ಒಪೆಕ್ ಆಸ್ಪತ್ರೆಯಲ್ಲಿ ಅವ್ಯವಸ್ಥೆಯ ಆಗರ.. ಖಾಲಿ ಸಿಲಿಂಡರ್ನಿಂದ ಆಕ್ಸಿಜನ್ ನೀಡಿ ಎಡವಟ್ಟು ಮಾಡಿದ ಸಿಬ್ಬಂದಿ
ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆ ಆವರಣದಲ್ಲಿ ನರಳುತ್ತಿದ್ದ ರೋಗಿಗೆ ಆ್ಯಂಬುಲೆನ್ಸ್‌ನಲ್ಲಿದ್ದ ಖಾಲಿ ಸಿಲಿಂಡರ್ನಿಂದ ಆಕ್ಸಿಜನ್ ನೀಡಿ ಸಿಬ್ಬಂದಿ ಎಡವಟ್ಟು ಮಾಡಿದ್ದಾರೆ. ಇದರಿಂದ ಕುಟುಂಬಸ್ಥರು ಆಸ್ಪತ್ರೆಯ ಬೇಜವಾಬ್ದಾರಿತನಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಯಚೂರು: ಜಿಲ್ಲೆಯ ಒಪೆಕ್ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ. ಒಪೆಕ್ ಆಸ್ಪತ್ರೆಯ ಆವರಣದಲ್ಲಿ ಉಸಿರಾಟ ಸಮಸ್ಯೆಯಿಂದ ರೋಗಿಗಳು ನರಳಾಡುವಂತಹ ಸ್ಥಿತಿ ಕಂಡು ಬಂದಿದೆ. ಸದ್ಯ ಈ ವೇಳೆ ರೋಗಿಗೆ ಆ್ಯಂಬುಲೆನ್ಸ್‌ನಲ್ಲಿದ್ದ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿದ್ದು ಖಾಲಿ ಸಿಲಿಂಡರ್ನಿಂದ ಆಕ್ಸಿಜನ್ ನೀಡಿ ಸಿಬ್ಬಂದಿ ಎಡವಟ್ಟು ಮಾಡಿದ್ದಾರೆ.
ಹೌದು ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆ ಆವರಣದಲ್ಲಿ ನರಳುತ್ತಿದ್ದ ರೋಗಿಗೆ ಆ್ಯಂಬುಲೆನ್ಸ್‌ನಲ್ಲಿದ್ದ ಖಾಲಿ ಸಿಲಿಂಡರ್ನಿಂದ ಆಕ್ಸಿಜನ್ ನೀಡಿ ಸಿಬ್ಬಂದಿ ಎಡವಟ್ಟು ಮಾಡಿದ್ದಾರೆ. ಇದರಿಂದ ಕುಟುಂಬಸ್ಥರು ಆಸ್ಪತ್ರೆಯ ಬೇಜವಾಬ್ದಾರಿತನಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಇಷ್ಟೇ ಅಲ್ಲ, ಒಪೆಕ್ ಆಸ್ಪತ್ರೆಯಲ್ಲಿ ಬೆಡ್‌ಗಳಿಲ್ಲದೆ ರೋಗಿಗಳು ನೆಲದ ಮೇಲೆ ಮಲಗಿದ್ದಾರೆ.
ಆಸ್ಪತ್ರೆಯಲ್ಲಿ ಫ್ಯಾನ್ ವ್ಯವಸ್ಥೆ ಸಹ ಇಲ್ಲದೆ ರೋಗಿಗಳು ಶೆಕೆಗೆ ಪರದಾಡುತ್ತಿದ್ದು ಅದೆಷ್ಟೋ ಮಂದಿ ತಮ್ಮ ಮನೆಗಳಿಂದಲೇ ಫ್ಯಾನ್ ತರಿಸಿಕೊಂಡಿದ್ದಾರೆ. ಹಾಗೂ ಆಸ್ಪತ್ರೆ ವಾರ್ಡ್‌ಗಳಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯವಸ್ತು, ಕಸ ಬಿದ್ದಿದೆ. ಆಸ್ಪತ್ರೆಯಲ್ಲಿ ಸ್ವಚ್ಛತೆ ಮರೆಯಾಗಿದೆ. ರೋಗಿಗಳು ನರಳಾಡುತ್ತಿದ್ದರೂ ವೈದ್ಯರು ಯಾವುದಕ್ಕೂ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಕೊವಿಡ್ ಆಸ್ಪತ್ರೆಯಾದರೂ ಸರಿಯಾದ ವ್ಯವಸ್ಥೆ ಇಲ್ಲ ಎಂದು ರೋಗಿಗಳ ಕುಟುಂಬಸ್ಥರು ಆಸ್ಪತ್ರೆ ಸಿಬ್ಬಂದಿ ವಿರುದ್ಧ ವಾಗ್ವಾದ ನಡೆಸಿದ್ದಾರೆ. ಅವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಹಾಸ್ಯ ನಟ ಅಯ್ಯಪ್ಪನ್ ಗೋಪಿ ಹೃದಯಾಘಾತದಿಂದ ನಿಧನ; ಚಿತ್ರರಂಗಕ್ಕೆ ಮತ್ತೊಂದು ಆಘಾತ