ವರ್ತೂರು ಕೋಡಿ ವೃತ್ತಕ್ಕೆ ಮಧುಕರ್ ಶೆಟ್ಟಿ ಹೆಸರು: ಒಪ್ಪಿಗೆ ನೀಡಲು ಸರ್ಕಾರ ನಕಾರ
ವರ್ತೂರು ಕೋಡಿ ವೃತ್ತಕ್ಕೆ ಮೃತ IPS ಅಧಿಕಾರಿ ದಿ.ಮಧುಕರ್ ಶೆಟ್ಟಿ ಹೆಸರು ನಾಮಕರಣ ಮಾಡುವ ವಿಚಾರವಾಗಿ ಈ ಹಿಂದೆ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಮಾಡಲಾಗಿತ್ತು. ಆದರೆ, ಬಿಬಿಎಂಪಿ ನಿರ್ಣಯಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿಲ್ಲ.

BBMP ಕಚೇರಿ (ಎಡ); IPS ಅಧಿಕಾರಿ ಮಧುಕರ್ ಶೆಟ್ಟಿ (ಬಲ)
ಬೆಂಗಳೂರು: ವರ್ತೂರು ಕೋಡಿ ವೃತ್ತಕ್ಕೆ ಮೃತ IPS ಅಧಿಕಾರಿ ದಿ.ಮಧುಕರ್ ಶೆಟ್ಟಿ ಹೆಸರು ನಾಮಕರಣ ಮಾಡುವ ವಿಚಾರವಾಗಿ ಈ ಹಿಂದೆ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಮಾಡಲಾಗಿತ್ತು. ಆದರೆ, ಬಿಬಿಎಂಪಿ ನಿರ್ಣಯಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿಲ್ಲ ಎಂದು ತಿಳಿದುಬಂದಿದೆ.
ಹಿರಿಯ IPS ಅಧಿಕಾರಿ ಮಧುಕರ್ ಶೆಟ್ಟಿ ನಿಧನದ ನಂತರ ನಗರದ ವರ್ತೂರು ಕೋಡಿ ವೃತ್ತಕ್ಕೆ ಅವರ ಹೆಸರು ನಾಮಕರಣ ಮಾಡಲು ಪಾಲಿಕೆಯಲ್ಲಿ ನಿರ್ಧರಿಸಲಾಗಿತ್ತು. ಸರ್ಕಾರಕ್ಕೆ ಬಿಬಿಎಂಪಿ ಪ್ರಸ್ತಾವನೆ ಸಹ ಸಲ್ಲಿಸಿತ್ತು. ಆದರೆ, ಇದೀಗ ನಗರಾಭಿವೃದ್ಧಿ ಇಲಾಖೆಯಿಂದ ಪತ್ರ ಬಂದಿದ್ದು, ಬಿಬಿಎಂಪಿ ನಿರ್ಣಯಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿಲ್ಲ ಎಂದು ತಿಳಿಸಲಾಗಿದೆ.
ರಾತ್ರಿ 11ರ ನಂತರ ಯಾವುದೇ ಕಾರ್ಯಕ್ರಮಕ್ಕೆ ಅವಕಾಶವಿಲ್ಲ -ಪೊಲೀಸ್ ಆಯುಕ್ತ ಕಮಲ್ ಪಂತ್ ವಾರ್ನಿಂಗ್