Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ ಮೆಟ್ರೋ ಟಿಕೆಟ್​ ದರ ಏರಿಕೆ ಪ್ರಶ್ನಿಸಿ ಸಲ್ಲಿಸಿದ್ದ ಪಿಐಎಲ್​ ವಜಾ

ಇದೇ ಫೆಬ್ರವರಿ ತಿಂಗಳಲ್ಲಿ ನಮ್ಮ ಮೆಟ್ರೋ ಟಿಕೆಟ್​ ದರವನ್ನು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಏರಿಕೆ ಮಾಡಿತ್ತು. ಟಿಕೆಟ್​ ದರ ಏರಿಕೆಗೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ, ಮೆಟ್ರೋದಲ್ಲಿ ಪ್ರಯಾಣಿಸುವವರ ಸಂಖ್ಯೆಯೂ ಕಡಿಮೆಯಾಗಿದೆ. ಈ ನಡುವೆ ಮೆಟ್ರೋ ಟಿಕೆಟ್​ ದರ ಏರಿಕೆ ಪ್ರಶ್ನಿಸಿ ಹೈಕೋರ್ಟ್​ನಲ್ಲಿ ಪಿಐಎಲ್​ ಸಲ್ಲಿಸಲಾಗಿತ್ತು.

ನಮ್ಮ ಮೆಟ್ರೋ ಟಿಕೆಟ್​ ದರ ಏರಿಕೆ ಪ್ರಶ್ನಿಸಿ ಸಲ್ಲಿಸಿದ್ದ ಪಿಐಎಲ್​ ವಜಾ
ನಮ್ಮ ಮೆಟ್ರೋ, ಹೈಕೋರ್ಟ್​
Follow us
Ramesha M
| Updated By: ವಿವೇಕ ಬಿರಾದಾರ

Updated on:Apr 01, 2025 | 5:39 PM

ಬೆಂಗಳೂರು, ಏಪ್ರಿಲ್​ 01: ನಮ್ಮ ಮೆಟ್ರೋ (Namma Metro) ಟಿಕೆಟ್​ ದರ (Ticket Price) ಏರಿಕೆ ಪ್ರಶ್ನಿಸಿ ಸನತ್ ಕುಮಾರ್ ಶೆಟ್ಟಿ ಎಂಬುವರು ಸಲ್ಲಿಸಿದ್ದ ಪಿಐಎಲ್ ಅನ್ನು ಹೈಕೋರ್ಟ್ (High Court) ವಜಾಗೊಳಿಸಿದೆ. “ಮೆಟ್ರೋ ಆಡಳಿತ ಮಂಡಳಿಗೆ ದರ ಏರಿಕೆ ಅಧಿಕಾರವಿದೆ. ತಜ್ಞರು ಕೈಗೊಳ್ಳುವ ತೀರ್ಮಾನಗಳಲ್ಲಿ ಕೋರ್ಟ್ ಮಧ್ಯಪ್ರವೇಶ ಸಾಧ್ಯವಿಲ್ಲ. ದರ ನಿಗದಿ ಸಮಿತಿಯೇ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕುಎಂದು ಸಿಜೆ ಎನ್​.ವಿ. ಅಂಜಾರಿಯಾ, ನ್ಯಾ. ಕೆ.ವಿ.ಅರವಿಂದ್​​ ಅವರಿದ್ದ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.

ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆ

ನಮ್ಮ ಮೆಟ್ರೋದ ಪ್ರಯಾಣದರವನ್ನು ಏರಿಕೆಯಾಗುತ್ತಿದ್ದಂತೆ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿತ್ತು. ಫೆಬ್ರವರಿ 10 ರಂದು ಸೋಮವಾರ ಹಿಂದಿನ ವಾರಕ್ಕೆ ಹೋಲಿಸಿದರೆ 8.29 ಲಕ್ಷ ಮಂದಿ ಪ್ರಯಾಣಿಸಿದ್ದಾರೆ, ಸಂಖ್ಯೆಯಲ್ಲಿ 4ರಷ್ಟು ಕುಸಿತ ಕಂಡುಬಂದಿತ್ತು.

