AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಲಹಂಕ: ಪ್ರತಿಷ್ಠಿತ ಅಪಾರ್ಟ್ಮೆಂಟ್ ಡ್ರೈನೇಜ್ ನೀರು ಕೆರೆ ಪಾಲು: ಜಾನುವಾರುಗಳ ಸಾವು, ಸ್ಥಳೀಯರ ಆಕ್ರೋಶ

ಪ್ರಾವಿಡೆಂಟ್ ವೆಲ್ ವರ್ಥ ಸಿಟಿ ಅಪಾರ್ಟ್ಮೆಂಟ್ ಪಕ್ಕದಲ್ಲೆ ಕೆರೆಯಿರೂ ಕಾರಣ ಅಪಾರ್ಟ್ಮೆಂಟ್ ನಿವಾಸಿಗಳು ಬಳಸಿದ ತ್ಯಾಜ್ಯ ಮತ್ತು ಮಲ ನೀರನ್ನ ನೇರವಾಗಿ ಚರಂಡಿ ಮೂಲಕ ಕೆರೆಗೆ ಬಿಡ್ತಿದ್ದಾರಂತೆ. ಹೀಗಾಗಿ ನೀರಿಲ್ಲದೆ ಬತ್ತಿ ಹೋಗಿದ್ದ ಕೆರೆ ಇದೀಗ ತ್ಯಾಜ್ಯ ನೀರಿನ ಜೊತೆಗೆ ಮಳೆ ನೀರಿನಿಂದ ತುಂಬಿದ್ದು ಕೆರೆಯ ನೀರನ್ನ ಕುಡಿದ ಸುತ್ತಮುತ್ತಲಿನ ಗ್ರಾಮಗಳ ಜಾನುವಾರುಗಳು ವಿಷಯುಕ್ತ ನೀರಿನಿಂದ ಸಾವನ್ನಪ್ಪಿವೆ

ಯಲಹಂಕ: ಪ್ರತಿಷ್ಠಿತ ಅಪಾರ್ಟ್ಮೆಂಟ್ ಡ್ರೈನೇಜ್ ನೀರು ಕೆರೆ ಪಾಲು: ಜಾನುವಾರುಗಳ ಸಾವು, ಸ್ಥಳೀಯರ ಆಕ್ರೋಶ
ಯಲಹಂಕ: ಪ್ರತಿಷ್ಠಿತ ಅಪಾರ್ಟ್ಮೆಂಟ್ ಡ್ರೈನೇಜ್ ನೀರು ಕೆರೆ ಪಾಲು: ಜಾನುವಾರುಗಳ ಸಾವು, ಸ್ಥಳೀಯರ ಆಕ್ರೋಶ
TV9 Web
| Edited By: |

Updated on: Jul 07, 2022 | 9:40 PM

Share

ಬೆಂಗಳೂರು ನಗರ ಜಿಲ್ಲೆ ಯಲಹಂಕ (Yelahanka) ತಾಲೂಕಿನ ದೊಡ್ಡಬಳ್ಳಾಪುರ ರಸ್ತೆ ‌ಮಾರಸಂದ್ರದಲ್ಲಿರುವ ಪ್ರಾವಿಡೆಂಟ್ ವೆಲ್ವರ್ಥ್ ಸಿಟಿ ಅಪಾರ್ಟ್ಮೆಂಟ್ ಕೆರೆ ನಾಶಕ್ಕೆ ಮುಂದಾಗಿದೆ ಅನ್ನೂ ‌ಗಂಭೀರ ಆರೋಪ ಕೇಳಿ‌ ಬಂದಿದೆ. ಮಾರಸಂದ್ರ ಬಳಿ ತಲೆ ಎತ್ತಿರೂ 47ಎಕರೆಯ 3356 ಫ್ಲಾಟ್ಗಳ 12 ಸಾವಿರ ಜನರ ತ್ಯಾಜ್ಯ ಮಲ ಮೂತ್ರದ ಕೊಳಚೆ ನೀರು ಕೆರೆ ಒಡಲು ಸೇರ್ತಿದೆ. ಪ್ರಾವಿಡೆಂಟ್ ನವರು ರಾತ್ರೋರಾತ್ರಿ ಅಪಾರ್ಟ್ಮೆಂಟ್ಗೆ ಹೊಂದಿಕೊಂಡ ನೆಲ್ಲುಕುಂಟೆ ಕೆರೆಗೆ ಪ್ರತಿದಿನ 9 ಲಕ್ಷ ಲೀಟರ್ ಕೊಳಚೆ ನೀರು (Sewage) ಬಿಡ್ತಿದ್ದು ಕೆರೆಯ ವಿಷ ನೀರು ಕುಡಿದು ದನ, ಕರು, ಕುರಿ, ಮೇಕೆ ಸಾವನ್ನಪ್ಪಿವೆ ಅಂತ ಸ್ಥಳಿಯರು ಆರೋಪಿಸಿದ್ದಾರೆ.

