ಆದಾಯದಲ್ಲಿ ಮೈಲಿಗಲ್ಲು ಸಾಧಿಸಿದ ನೈಋತ್ಯ ರೈಲ್ವೆ: ಹುಬ್ಬಳ್ಳಿ, ಮೈಸೂರು ವಿಭಾಗದಿಂದ ಭಾರೀ ಕೊಡುಗೆ

ನೈಋತ್ಯ ರೈಲ್ವೆ 2024-25ನೇ ಸಾಲಿನಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಿದೆ. 45.66 ಮಿಲಿಯನ್ ಟನ್ ಸರಕು ಸಾಗಣೆ, 8,340.90 ಕೋಟಿ ರೂ. ಆದಾಯ ಹಾಗೂ 3,323 ಕಿ.ಮೀ ವಿದ್ಯುದ್ದೀಕರಣ ಮುಂತಾದ ಸಾಧನೆಗಳನ್ನು ಮಾಡಿದೆ. ಹುಬ್ಬಳ್ಳಿ ಮತ್ತು ಮೈಸೂರು ವಿಭಾಗಗಳು ಗಮನಾರ್ಹ ಕೊಡುಗೆ ನೀಡಿವೆ. ಮೂಲಸೌಕರ್ಯ ಅಭಿವೃದ್ಧಿಯಲ್ಲಿಯೂ ಮೈಲಿಗಲ್ಲು ಸಾಧಿಸಿದೆ.

ಆದಾಯದಲ್ಲಿ ಮೈಲಿಗಲ್ಲು ಸಾಧಿಸಿದ ನೈಋತ್ಯ ರೈಲ್ವೆ: ಹುಬ್ಬಳ್ಳಿ, ಮೈಸೂರು ವಿಭಾಗದಿಂದ ಭಾರೀ ಕೊಡುಗೆ
ಪ್ರಾತಿನಿಧಿಕ ಚಿತ್ರ

Updated on: Apr 02, 2025 | 8:11 AM

ಬೆಂಗಳೂರು, ಏಪ್ರಿಲ್​ 02: ನೈಋತ್ಯ ರೈಲ್ವೆ ವಲಯವು (South Western Railway) 2024-25ನೇ ಸಾಲಿನ ಆರ್ಥಿಕ ವರ್ಷದಲ್ಲಿ ಮಹತ್ವದ ಸಾಧನೆ ಮಾಡಿದೆ. ಸರಕು ಸಾಗಣಿಕೆ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಗಮನಾರ್ಹ ಮೈಲಿಗಲ್ಲುಗಳನ್ನು ಸಾಧಿಸಿದೆ. ಬಂದ ಸವಾಲುಗಳನ್ನು ಎದುರಿಸುವ ಮೂಲಕ ನೈಋತ್ಯ ರೈಲ್ವೆ ವಲಯವು ಆದಾಯ ಉತ್ಪಾದನೆಯಲ್ಲಿ ಹೊಸ ದಾಖಲೆ ಬರೆದಿದೆ. ನೈಋತ್ಯ ರೈಲ್ವೆ 45.66 ಮಿಲಿಯನ್ ಟನ್ ಸರಕು ಸಾಗಣೆ ಮಾಡಿದ್ದು, ಹುಬ್ಬಳ್ಳಿ ವಿಭಾಗವು 32.69 ಮಿಲಿಯನ್ ಟನ್ ಮತ್ತು ಮೈಸೂರು ವಿಭಾಗವು ಗುರಿಯನ್ನು ಮೀರಿ 10.89 ಮಿಲಿಯನ್ ಟನ್ ಸಾಧಿಸಿದೆ.

