ಕೊರೊನಾದಿಂದ ಮೃತಪಟ್ಟ ರೈತರ ಸಾಲದ ಮೊತ್ತದಲ್ಲಿ 1 ಲಕ್ಷ ರೂಪಾಯಿ ಮನ್ನಾ: ಎಸ್ ಟಿ ಸೋಮಶೇಖರ್
ಕೊವಿಡ್‌ನಿಂದ 10,400 ಸಾಲಗಾರ ರೈತರು ಮೃತಪಟ್ಟಿದ್ದಾರೆ. ಇವರ ಸಾಲದ ಮೊತ್ತದಲ್ಲಿ ತಲಾ 1 ಲಕ್ಷ ರೂಪಾಯಿ ಮನ್ನಾ ಮಾಡಲಾಗುವುದು. ಇದರಿಂದಾಗಿ ಸರ್ಕಾರಕ್ಕೆ 81 ಕೋಟಿ ರೂಪಾಯಿ ಹೊರೆಯಾಗಲಿದೆ ಎಂದು ಸೋಮಶೇಖರ್ ಹೇಳಿದ್ದಾರೆ.
ಮಂಗಳೂರು: ಕೊವಿಡ್‌ನಿಂದ ಮೃತಪಟ್ಟ ರೈತರ ಸಾಲಮನ್ನಾಗೆ ಕರ್ನಾಟಕ ಸರ್ಕಾರ ತೀರ್ಮಾನ ಮಾಡಿದೆ. ಕೊರೊನಾದಿಂದ ಮೃತಪಟ್ಟ ರೈತರ ಸಾಲದ ಮೊತ್ತದಲ್ಲಿ 1 ಲಕ್ಷ ರೂಪಾಯಿ ಮನ್ನಾ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. ಈ ಬಗ್ಗೆ ಮಂಗಳೂರಲ್ಲಿ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿಕೆ ನೀಡಿದ್ದಾರೆ. ಕೊವಿಡ್‌ನಿಂದ 10,400 ಸಾಲಗಾರ ರೈತರು ಮೃತಪಟ್ಟಿದ್ದಾರೆ. ಇವರ ಸಾಲದ ಮೊತ್ತದಲ್ಲಿ ತಲಾ 1 ಲಕ್ಷ ರೂಪಾಯಿ ಮನ್ನಾ ಮಾಡಲಾಗುವುದು. ಇದರಿಂದಾಗಿ ಸರ್ಕಾರಕ್ಕೆ 81 ಕೋಟಿ ರೂಪಾಯಿ ಹೊರೆಯಾಗಲಿದೆ ಎಂದು ಸೋಮಶೇಖರ್ ಹೇಳಿದ್ದಾರೆ.
ಕೊರೊನಾ ಸಂಕಷ್ಟ ಕಾಲದಲ್ಲಿ ಹಲವು ಪರಿಹಾರ ಕಾರ್ಯಕ್ರಮಗಳನ್ನು ರಾಜ್ಯ ಸರ್ಕಾರ ಘೋಷಿಸಿತ್ತು. ವಾಹನ ಸಂಚಾರ ಸಂಪೂರ್ಣವಾಗಿ ಸ್ತಬ್ಧಗೊಂಡಿದ್ದರಿಂದ ಆಟೋ ಮತ್ತು ಟ್ಯಾಕ್ಸಿ ಚಾಲಕರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದರು. ಈ ಚಾಲಕರಲ್ಲಿ ಚೈತನ್ಯ ತುಂಬಲು ಪ್ರತಿ ಚಾಲಕರಿಗೂ ರಾಜ್ಯ ಸರ್ಕಾರ ತಲಾ ₹ 5 ಸಾವಿರ ಪರಿಹಾರ ಘೋಷಿಸಿತ್ತು. ಬಳಿಕ, ಪರಿಹಾರ ಮಂಜೂರಾತಿಗೆ ಸರ್ಕಾರ ಆದೇಶ ಹೊರಡಿಸಿತ್ತು.
ಆಟೋ, ಟ್ಯಾಕ್ಸಿ, ಕಾರು ಚಾಲಕರಿಗೆ ಪರಿಹಾರ ವಿಚಾರವಾಗಿ ಸಾರಿಗೆ ಇಲಾಖೆ ಮಹತ್ವದ ಮಾಹಿತಿ ನೀಡಿತ್ತು. ಕೊರೊನಾ ಲಾಕ್ಡೌನ್ ಸಂಕಷ್ಟ, ಆರ್ಥಿಕ ಹೊಡೆತ ಸುಧಾರಿಸಿಕೊಳ್ಳಲು ಕರ್ನಾಟಕ ಸರ್ಕಾರ ಘೋಷಿಸಿರುವ ಪರಿಹಾರ ಪ್ಯಾಕೇಜ್ ಬಳಕೆ ಮಾಡುವ ಬಗ್ಗೆ ಮಾಹಿತಿ ನೀಡಿತ್ತು. ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರ ಘೋಷಿಸಿದ್ದ 3000 ರೂಪಾಯಿ ಪರಿಹಾರ ಪ್ಯಾಕೇಜ್ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಸಾರಿಗೆ ಇಲಾಖೆ ತಿಳಿಸಿತ್ತು.
ಆಟೋ, ಟ್ಯಾಕ್ಸಿ, ಕಾರು ಚಾಲಕರು ಕೊರೊನಾ ಲಾಕ್ಡೌನ್ ಪರಿಹಾರ ಪಡೆಯಲು ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಅರ್ಜಿ ಸಲ್ಲಿಸಲು ಜುಲೈ 15ರ ಸಂಜೆ 6 ಗಂಟೆವರೆಗೆ ಅವಕಾಶ ನೀಡಲಾಗಿದೆ ಎಂದು ಸಾರಿಗೆ ಇಲಾಖೆ ಮಾಹಿತಿ ನೀಡಿತ್ತು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಸಾರಿಗೆ ಇಲಾಖೆ ಪ್ರಕಟಿಸಿದೆ. ಅದರಂತೆ, ಜುಲೈ 15, ಗುರುವಾರ ಸಂಜೆ 6 ಗಂಟೆಯವರೆಗೆ ಸಮಯಾವಕಾಶ ಇರಲಿದೆ.
ಇದನ್ನೂ ಓದಿ: ಹೂವು ಬೆಳೆಗಾರರಿಗೆ ಆಷಾಢ ಸಂಕಷ್ಟ; ವ್ಯಾಪಾರವಿಲ್ಲದೆ ಚಿಕ್ಕಬಳ್ಳಾಪುರ ರೈತರು ಕಂಗಾಲು
ಮೆಕ್ಕೆಜೋಳ ಬೀಜ ಬಿತ್ತನೆ ಮಾಡಿ 15 ದಿನಗಳಾದರೂ ಇನ್ನೂ ಮೊಳಕೆ ಒಡೆದಿಲ್ಲ; ಧಾರವಾಡ ರೈತರಲ್ಲಿ ಹೆಚ್ಚಿದ ಆತಂಕ