ಅಂದಹಾಗೆ ಪ್ರಾವಿಡೆಂಟ್ ವೆಲ್ ವರ್ಥ ಸಿಟಿ ಅಪಾರ್ಟ್ಮೆಂಟ್ ಪಕ್ಕದಲ್ಲೆ (Provident Welworth City Apartment) ಕೆರೆಯಿರೂ ಕಾರಣ ಅಪಾರ್ಟ್ಮೆಂಟ್ ನಿವಾಸಿಗಳು ಬಳಸಿದ ತ್ಯಾಜ್ಯ ಮತ್ತು ಮಲ ನೀರನ್ನ ನೇರವಾಗಿ ಚರಂಡಿ ಮೂಲಕ ಕೆರೆಗೆ ಬಿಡ್ತಿದ್ದಾರಂತೆ. ಹೀಗಾಗಿ ನೀರಿಲ್ಲದೆ ಬತ್ತಿ ಹೋಗಿದ್ದ ಕೆರೆ ಇದೀಗ ತ್ಯಾಜ್ಯ ನೀರಿನ ಜೊತೆಗೆ ಮಳೆ ನೀರಿನಿಂದ ತುಂಬಿದ್ದು ಕೆರೆಯ ನೀರನ್ನ ಕುಡಿದ ಸುತ್ತಮುತ್ತಲಿನ ಗ್ರಾಮಗಳ ಜಾನುವಾರುಗಳು ವಿಷಯುಕ್ತ ನೀರಿನಿಂದ ಸಾವನ್ನಪಿದ್ದು ಖಾಸಗಿ ಲ್ಯಾಬ್ ನಲ್ಲಿ ನೀರು ಪರೀಕ್ಷೆ ಮಾಡಿಸಿದಾಗ ವಿಷಕಾರಿಯಾಗಿರುವುದಾಗಿ ವರದಿ ನೀಡಿದೆಯ‌ಂತೆ. ಹೀಗಾಗಿ ಪ್ರತಿನಿತ್ಯ ಕೆರೆಗೆ ಬಿಡ್ತಿರೂ ನೀರನ್ನ ನಿಲ್ಲಿಸುವಂತೆ ಹಲವು ಬಾರಿ ಸ್ಥಳೀಯರು ಮತ್ತು ಪಂಚಾಯ್ತಿ ವತಿಯಿಂದ ಹೇಳಿದರೂ ನಿಲ್ಲಿಸಿಲ್ಲ ಅಂತ ಆಕ್ರೋಶ ಹೊರ ಹಾಕಿದ್ದಾರೆ.