ಒಟ್ಟು 8,340.90 ಕೋಟಿ ರೂ ಆದಾಯ 

ಈ ಬಗ್ಗೆ ಟ್ವೀಟ್ ಮಾಡಿರುವ ನೈಋತ್ಯ ರೈಲ್ವೆ, 2024-25 ರ ಆರ್ಥಿಕ ವರ್ಷದಲ್ಲಿ ಸರಕು ಸಾಗಣೆ, ಆದಾಯ ಉತ್ಪಾದನೆ ಹಾಗೂ ಮೂಲಸೌಕರ್ಯ ಅಭಿವೃದ್ದಿಯ ದೃಷ್ಟಿಯಲ್ಲಿ ಮಹತ್ತದ ಸಾಧನೆಗಳನ್ನು ಮಾಡಿದೆ. ಆರ್ಥಿಕ ಕಾರ್ಯಕ್ಷಮತೆಯಲ್ಲಿ ವಿವಿಧ ಆದಾಯಗಳ ಮೂಲಕ ಗಣನೀಯ ಬೆಳವಣಿಗೆಯನು ಸಾಧಿಸಿರುವ ನೈಋತ್ತ ರೈಲೆ, ಪ್ರಯಾಣಿಕರ ಆದಾಯವನು 3,172.82 ಕೋಟಿ ರೂ. ಹೆಚ್ಚಿಸಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಆದಾಯ 3,090.5 ಕೋಟಿ ರೂ. ಇತ್ತು. ಇತರ ಕೋಚಿಂಗ್ ಆದಾಯವು 328.26 ಕೋಟಿ ರೂ.ಯಿಂದ 335.24 ಕೋಟಿ ರೂ ಏರಿಕೆಯಾಗಿದೆ. ಪಾರ್ಸೆಲ್ ಆದಾಯವು ಕಳೆದ ವರ್ಷ 157.77 ಕೋಟಿ ರೂ. ಆಗಿದ್ದರೆ, ಈ ವರ್ಷ 166.6 ಕೋಟಿ ರೂ. ಏರಿಕೆ ಕಂಡಿದೆ. ಒಟ್ಟು ಆದಾಯ 8,340.90 ಕೋಟಿ ರೂ.ಗೆ ತಲುಪಿದ್ದು, ಇದು ನೈಋತ್ತ ರೈಲೆಯ ಬಲವಾದ ಆರ್ಥಿಕ ಸ್ಥಿರತೆಯನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದೆ.

ಇದನ್ನೂ ಓದಿ
ನಮ್ಮ ಮೆಟ್ರೋ ಗುಡ್ ನ್ಯೂಸ್: ಐಪಿಎಲ್ ಪ್ರಯುಕ್ತ ಸಂಚಾರ ಸಮಯ ವಿಸ್ತರಣೆ
ಬೆಂಗಳೂರಿನಲ್ಲಿ ಆರ್​ಸಿಬಿ ಪಂದ್ಯ; ಪಾರ್ಕಿಂಗ್ ವಿವರ, ಸಂಚಾರ ಸಲಹೆ ಇಲ್ಲಿದೆ
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹೆಲಿಪ್ಯಾಡ್ ನಿರ್ಮಿಸಲು ಕ್ರಮ
ಈ ಸೈಟ್​ನಲ್ಲಿ ಅರ್ಜಿ ಸಲ್ಲಿಸಿದ್ರೆ ಎರಡೇ ದಿನಗಳಲ್ಲಿ ಸಿಗುತ್ತೆ ಇ ಖಾತಾ!

ಇದನ್ನೂ ಓದಿ: ನಮ್ಮ ಮೆಟ್ರೋ ಟಿಕೆಟ್​ ದರ ಏರಿಕೆ ಪ್ರಶ್ನಿಸಿ ಸಲ್ಲಿಸಿದ್ದ ಪಿಐಎಲ್​ ವಜಾ

ವಾಣಿಜ್ಯ ಆದಾಯವೂ ಮಹತ್ತರ ಏರಿಕೆ ಕಂಡಿದ್ದು, 2023-24 ರ 78.90 ಕೋಟಿ ರೂಪಾಯಿಯಿಂದ ಈ ವರ್ಷ 91.60 ಕೋಟಿ ರೂಪಾಯಿಗೆ ತಲುಪಿದೆ. ಪ್ರಯಾಣಿಕರ ಸಂಖ್ಯೆಯಲ್ಲಿಯೂ ಏರಿಕೆಯಾಗಿದ್ದು, 165.51 ಮಿಲಿಯನ್ ಪ್ರಯಾಣಿಕರು ಪ್ರಯಾಣಿಸಿದರೆ, ಹಿಂದಿನ ವರ್ಷ ಈ ಸಂಖ್ಯೆ 162.16 ಮಿಲಿಯನ್ ಆಗಿತ್ತು ಎಂದು ಉಲ್ಲೇಖಿಸಲಾಗಿದೆ.

