Crime News: ಕುಡಿದ ನಶೆಯಲ್ಲಿ ತಾಯಿಯನ್ನೇ ಕೊಂದ ಮಗ

| Updated By: ಆಯೇಷಾ ಬಾನು

Updated on: Feb 05, 2024 | 3:16 PM

ಕಂಠ ಪೂರ್ತಿ ಕುಡಿದು ಮದ್ಯದ ನಶೆಯಲ್ಲಿದ್ದ ಮಗ ಕ್ಷುಲ್ಲಕ ಕಾರಣಕ್ಕೆ ಕಟ್ಟಿಗೆಯಿಂದ ಹೊಡೆದು ತಾಯಿಯನ್ನೇ ಕೊಲೆ ಮಾಡಿದ ಘಟನೆ ಕಲಬುರಗಿಯಲ್ಲಿ ನಡೆದಿದೆ. ಸದ್ಯ ಆರೋಪಿ ಮಗನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಮತ್ತೊಂದೆಡೆ ತಾಯಿ ಮಗ ಚಲಿಸುತ್ತಿದ್ದ ಬೈಕ್​ಗೆ ಹಿಂಬದಿಯಿಂದ ಕೆಎಸ್​ಆರ್​ಟಿಸಿ ಬಸ್ ಡಿಕ್ಕಿ ಹೊಡೆದಿದ್ದು ಬೈಕ್ ಹಿಂಬದಿ ಕುಳಿತಿದ್ದ ತಾಯಿ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ.

Crime News: ಕುಡಿದ ನಶೆಯಲ್ಲಿ ತಾಯಿಯನ್ನೇ ಕೊಂದ ಮಗ
ಕುಡಿದ ನಶೆಯಲ್ಲಿ ತಾಯಿಯನ್ನೇ ಕೊಂದ ಮಗ
Follow us on

ಕಲಬುರಗಿ, ಫೆ.05: ಕುಡಿದ ನಶೆಯಲ್ಲಿದ್ದ ಮಗ ಕ್ಷುಲ್ಲಕ ಕಾರಣಕ್ಕೆ ಕಟ್ಟಿಗೆಯಿಂದ ಹೊಡೆದು ತಾಯಿಯನ್ನೇ ಕೊಂದ (Murder) ಘಟನೆ ಕಲಬುರಗಿ (Kalaburagi) ಜಿಲ್ಲೆಯ ಚಿಂಚೋಳಿ ತಾಲೂಕಿನ ಪೋಚಾವರಂನಲ್ಲಿ ನಡೆದಿದೆ. ಶೋಭಾ (45) ಕೊಲೆಯಾದ ತಾಯಿ. ಅನೀಲ್ ಎಂಬಾತ ಕಟ್ಟಿಗೆಯಿಂದ ಹೊಡೆದು ಹೆತ್ತ ತಾಯಿಯನ್ನೇ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಅನೀಲ್‌ನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಕೊಂಚಾವರಂ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಪಘಾತ; ತಾಯಿ ಸ್ಥಳದಲ್ಲೇ ಸಾವು

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಕಾಚಹಳ್ಳಿ ಗ್ರಾಮದ ಬಳಿ ಅಪಘಾತ ಸಂಭವಿಸಿದೆ. ತಾಯಿ ಮಗ ಚಲಿಸುತ್ತಿದ್ದ ಬೈಕ್​ಗೆ ಹಿಂಬದಿಯಿಂದ ಕೆಎಸ್​ಆರ್​ಟಿಸಿ ಬಸ್ ಡಿಕ್ಕಿ ಹೊಡೆದಿದ್ದು ಬೈಕ್ ಹಿಂಬದಿ ಕುಳಿತಿದ್ದ ತಾಯಿ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ತಾಯಿ ನೇತ್ರಾವತಿ ಮೃತ ದುರ್ದೈವಿ. ಮಗ ರಾಜುಗೆ ಗಂಭೀರ ಗಾಯಗಳಾಗಿವೆ. ಚಿಂತಾಮಣಿ ಕೋಲಾರ ಮಾರ್ಗದ ಕೆಎಸ್​ಆರ್​ಟಿಸಿ ಬಸ್​ನಿಂದ ಅವಘಡ ಸಂಭವಿಸಿದೆ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಉಜಿರೆಯಲ್ಲಿ ಬಸ್‌ನಿಲ್ದಾಣದಲ್ಲಿ ನಿಂತಿದ್ದವರ ಮೇಲೆ ನುಗ್ಗಿದ ಲಾರಿ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಬಸ್‌ ನಿಲ್ದಾಣದಲ್ಲಿ ನಿಂತಿದ್ದವರ ಮೇಲೆಯೇ ಲಾರಿ ನುಗ್ಗಿದೆ. ಈ ಭೀಕರ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದ್ದು, ಲಾರಿ ಡಿಕ್ಕಿ ಹೊಡೆಯುತ್ತಿದ್ದಂತೆ ವಿದ್ಯುತ್ ಕಂಬಗಳು ಧರೆಗುರುಳಿವೆ. ಲಾರಿ ಗುದ್ದಿದ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ:ದಲಿತ ಕುಟುಂಬಕ್ಕೆ ಕೊಟ್ಟಿರುವ ಸರ್ಕಾರಿ ಜಮೀನಿನಲ್ಲೂ ಸೋಲಾರ್ ಹಾಕಿ ಕಂಪನಿಗಳ ಉದ್ಧಟತನ, ರೈತ ಹೈರಾಣ

