Karnataka SSLC Classes: ಮೇ 4ರವರೆಗೆ ಎಸ್​ಎಸ್​ಎಲ್​ಸಿ ತರಗತಿಗಳು ಬಂದ್; ಶಿಕ್ಷಣ ಇಲಾಖೆ ಆದೇಶ

ಈ ಅವಧಿಯಲ್ಲಿ 10ನೇ ತರಗತಿಗೆ ವರ್ಚುವಲ್ ಅಥವಾ ದೂರವಾಣಿ ಮೂಲಕ ಪಾಠ ಮಾಡಲು ಸೂಚನೆ ನೀಡಲಾಗಿದೆ. ಶಿಕ್ಷಣ ಇಲಾಖೆ ಈ ಕುರಿತು ಅಧಿಕೃತ ಆದೇಶ ಪ್ರಕಟಿಸಿದೆ.

Karnataka SSLC Classes: ಮೇ 4ರವರೆಗೆ ಎಸ್​ಎಸ್​ಎಲ್​ಸಿ ತರಗತಿಗಳು ಬಂದ್; ಶಿಕ್ಷಣ ಇಲಾಖೆ ಆದೇಶ
ಪ್ರಾತಿನಿಧಿಕ ಚಿತ್ರ
Follow us
guruganesh bhat
|

Updated on:Apr 21, 2021 | 6:31 PM

ಬೆಂಗಳೂರು: ಮೇ 4ರವರೆಗೆ ಎಸ್​​ಎಸ್​​ಎಲ್​ಸಿ ತರಗತಿಗಳನ್ನು ಸ್ಥಗಿತಗೊಳಿಸಿ ಶಿಕ್ಷಣ ಇಲಾಖೆ ಆದೇಶ ನೀಡಿದೆ.  ಕೊವಿಡ್ ತಡೆಗೆ ಸರ್ಕಾರದಿಂದ ಕಠಿಣ ಕ್ರಮ ಕೈಗೊಂಡ ಕಾರಣ ಶಾಲೆಗಳನ್ನು ಬಂದ್ ಮಾಡುವಂತೆ ನಿನ್ನೆ ಸೂಚನೆ ನೀಡಲಾಗಿತ್ತು. ಹೀಗಾಗಿ, 10ನೇ ತರಗತಿಗಳು ಕೂಡ ಮೇ 4ರವರೆಗೆ ಸ್ಥಗಿತಗೊಳ್ಳಲಿದ್ದು,  ಭೌತಿಕ ತರಗತಿಗಳನ್ನು ಸ್ಥಗಿತಗೊಳಿಸುವಂತೆ ಶಿಕ್ಷಣ ಇಲಾಖೆ ಆದೇಶ ನೀಡಿದೆ.

ಏಪ್ರಿಲ್ 30ರವರೆಗೆ 1ರಿಂದ9ನೇ ತರಗತಿಗೆ ಮೌಲ್ಯಾಂಕನ ಮೂಲಕ ಫಲಿತಾಂಶ ಸೂಚನೆ ನೀಡಲಾಗಿತ್ತು. ಈಗ ಏಪ್ರಿಲ್ 24ರ ಒಳಗೆ ಮೌಲ್ಯಾಂಕನ ಫಲಿತಾಂಶ ನೀಡಲು‌ ಸೂಚನೆ ನೀಡಲಾಗಿದೆ. ಆಯಾ ಶಾಲೆಗಳ ಮೌಲ್ಯಾಂಕನ ನಡೆಸಿ, ಫಲಿತಾಂಶ ನೀಡಲು ಸೂಚಿಸಲಾಗಿದೆ. ಏಪ್ರಿಲ್ 27 ರಿಂದ ಮೇ 4ರವರೆಗೆ ಶಿಕ್ಷಕರಿಗೆ ಶಾಲೆಯ ಹಾಜರಾತಿಗೆ ವಿನಾಯ್ತಿ ನೀಡಲಾಗಿದೆ. ಈ ಅವಧಿಯಲ್ಲಿ 10ನೇ ತರಗತಿಗೆ ವರ್ಚುವಲ್ ಅಥವಾ ದೂರವಾಣಿ ಮೂಲಕ ಪಾಠ ಮಾಡಲು ಸೂಚನೆ ನೀಡಲಾಗಿದೆ. ಶಿಕ್ಷಣ ಇಲಾಖೆ ಈ ಕುರಿತು ಅಧಿಕೃತ ಆದೇಶ ಪ್ರಕಟಿಸಿದೆ.

ಇದನ್ನೂ ಓದಿ: JEE Main Postponed: ಏಪ್ರಿಲ್​ 27ರಿಂದ ನಡೆಯಲಿದ್ದ ಜೆಇಇ ಮುಖ್ಯ ಪರೀಕ್ಷೆ ಮುಂದೂಡಿಕೆ..; ವಿದ್ಯಾರ್ಥಿಗಳ ಸುರಕ್ಷತೆಗಾಗಿ ಈ ನಿರ್ಧಾರವೆಂದ ಶಿಕ್ಷಣ ಸಚಿವರು

(SSLC classes are stopped till May 4 in Karnataka due to surge of Covid )

Published On - 6:28 pm, Wed, 21 April 21