45.66 ಮಿಲಿಯನ್ ಟನ್ ಸರಕು ಸಾಗಟ

2024-25 ನೇ ಹಣಕಾಸು ವರ್ಷದಲ್ಲಿ ನೈಋತ್ತ ರೈಲ್ವೆ ಒಟ್ಟು 45.66 ಮಿಲಿಯನ್ ಟನ್ ಸರಕು ಸಾಗಣೆ ಮಾಡುವ ಮೂಲಕ ದಾಖಲೆ ಮಾಡಿದೆ. ಇದರಲ್ಲಿ ಹುಬ್ಬಳ್ಳಿ ವಿಭಾಗವು 32.69 ಮಿಲಿಯನ್ ಟನ್ ಸರಕು ಸಾಗಿಸುವ ಮೂಲಕ ಪ್ರಮುಖ ಪಾತ್ರ ವಹಿಸಿದ್ದರೆ, ಮೈಸೂರು ವಿಭಾಗವು 10.89 ಮಿಲಿಯನ್ ಟನ್ ಗುರಿಯನ್ನು ಮೀರಿಸುವ ಮೂಲಕ ಮಹತ್ತರ ಸಾಧನೆ ಮಾಡಿದೆ. ಉಳಿದ ಲೋಡಿಂಗ್ ಅನು ಬೆಂಗಳೂರು ವಿಭಾಗ ನಿರ್ವಹಿಸಿದೆ. ಮಾರ್ಚ್ 2025 ರಲ್ಲಿ, ನೈಋತ್ತ ರೈಲ್ವೆ ತನ್ನ ಅತ್ತಧಿಕ ಮಾಸಿಕ ಸರಕು ಸಾಗಣೆ 5.024 ಮಿಲಿಯನ್ ಟನ್ ಅನು ದಾಖಲಿಸಿದ್ದು, ಇದು ಆರ್ಥಿಕ ವರ್ಷದ ಅತ್ಯುತ್ತಮ ಕಾರ್ಯಕ್ಷಮತೆಯಾಗಿದೆ. ಈ ವರ್ಷ, ರೈಲ್ವೆ ವಲಯವು 2.56 ಮಿಲಿಯನ್ ಟನ್ ಖನಿಜ ತೈಲವನು ಲೋಡ್ ಮಾಡುವ ಮೂಲಕ ಹೊಸ ಮಾನದಂಡವನ್ನು ಸ್ಥಾಪಿಸಿದೆ. ಅದೇ ರೀತಿ, ಒಂದೇ ದಿನದಲ್ಲಿ 3,870 ಎಂಟು ಚಕ್ರಗಳ ವಾಹನಗಳನ್ನು ಲೋಡ್ ಮಾಡಿದ್ದು, ಈ ವರ್ಷ ದಾಖಲಾದ ಅತಿ ಹೆಚ್ಚಿನ ಲೋಡ್ ಆಗಿದೆ.

ನೈಋತ್ಯ ರೈಲ್ವೆ ಟ್ವೀಟ್​

ನೈಋತ್ತ ರೈಲ್ವೆ ತನ್ನ ಉತ್ತಮ ಕಾರ್ಯಕ್ಷಮತೆಯನ್ನು ಮುಂದುವರಿಸಿಕೊಂಡು 2.26 ಮಿಲಿಯನ್ ಟನ್ ಖನಿಜ ತೈಲ ಲೋಡ್ ಮಾಡಿದೆ. ಇದರಿಂದ 2023-24 ರ 2.11 ಮಿಲಿಯನ್ ಟನ್ ಗರಿಷ್ಟ ದಾಖಲೆಯನು ಮೀರಿಸುವಲ್ಲಿ ಯಶಸ್ವಿಯಾಗಿದೆ. ಉಕ್ಕು ತಯಾರಿಕಾ ಸ್ಥಾವರಗಳಿಗೆ ಕಚ್ಚಾ ವಸ್ತುಗಳ ಲೋಡ್ 1.31 ಮಿಲಿಯನ್ ಟನ್‌ ತಲುಪಿದ್ದು, ಇದೂ ಸಹ ಹಿಂದಿನ ವರ್ಷ 1.10 ಮಿಲಿಯನ್ ಟನ್ ಮೀರಿಸಿದೆ. ಡೋಲಮೈಟ್ ಲೋಡ್ ಕೂಡ ಗಣನೀಯ ಏರಿಕೆಯನು ಕಂಡು 0.113 ಮಿಲಿಯನ್ ಟನ್ ತಲುಪಿದ್ದು, ಹಿಂದಿನ ವರ್ಷ 0.052 ಮಿಲಿಯನ್ ಟನ್ ಆಗಿತ್ತು. ಮಾರ್ಚ್ 2025 ರಲ್ಲಿ ಕಬ್ಬಿಣದ ಅದಿರು ಲೋಡ್ 2.02 ಮಿಲಿಯನ್ ಟನ್ ಆಗಿದ್ದು, ಇದು ಆರ್ಥಿಕ ವರ್ಷದ ಗರಿಷ್ಠ ದಾಖಲಾಗಿದ್ದು, ಮಾರ್ಚ್ 31, 2025 ರಂದು, ನೈಋತ್ಯ ರೈಲ್ವೆ ಒಂದೇ ದಿನದಲ್ಲಿ 29 ರೇಕ್‌ಗಳು ಹಾಗೂ 1,539 ಯುನಿಟ್‌ಗಳನ್ನು ಲೋಡ್ ಮಾಡುವ ಮೂಲಕ ಉಕ್ಕು ಲೋಡಿಂಗ್‌ನಲ್ಲಿ ಹೊಸ ಮೈಲಿಗಲ್ಲನ್ನು ಸಾಧಿಸಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

