ಬಕ್ರೀದ್ ಹಬ್ಬಕ್ಕೆ ಮಾರ್ಗಸೂಚಿ ಬಿಡುಗಡೆ: ಕಟ್ಟುನಿಟ್ಟಿನ ಆದೇಶ ಹೊರಡಿಸಿದ ರಾಜ್ಯ ಸರ್ಕಾರ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 08, 2022 | 7:20 AM

ಜುಲೈ 10ರಂದು ಆಚರಿಸುವ ಬಕ್ರೀದ್​ ಹಬ್ಬಕ್ಕೆ ರಾಜ್ಯ ಸರ್ಕಾರದಿಂದ ಗೈಡ್​ಲೈನ್ಸ್​ ಹೊರಡಿಸಿದ್ದು, ಸರ್ಕಾರದ ಉಪ ಕಾರ್ಯದರ್ಶಿ ಮೆಹಬೂಬ್ ಸಾಬ್​​ ಆದೇಶಿಸಿದ್ದಾರೆ.

ಬಕ್ರೀದ್ ಹಬ್ಬಕ್ಕೆ ಮಾರ್ಗಸೂಚಿ ಬಿಡುಗಡೆ: ಕಟ್ಟುನಿಟ್ಟಿನ ಆದೇಶ ಹೊರಡಿಸಿದ ರಾಜ್ಯ ಸರ್ಕಾರ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಜುಲೈ 10ರಂದು ಆಚರಿಸುವ ಬಕ್ರೀದ್ (Bakrid)​ ಹಬ್ಬಕ್ಕೆ ರಾಜ್ಯ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಬಕ್ರೀದ್ ಹಬ್ಬದ ದಿನ ಖುರ್ಬಾನಿ ನೆರವೇರಿಸಲು ಸರ್ಕಾರ ಕಂಡಿಷನ್ ಹೊರಡಿಸಿದ್ದು, ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ನಿಯಮ ಉಲ್ಲಂಘಿಸುವಂತಿಲ್ಲ. ಗೋಹತ್ಯೆ ನಿಷೇಧ ಕಾನೂನು ಪಾಲನೆಗೆ ಸೂಚನೆ ನೀಡಲಾಗಿದೆ. ಎಲ್ಲೆಂದರಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುವಂತಿಲ್ಲ. ಜಿಲ್ಲಾಡಳಿತ, ಸ್ಥಳೀಯ ಆಡಳಿತ ನಿಗಧಿ ಪಡಿಸಿದ ಜಾಗದಲ್ಲೇ ಮಾಡಬೇಕು. ಕೋವಿಡ್ ಮಾರ್ಗಸೂಚಿ ಅನ್ವಯದಂತೆ ಪ್ರಾರ್ಥನೆ ಸಲ್ಲಿಸಬೇಕು. ಸಾರ್ವಜನಿಕ ಪ್ರದೇಶದಲ್ಲಿ ಖುರ್ಬಾನಿ ನಿಷೇಧಿಸಲಾಗಿದೆ. ಪ್ರಾಣಿ ತ್ಯಾಜ್ಯವನ್ನ ಸಾರ್ವಜನಿಕ ಸ್ಥಳದಲ್ಲಿ ವಿಲೇವಾರಿ ಮಾಡಬಾರದು ಎಂದು ಸರ್ಕಾರದ ಉಪ ಕಾರ್ಯದರ್ಶಿ ಮಹಿಬೂಬ ಸಾಬ​ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ಮಳೆ ಆರ್ಭಟ: ಶುಕ್ರವಾರ ಡಿಸಿಗಳೊಂದಿಗೆ ಸಿಎಂ ಬೊಮ್ಮಾಯಿ ತುರ್ತು ವಿಡಿಯೋ ಸಂವಾದ

ಇದನ್ನೂ ಓದಿ: Hajj 2022: ಮುಸ್ಲಿಮರು ಪವಿತ್ರ ಹಜ್ ಯಾತ್ರೆ ಕೈಗೊಳ್ಳುವುದೇಕೆ? ಇದರ ಹಿಂದಿರುವ ಉದ್ದೇಶವೇನು?