ಆನೇಕಲ್‌ ಬಳಿ ಟೈರ್‌ ಬ್ಲಾಸ್ಟ್ ಆಗಿ ಬ್ಯಾರಿಕೇಡ್‌ಗೆ ಗುದ್ದಿದ ಕಾರು

ಆನೇಕಲ್ ತಾಲೂಕಿನ ಅತ್ತಿಬೆಲೆ ಟೋಲ್ ಬಳಿ ಟೈರ್ ಬ್ಲಾಸ್ಟ್ ಆಗಿ ಕಾರೊಂದು ಬ್ಯಾರಿಕೇಡ್‌ಗೆ ಗುದ್ದಿದೆ. ಬ್ಯಾರಿಕೇಡ್‌ ಬಿದ್ದು ಮೂವರು ಟೋಲ್ ಸಿಬ್ಬಂದಿಗೆ ಗಾಯವಾಗಿದೆ. ಕಾರು ಚಾಲಕನನ್ನ ವಶಕ್ಕೆ ಪಡೆಯಲಾಗಿದೆ.

ಬೆಂಗಳೂರಲ್ಲಿ ಸ್ನೇಹಿತನ ಜೊತೆ ಮಹಿಳೆ ಹೋಗಿದ್ದಕ್ಕೆ ಮನೆ ಮೇಲೆ ದಾಳಿ

ಬೆಂಗಳೂರಿನ ಕೊತ್ತನೂರು ಬಳಿ ಮಾಲ್‌ನಲ್ಲಿ ಸ್ನೇಹಿತನ ಜೊತೆ ಕಾಣಿಸಿಕೊಂಡಿದ್ದ ಮಹಿಳೆಯ ಮನೆ ಮೇಲೆ ದಾಳಿ ನಡೆಸಲಾಗಿದೆ. ಫೆ.2ರಂದು ರಾತ್ರಿ 11.30ರ ಸುಮಾರಿಗೆ ಮೂವರಿಂದ ಕೃತ್ಯ ಎಸಗಿದ್ದಾರೆ. ಎರಡು ಕಾರಿನ ಗಾಜು ಮತ್ತು ಬೈಕ್ ಜಖಂ ಗೊಳಿಸಿದ್ದಾರೆ. ಮೂವರು ಅಟ್ಟಹಾಸ ಮೆರೆದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಅಂದಹಾಗೆ, ಶರಣ್ ಎಂಬಾತನ ಜೊತೆ ಮಹಿಳೆ ಆತ್ಮೀಯವಾಗಿದ್ಲು. ಇಬ್ಬರು ಮಾಲ್‌ಗೆ ಹೋಗಿದ್ರು. ಮನೆ ಕಟ್ಟಿಸುವಾಗ ಶರಣ್ ಪರಿಚಯವಾಗಿದ್ರು. ಮನೆ ಕಟ್ಟಿಸುವಾಗ ಮೆಟಿರಿಯಲ್ಸ್‌ಗೆ ಹಣ ಕೊಟ್ಟಿದ್ದರೂ, ಅವರ ಫ್ಯಾಮಿಲಯವರು ಹಣ ಕೊಟ್ಟಿಲ್ಲ ಅಂತಾ ಗಲಾಟೆ ಮಾಡಿದ್ದಾರೆ. ಸಂಬಂಧ ಇಟ್ಟುಕೊಂಡಿದ್ದೀರಾ ಅಂತಾ ದಾಳಿ ಮಾಡಿದ್ದಾರೆ ಅಂತಾ ಮಹಿಳೆ ಆರೋಪಿಸಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