3,323 ಕಿ.ಮೀ ವಿದ್ಯುದ್ದೀಕರಣ

ಮೂಲಸೌಕರ್ಯ ಅಭಿವೃದ್ಧಿಯ ದೃಷ್ಟಿಯಿಂದಲೂ ನೈಋತ್ತ ರೈಲ್ವೆ ಮಹತದ ಪ್ರಗತಿಯನೂ ಸಾಧಿಸಿದೆ. ಕಾರ್ಯಾಚರಣೆಯ ದಕ್ಷತೆಯನು ಹೆಚ್ಚಿಸಲು ತನ್ನ ಜಾಲವನು ಬಲಪಡಿಸುತ್ತಾ, 67.57 ಮಾರ್ಗ ಕಿ.ಮೀ ವಿದ್ಯುದ್ದೀಕರಣವನು ಪೂರ್ಣಗೊಳಿಸಿದೆ. ಇದರಿಂದ ನೈಋತ್ಯ ರೈಲೆಯ ವ್ಯಾಪ್ತಿಯ 3,692 ಕಿ.ಮೀ ಪೈಕಿ 3,323 ಕಿ.ಮೀ ವಿದ್ಯುದ್ದೀಕರಣಗೊಂಡಿದೆ. ಅಲ್ಲದೇ, 26.5 ಕಿ.ಮೀ ಹೊಸ ರೈಲ್ವೆ ಮಾರ್ಗಗಳನ್ನು ಯಶಸ್ವಿಯಾಗಿ ನಿರ್ಮಾಣ ಮಾಡಿದ್ದು, 39.1 ಕಿ.ಮೀ ದ್ವಿಪಥ ಮಾರ್ಗವನ್ನು ಪೂರ್ಣಗೊಳಿಸಿದೆ. ಈ ಮೂಲಕ ರೈಲು ಸಂಚಾರ ಸಾಮರ್ಥ್ಯ ಮತ್ತು ಸಂಪರ್ಕವನ್ನು ಇನ್ನಷ್ಟು ಸುಧಾರಿಸಿದೆ.

ಸರಕು ಸಾಗಣೆ, ಆದಾಯ ಉತ್ಪಾದನೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ನೈಋತ್ಯ ರೈಲ್ವೆ ತೋರಿದ ಅಪೂರ್ವ ಸಾಧನೆಗಳು, ದಕ್ಷತೆ ಮತ್ತು ಸೇವಾ ಗುಣಮಟ್ಟದಲ್ಲಿ ಈ ವಲಯದ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ. ಈ ಸಾಧನೆಗಳೊಂದಿಗೆ, ನೈಋತ್ತ ರೈಲ್ವೆ ಸರಕು ಹಾಗೂ ಪ್ರಯಾಣಿಕರ ಸೇವೆಗಳಲ್ಲಿ ತನ್ನ ಸೇವಾ ಮಟ್ಟವನು ಇನಷ್ಟು ಬಲಪಡಿಸುತ್ತಾ, ಭವಿಷ್ಯದ ಪ್ರಗತಿಗಾಗಿ ಉತ್ತಮ ಸಂಪರ್ಕ ಮತ್ತು ತಡೆರಹಿತ ಕಾರ್ಯಾಚರಣೆಯನ್ನು ಖಾತ್ರಿಪಡಿಸುತ್ತಿದೆ.

ಇದನ್ನೂ ಓದಿ: ಕರ್ನಾಟಕ ಸರ್ಕಾರದಿಂದ ಜನರಿಗೆ ಮತ್ತೊಂದು ಬರೆ: ಡೀಸೆಲ್​​ ದರ ಏರಿಕೆ

ಪ್ರಧಾನ ವ್ಯವಸ್ಥಾಪಕ ಮುಕುಲ್ ಸರನ್ ಮಾಥುರ್ ಅವರು ನೈಋತ್ತ ರೈಲೆಯ ಉದ್ಯೋಗಿಗಳ ಸಾಧನೆಯನ್ನು ಅಭಿನಂದಿಸಿದ್ದಾರೆ. ರೈಲೆಯ ಸೇವೆಯಲ್ಲಿ ಸುರಕ್ಷತೆಯ ಆದ್ಯತೆಯಾಗಿ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದ್ದು, ಮುಂದಿನ ವರ್ಷ ನೈಋತ್ಯ ರೈಲ್ವೆ ಇನ್ನಷ್ಟು ಉತ್ತಮ ಕಾರ್ಯಕ್ಷಮತೆಯನ್ನು ಸಾಧಿಸಲು ಎಲ್ಲರಿಗೂ ಪ್ರೋತ್ಸಾಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.