂದೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಯೋಧ ಎರಡು ದಿನಗಳ ಹಿಂದೆ ದಿಢೀರ್ ಅಸ್ವಸ್ಥನಾಗಿ ಛತ್ತೀಸ್​ಗಢದ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಕರ್ತವ್ಯದಲ್ಲಿದ್ದ ಯೋಧ ಸಾವು; ಮೃತದೇಹ ಇಂದು ಅಥವಾ ನಾಳೆ ತವರಿಗೆ ಆಗಮಿಸುವ ನಿರೀಕ್ಷೆ
ಯೋಧ ಬಿ.ಆರ್.ರಾಕೇಶ್
sandhya thejappa
|

Updated on:Feb 07, 2021 | 11:55 AM

Share

ಹಾಸನ: ಹಿಮಾಚಲ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ಯೋಧ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ಯೋಧ ಜಿಲ್ಲೆಯ ಅರಕಲಗೂಡು ತಾಲೂಕಿನ ಬಾಣದಹಳ್ಳಿ ನಿವಾಸಿ ಎಂದು ತಿಳಿದುಬಂದಿದೆ.

ಮೂರು ವರ್ಷದ ಹಿಂದೆ ಭಾರತೀಯ ಸೇನೆಗೆ ಸೇರಿದ್ದ ಬಿ.ಆರ್.ರಾಕೇಶ್ (23) ಎರಡು ತಿಂಗಳ ಹಿಂದೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು. ಎರಡು ದಿನಗಳ ಹಿಂದೆ ದಿಢೀರ್ ಅಸ್ವಸ್ಥನಾಗಿ ಛತ್ತೀಸ್​ಗಢದ ಮಿಲಿಟರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ (ಫೆಬ್ರವರಿ 6) ಮಧ್ಯಾಹ್ನ ಯೋಧ ಮೃತಪಟ್ಟಿದ್ದಾರೆ. ಪುತ್ರನ ಸಾವಿನಿಂದ ಕುಟುಂಬ ಸದಸ್ಯರ ಆಕ್ರಂದನ ಮುಗಿಲುಮಟ್ಟಿದ್ದು, ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ಯೋಧನ ಮೃತದೇಹ ತವರಿಗೆ ಆಗಮಿಸುವ ನಿರೀಕ್ಷೆಯಿದೆ.

ಶಿವಮೊಗ್ಗ: ಆಟವಾಡುತ್ತಿದ್ದಾಗ ಅಡಿಕೆ ನುಂಗಿ 1 ವರ್ಷದ ಮಗು ಸಾವು

Published On - 11:51 am, Sun, 7 February 21