ಏರೋ ಇಂಡಿಯಾ 2025 ಇರುವುದರಿಂದ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳಿದ್ದಾರೆ. ಪರಿಷ್ಕರಣೆಯ ನಂತರ ಕನಿಷ್ಠ ಟಿಕೆಟ್ ದರ 10 ರೂಪಾಯಿಗಳಾಗಿದ್ದು, ಗರಿಷ್ಠ ಟಿಕೆಟ್ ದರವನ್ನು ಶೇ. 50 ರಷ್ಟು ಹೆಚ್ಚಿಸಲಾಗಿದ್ದು, 60 ರೂಪಾಯಿಗಳಿಂದ 90 ರೂಪಾಯಿಗಳಿಗೆ ಏರಿಕೆಯಾಗಿದೆ.

ಇದನ್ನೂ ಓದಿ
Image
ದರ ಏರಿಕೆ: ಮೆಟ್ರೋ ಪ್ರಯಾಣಿಕರ ಪರ್ಯಾಯ ವ್ಯವಸ್ಥೆ, ಟ್ರಾಫಿಕ್​ ಸಮಸ್ಯೆ
Image
ಬಿಎಂಆರ್​ಸಿಎಲ್ ನಮ್ಮ ಮೆಟ್ರೋ ಪ್ರಯಾಣ ದರವನ್ನು ಏರಿಕೆ ಮಾಡಿದ್ಯಾಕೆ?
Image
ಇದೇ ತಿಂಗಳು ಬೆಂಗಳೂರಿಗೆ ಬರಲಿದೆ ನಮ್ಮ ಮೆಟ್ರೋ ಹಳದಿ ಮಾರ್ಗದ ಮೊದಲ ರೈಲು
Image
ಜನವರಿಯಲ್ಲಿ ನಮ್ಮ ಮೆಟ್ರೋಗೆ ಬರಲಿವೆ ಎರಡು ಹೊಸ ರೈಲು

ಇದನ್ನೂ ಓದಿ: ನಮ್ಮ ಮೆಟ್ರೋಗೆ ಆದಾಯ ಕೊರತೆ: ಜಾಹೀರಾತು ಮೊರೆ ಹೋದ ಬಿಎಂಆರ್​ಸಿಎಲ್

ಮೆಟ್ರೋ ಪ್ರಯಾಣಿಕರ ಅಂಕಿ-ಸಂಖ್ಯೆ

ಪ್ರಯಾಣ ದರ ಏರಿಕೆಗೂ ಮೊದಲು ಫೆ.8 ರಂದು 8.07 ಲಕ್ಷ ಪ್ರಯಾಣಿಕರು ಪ್ರಯಾಣ ಫೆ.9ರಂದು ದರ ಏರಿಕೆ ಬಳಿಕ ಪ್ರಯಾಣಿಕರ ಸಂಖ್ಯೆ 6.23 ಲಕ್ಷಕ್ಕೆ ಇಳಿಕೆ ಫೆಬ್ರುವರಿ 10 ರಂದು ಪ್ರಯಾಣಿಕರ ಸಂಖ್ಯೆ 8.28 ಲಕ್ಷ ಫೆಬ್ರುವರಿ 11 ರಂದು ಪ್ರಯಾಣಿಕರ ಸಂಖ್ಯೆ 7.78 ಲಕ್ಷಕ್ಕೆ ಇಳಿಕೆ

ಪ್ರಯಾಣಿಕರ ಸಂಖ್ಯೆ ಕುಂಠಿತವಾಗುತ್ತಿದ್ದಂತೆಯೇ ಸಹಜವಾಗಿ ಕಲೆಕ್ಷನ್​ ಸಹ ಕಡಿಮೆಯಾಗಿದೆ. ದರ ಏರಿಕೆ ಮಾಡುವ ಮೊದಲು ಒಂದು ದಿನಕ್ಕೆ 2 ಕೋಟಿ ರೂಪಾಯಿಂದ 2.50 ಕೋಟಿ ರುಪಾಯಿ ಕಲೆಕ್ಷನ್ ಆಗುತ್ತಿತ್ತು. ದರ ಏರಿಕೆ ಬಳಿಕ ದಿನಕ್ಕೆ ಒಂದೂವರೆಯಿಂದ 2 ಕೋಟಿ ರೂ.ವರೆಗೆ ಮಾತ್ರ ಕಲೆಕ್ಷನ್ ಆಗುತ್ತಿದ್ಯಂತೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:16 pm, Tue, 1 April 25