ಅಧಿಕಾರಿಗಳಿಂದ ಕಾಲುವೆ ಮುಚ್ಚಿಸಿ ಎಚ್ಚರಿಕೆ: ಅಪಾರ್ಟ್ಮೆಂಟ್ ನಿಂದ ‌ಬರ್ತಿರೂ ತ್ಯಾಜ್ಯ ನೀರಿನಿಂದ ಕೆರೆ ಹಾಳಾಗ್ತಿದೆ ಅಂತಾ ಸ್ಥಳೀಯರು ದೂರು ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತಿ ಸಿಇಒ ಮತ್ತು ಗ್ರಾಮ ಪಂಚಾಯ್ತಿ ಅಧ್ಯಕ್ಷ ತಿಮ್ಮೆಗೌಡ ಮುಂದೆ ನಿಂತು ಕೆರೆಗೆ ಅಪಾರ್ಟ್ಮೆಂಟ್ ನಿಂದ ಹರಿದು ಬರ್ತಿದ್ದ ಕಾಲುವೆಗೆ ಸಿಮೆಂಟ್ ಹಾಕಿ ಬಂದ್ ಮಾಡಿಸಿದ್ದಾರೆ. ಆದ್ರೆ ಬಂದ್ ಮಾಡಿಸಿದರೂ ಅಕ್ರಮವಾಗಿ ತ್ಯಾಜ್ಯದ ‌ನೀರನ್ನ ರಾತ್ರಿ ವೇಳೆ ಪೈಪ್ಗಳ ಮೂಲಕ ಕೆರೆಗೆ ಬಿಡ್ತಿದ್ದಾರೆ ಅಂತ ಪಂಚಾಯ್ತಿ ಸದಸ್ಯರು ಆರೋಪಿಸಿದ್ದಾರೆ. ಇನ್ನು ಇಂದು ಇದೇ ವಿಚಾರವಾಗಿ ಅಪಾರ್ಟ್ಮೆಂಟ್ ಗೆ ಬಂದು ಪರಿಶೀಲನೆ ನಡೆಸಿದ ಗ್ರಾ‌ಮ ಪಂಚಾಯ್ತಿ ಅಧ್ಯಕ್ಷ ಮತ್ತು ಸದಸ್ಯರು ಮತ್ತೊಮ್ಮೆ ಈ ರೀತಿ ಮಾಡಿದ್ರೆ ಗ್ರಾಮಸ್ಥರ ಜೊತೆ ಜಾನುವಾರುಗಳನ್ನ ಕರೆತಂದು ಅಪಾರ್ಟ್ಮೆಂಟ್ ನಲ್ಲಿ ಬಿಟ್ಟು ಹೋರಾಟ ನಡೆಸುದಾಗಿ ಎಚ್ಚರಿಕೆ ‌ನೀಡಿದ್ರು.

ಇನ್ನೂ ಈ ಬಗ್ಗೆ ಪ್ರಾವಿಡೆಂಟ್ ವೆಲ್ ವರ್ಥ ಸಿಟಿ ಅಪಾರ್ಟ್ಮೆಂಟ್ ಮ್ಯಾನೆಜರ್ ‌ನನ್ನ ಕೇಳಿದ್ರೆ ಇತ್ತೀಚೆಗೆ ಸುರಿದ ಮಳೆಯಿಂದ ನಮ್ಮ ಟ್ಯಾಂಕ್ ನ ಮೋಟರ್ ಮೊಳಗಡೆಯಾಗಿದ್ದ ಕಾರಣ ಕೆರೆಗೆ ಬಿಟ್ಟಿದ್ವಿ. ಆದ್ರೆ ಇದೀಗ ಎಲ್ಲಾ ರೆಡಿ ಮಾಡಿಸಿದ್ದು ತ್ಯಾಜ್ಯ ನೀರು ಬಿಡ್ತಿಲ್ಲ ಅಂತಿದ್ದಾರೆ. ಜತೆಗೆ ಗ್ರಾಮ ಪಂಚಾಯ್ತಿ ವತಿಯಿಂದಲೆ ಸ್ಯಾನಿಟರಿ ಪ್ಲಾಂಟ್ ಮಾಡಿಕೊಡಲು ಸಹಾಯ ಮಾಡುವಂತೆ ಕೋರ್ಟ್ ಮೊರೆ ಹೋಗಿದ್ದು ಆದೇಶ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳೋದಾಗಿ ಹೇಳ್ತಿದ್ದಾರೆ.