AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

10 ದಿನಗಳ ಅಂತರದಲ್ಲೇ 31 ಬಲಿ, ಯಾದಗಿರಿಯ ಹತ್ತಿಕುಣಿ ಗ್ರಾಮದ ಜನರಲ್ಲಿ ಆತಂಕ

ಕಿಲ್ಲರ್ ಕೊರೊನಾ ಕಂಟ್ರೋಲ್ಗೆ ಸಿಗುತ್ತಿಲ್ಲ.. ಯಾರನ್ನೂ ಕೇರ್ ಮಾಡ್ತಿಲ್ಲ.. ಇಡೀ ಕರುನಾಡನ್ನೇ ಅಕ್ಷರಶಃ ನಲುಗುವಂತೆ ಮಾಡಿದೆ. ಸಿಕ್ಕ ಸಿಕ್ಕವರ ಮೇಲೆ ಸವಾರಿ ಮಾಡಿ, ಜಾಲ ವಿಸ್ತರಿಸಿಕೊಳ್ತಿದೆ. ಅಷ್ಟೇ ಯಾಕೆ, ರಾಜ್ಯದ ಗಡಿ ಜಿಲ್ಲೆಯನ್ನೂ ಕೊರೊನಾ ಕಾಡುತ್ತಿದ್ದು, ಜನ ಭಯದಿಂದ್ಲೇ ದಿನ ದೂಡುತ್ತಿದ್ದಾರೆ.

10 ದಿನಗಳ ಅಂತರದಲ್ಲೇ 31 ಬಲಿ, ಯಾದಗಿರಿಯ ಹತ್ತಿಕುಣಿ ಗ್ರಾಮದ ಜನರಲ್ಲಿ ಆತಂಕ
ಸಾಂದರ್ಭಿಕ ಚಿತ್ರ
ಆಯೇಷಾ ಬಾನು
ಆಯೇಷಾ ಬಾನು|

Updated on: May 17, 2021 | 7:14 AM

Share

ಯಾದಗಿರಿ: ಕೊರೊನಾವನ್ನ ಹೀಗೆ ಜನ ಕೇರ್ಲೆಸ್ ಮಾಡಿದಕ್ಕೋ.. ಮಾಸ್ಕ್ ಹಾಕದೆ ಅಡ್ಡಾಡಿದ್ದಕ್ಕೋ ಅಥವಾ ಅಧಿಕಾರಿಗಳು ನಿದ್ದೆಗೆ ಜಾರಿದ್ದಕ್ಕೋ ಗೊತ್ತಿಲ್ಲ. ಇಡೀ ಊರಿನ ಜನ ಬೆದರಿ ಹೋಗಿದ್ದಾರೆ. ಮಾರಿಯ ಹೊಡೆತದಿಂದ ನಲುಗಿ ಹೋಗಿದ್ದಾರೆ. ಸಾವಿನ ಸಂಖ್ಯೆ ಕಂಡು ಭಯಗೊಂಡಿದ್ದಾರೆ.

