Assembly Session: ಸ್ಪೀಕರ್ ಖಾದರ್ ನ್ಯಾಯಯುತವಾಗಿ ಸದನ ನಡೆಸದೆ ದಿನಕ್ಕೊಂದು ರೂಲಿಂಗ್ ನೀಡಿದ್ದಾರೆ: ಅರ್ ಅಶೋಕ

|

Updated on: Jul 24, 2024 | 6:26 PM

Assembly Session: ವಿರೋಧ ಪಕ್ಷದ ನಾಯಕ ಅಶೋಕ ಮತ್ತು ಸ್ಪೀಕರ್ ಯುಟಿ ಖಾದರ್ ನಡುವೆ ವಾಗ್ವಾದ ಜಾರಿಯಲ್ಲಿರುವಾಗಲೇ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್ ಕೆ ಪಾಟೀಲ್ ಅವರು ಧನ ವಿನಿಯೋಗ ವಿಧೇಯಕವನ್ನು ಮಂಡಿಸಲು ಎದ್ದು ನಿಲ್ಲುತ್ತಾರೆ.

ಬೆಂಗಳೂರು: ವಿಧಾನ ಸಭೆಯಲ್ಲಿ ವಿರೋಧ ಪಕ್ಷದ ನಾಯಕರು ಮುಡಾ ಹಗರಣದ ಮೇಲೆ ಚರ್ಚೆಗೆ ಅವಕಾಶ ನೀಡಬೇಕೆಂದು ಕೋರಿದರೂ ಸರ್ಕಾರದಿಂದ ಮಂಡಿಸಲಾದ ವಿಧೇಯಕಗಳನ್ನು ಧ್ವನಿಮತಕ್ಕೆ ಹಾಕುವಲ್ಲಿ ಮಗ್ನರಾಗಿದ್ದ ಸ್ಪೀಕರ್ ಯುಟಿ ಖಾದರ್ ಅವಕಾಶ ಕೊಡಲಿಲ್ಲ. ಗಲಾಟೆಯ ನಡುವೆಯೇ ಅವರು, ಕರ್ನಾಟಕ ಮುನಿಸಿಪಾಲಿಟಿ ಮತ್ತು ಇತರ ಕಾನೂನುಗಳ ತಿದ್ದುಪಡಿ ವಿಧೇಯಕವನ್ನು ಪಾಸು ಮಾಡಿಸುತ್ತಾರೆ. ಅದರೆ ಬಿಜೆಪಿ ಸದಸ್ಯರ ಗಲಾಟೆ ಹೆಚ್ಚಾದಾಗ ಅವರು, ಹಿಂದೆ ನಡೆದ ಹಗರಣಗಳನ್ನು ಚರ್ಚಿಸಲು ಅನುಮತಿ ನೀಡಿ ಹೊಸ ಸಂಪ್ರದಾಯವನ್ನು ಶುರುಮಾಡಲು ಬರಲ್ಲ, ನೀವೇ ಸೈಟು ಕೊಡುತ್ತೀರಿ ಆಮೇಲೆ ಅದನ್ನು ಅಕ್ರಮ ಎನ್ನುತ್ತೀರಿ, ಹತ್ತು ದಿನಗಳ ಕಾಲ ಮುಡಾ ಹಗರಣದ ಬಗ್ಗೆ ಚಕಾರವೆತ್ತದ ನೀವು ಇವತ್ತು ಬರೀ ಅದನ್ನೇ ಮಾತಾಡುತ್ತಿದ್ದೀರಿ ಎಂದರು. ಅದಕ್ಕೆ ಪ್ರತಿಪಕ್ಷ ನಾಯಕ ಅಶೋಕ, ನೀವು ನ್ಯಾಯಯುತವಾದ ಚರ್ಚೆ ನಡೆಸಲು ಅವಕಾಶ ನೀಡಿಲ್ಲ, ಪಕ್ಷಾಪಾತ ಮಾಡುತ್ತಾ ದಿನಕ್ಕೊಂದು ರೂಲಿಂಗ್ ನೀಡಿದ್ದೀರಿ ಅಂತ ರೋಷದಲ್ಲಿ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಚಂದ್ರಶೇಖರ ಶ್ರೀಗಳು ನೀಡಿದ ಹೇಳಿಕೆಗೆ ವಿರೋಧ ಪಕ್ಷದ ನಾಯಕ ಆರ್ ಅಶೋಕ ತಮ್ಮ ವ್ಯಾಖ್ಯಾನ ನೀಡಿದರು!