ಮಾಜಿ ಸಚಿವ ಎಸ್ಆರ್ ಪಾಟೀಲ್ಗೆ ಪರಿಷತ್ ಅತ್ಯುತ್ತಮ ಶಾಸಕ ಪ್ರಶಸ್ತಿ
ಸಜ್ಜನ ಹಿರಿಯ ರಾಜಕಾರಣಿ ಮಾಜಿ ಸಚಿವ ಎಸ್.ಆರ್.ಪಾಟೀಲ್ ಅವರಿಗೆ 2021ನೇ ಸಾಲಿನ ಅತ್ಯುತ್ತಮ ಪರಿಷತ್ ಶಾಸಕ ಪ್ರಶಸ್ತಿ ಲಭಿಸಿದೆ.
ಬಾಗಲಕೋಟ: ಸಜ್ಜನ ಹಿರಿಯ ರಾಜಕಾರಣಿ ಮಾಜಿ ಸಚಿವ ಎಸ್.ಆರ್.ಪಾಟೀಲ್ (SR Patil) ಅವರಿಗೆ 2021ನೇ ಸಾಲಿನ ಅತ್ಯುತ್ತಮ ಪರಿಷತ್ (Vidhan Parishad) ಶಾಸಕ (MLA) ಪ್ರಶಸ್ತಿ ಘೋಷಣೆಯಾಗಿದೆ. ಜು. 18ರಂದು ಸಂಜೆ 6 ಗಂಟೆಗೆ ವಿಧಾನಸೌಧದ 3ನೇ ಮಹಡಿಯಲ್ಲಿನ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನೆರವೇರಲಿದೆ. ಪ್ರಶಸ್ತಿ ಸ್ವೀಕರಿಸಲು ಆಹ್ವಾನ ನೀಡಿ ಎಸ್.ಆರ್. ಪಾಟೀಲ್ ಅವರಿಗೆ ವಿಧಾನಪರಿಷತ್ ಕಾರ್ಯದರ್ಶಿ ಮೀನಾ ನಾಯಕ್ ಅವರು ಪತ್ರ ಬರೆದಿದ್ದಾರೆ.
ಎಸ್.ಆರ್.ಪಾಟೀಲ್ ಕಳೆದ ನಾಲ್ಕು ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ಜವಾಬ್ದಾರಿ ನಿರ್ವಹಿಸಿದ್ದಾರೆ. 24 ವರ್ಷ ಮೇಲ್ಮನೆ ಸದಸ್ಯರಾಗಿ, ವಿರೋಧ ಪಕ್ಷದ ನಾಯಕರಾಗಿ, ಸಭಾ ನಾಯಕರಾಗಿ ಹಾಗೂ ಮೂರು ವರ್ಷ ಸಚಿವರಾಗಿದ ಕಾರ್ಯ ನಿರ್ವಹಿಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ನಾಮನಿರ್ದೇಶಿತ ಎಂಎಲ್‌ಸಿಗಳ ಆಯ್ಕೆ ಕಗ್ಗಂಟು: ಬಹಿರಂಗ ಪತ್ರ ವೈರಲ್
ಇವರು ವಿಧಾನಸಭೆ ಚುನಾವಣೆಯಲ್ಲಿ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಟಿಕೆಟ್ ಸಿಗಲಿಲ್ಲ. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಎಸ್ ಆರ್ ಪಾಟೀಲ್ ಈಚಿನ ದಿನಗಳಲ್ಲಿ ನನಗೆ ಆರಿ ಬಾರಿ ವಿವಿಧ ಹಂತದ ಅವಕಾಶ ಕೈತಪ್ಪಿದವು. ಆದರೂ, ನಾನು ಮೌನವಾಗಿದ್ದೆ. ನನಗೆ ಸಿಗಬೇಕಾದ ಅವಕಾಶ ವಂಚಿತನಾಗುವಲ್ಲಿ ಧರ್ಮ ವಿಭಜಕರ ಕೈ ಮೇಲಾಗಿದೆ ಎಂದು ಅಸಮಾಧಾನ ಹೊರ ಹಾಕಿದ್ದರು.
ಇದಾದ ನಂತರ ಎಂಎಲ್ಸಿ ಟಿಕೆಟ್ ಸಹ ಕೈ ತಪ್ಪಿದೆ. ಈ ಮೂಲಕ ಕಾಂಗ್ರೆಸ್ ಎಸ್ ಆರ್ ಪಾಟೀಲ್ ಅವರನ್ನು ಕಡೆಗಣನೆ ಮಾಡಿದೆ ಎಂಬ ಅನುಮಾನ ಜನರಲ್ಲಿ ವ್ಯಕ್ತವಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