ಕಳೆದ 10 ದಿನಗಳ ಅಂತರದಲ್ಲೇ 31 ಮಂದಿ ಬಲಿ ಯಾದಗಿರಿ ತಾಲೂಕಿನ ಹತ್ತಿಕುಣಿ ಗ್ರಾಮ.. ಈ ಊರಿನಲ್ಲಿ ಕೇವಲ 10 ಕ್ಕೂ ಹೆಚ್ಚು ಜನರಿಗೆ ಕೊರೊನಾ ಅಟ್ಯಾಕ್ ಆಗಿದೆಯಂತೆ. ಆದ್ರೆ, ವಾಸ್ತವವಾಗಿ ಹತ್ತಿಕುಣಿ ಗ್ರಾಮದಲ್ಲಿ ನೂರಕ್ಕೂ ಅಧಿಕ ಮಂದಿಗೆ ಕೊರೊನಾ ಸೋಂಕು ತಗುಲಿದೆ ಎನ್ನಲಾಗುತ್ತಿದೆ. ಯಾಕೆಂದ್ರೆ ಗ್ರಾಮದಲ್ಲಿ ಕಳೆದ ಒಂದು ತಿಂಗಳಲ್ಲಿ ಸಾವಿರಕ್ಕೂ ಅಧಿಕ ಮಂದಿ ವಲಸೆ ಕಾರ್ಮಿಕರು ವಾಪಸ್ ಆಗಿದ್ದಾರೆ. ಇದರಿಂದ ಗ್ರಾಮದಲ್ಲಿ ದೊಡ್ಡ ಪ್ರಮಾಣದಲ್ಲಿ ಸೋಂಕು ಹರಡಿದೆಯಂತೆ. ಇದೇ ಕಾರಣಕ್ಕೆ ಕಳೆದ 10 ದಿನಗಳ ಅಂತರದಲ್ಲಿ ಗ್ರಾಮದಲ್ಲಿ ಕೊರೊನಾ ಲಕ್ಷಣಗಳಿಂದಲ್ಲೇ 31 ಮಂದಿ ಸತ್ತಿದ್ದಾರೆ. ಆದ್ರೆ ಇದರಲ್ಲಿ ಬಹುತೇಕರು ಕೊವಿಡ್ ಟೆಸ್ಟ್ಗೆ ಒಳಪಟ್ಟಿಲ್ಲ. ಇನ್ನು ಸತ್ತವರೆಲ್ಲರು ಯಾವುದೇ ರೋಗಗಳಿಂದ ಬಳಲುತ್ತಿರಲಿಲ್ಲ. ಆದ್ರೆ ಕೊವಿಡ್ ಲಕ್ಷಣಗಳು ಕಂಡು ಬಂದ ಎರಡೇ ದಿನದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ಇನ್ನು, ಕೊರೊನಾ ಎರಡನೇ ಅಲೆ ಆರಂಭದ ನಂತರವೇ ಗ್ರಾಮದಲ್ಲಿ ಹಿಂದೆಂದು ನೋಡದ ರೀತಿಯಲ್ಲಿ ಜನ ಜೀವ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣವೇ ಗ್ರಾಮಸ್ಥರ ನಿರ್ಲಕ್ಷ್ಯವಾಗಿದೆ. ಯಾಕಂದ್ರೆ ಕೊರೊನಾ ಎರಡನೇ ಅಲೆ ವೇಗವಾಗಿ ಹರಡುತ್ತಿದ್ರೂ ಗ್ರಾಮಸ್ಥರು ಟೆಸ್ಟ್ ಮಾಡಿಸಿಕೊಳ್ತಿಲ್ಲ. ಮಾಸ್ಕ್ ಬಳಸುತ್ತಿಲ್ಲ. ದೈಹಿಕ ಅಂತರವನ್ನೂ ಕಾಪಾಡಿಕೊಳ್ತಿಲ್ಲ. ಇದೆ ಕಾರಣದಿಂದ ಗ್ರಾಮದಲ್ಲಿ ವ್ಯಾಪಕವಾಗಿ ಕೊರೊನಾ ಹರಡುತ್ತಿದೆ.

ಹೀಗಿದ್ರೂ ಗ್ರಾಮಸ್ಥರು ಮೈ ಮರೆತು ಓಡಾಡುತ್ತಿದ್ದಾರೆ. ಬೆಳಗ್ಗೆ 10 ಗಂಟೆ ನಂತರವೂ ಗ್ರಾಮದಲ್ಲಿ ಅಂಗಡಿಗಳು ಓಪನ್ ಆಗಿರುತ್ತವೆ. ಇಷ್ಟೆಲ್ಲಾ ನಿರ್ಲಕ್ಷ್ಯ ಆಗುತ್ತಿದ್ರೂ ಆರೋಗ್ಯ ಇಲಾಖೆ ಅಧಿಕಾರಿಗಳು ಸಹ ಗ್ರಾಮಕ್ಕೆ ಎಂಟ್ರಿ ಕೊಟ್ಟು ಮನೆ ಮನೆಗೆ ಹೋಗಿ ಟೆಸ್ಟಿಂಗ್ ಮಾಡ್ತಿಲ್ಲ. ಅಧಿಕಾರಿಗಳು ಕೂಡಾ ನಿದ್ದಿಗೆ ಜಾರಿದ್ದಾರೆ.

ಸದ್ಯ, ಕಿಲ್ಲರ್ ಕೊರೊನಾ ರುದ್ರ ನರ್ತನ ಮಾಡ್ತಿದ್ರೂ ಹತ್ತಿಕುಣಿ ಗ್ರಾಮಸ್ಥರು ಕೇರ್ ಮಾಡ್ತಿಲ್ಲ. ಅಧಿಕಾರಿಗಳು ಕೂಡ ತಲೆಕೆಡಿಸಿಕೊಳ್ಳದೆ, ಕೊರೊನಾ ಕಟ್ಟಿ ಹಾಕುವ ಕೆಲಸ ಮಾಡದೆ, ಬೇಜವಾಬ್ದಾರಿ ಮೆರೀತಿದ್ದಾರೆ. ಇದ್ರಿಂದ ದೊಡ್ಡ ಮಟ್ಟದಲ್ಲಿ ದುರಂತ ಸಂಭವಿಸಿದ್ರೂ ಅಚ್ಚರಿಪಡುವಂತಿಲ್ಲ.

ಇದನ್ನೂ ಓದಿ: ಕೊವಿಡ್ ಭಯ; ಕೊರೊನಾ ಸೋಂಕಿತ ಶಿಕ್ಷಕ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ

Follow Us
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