Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ 2ನೇ ಅಲೆ: ಯುಗಾದಿ, ಹೋಳಿ, ಶಬ್ ಎ ಬರತ್, ಗುಡ್ ಫ್ರೈಡೇ ಹಬ್ಬಗಳ ಆಚರಣೆಗೆ ಮಾರ್ಗಸೂಚಿ ಪ್ರಕಟ

ರಾಜ್ಯದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆಯ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಮುಂದಿನ ಹಬ್ಬ, ಹರಿದಿನ ಆಚರಣೆಗೆ ಮಾರ್ಗಸೂಚಿ ಪ್ರಕಟವಾಗಿದೆ. ರಾಜ್ಯ ಸರ್ಕಾರದಿಂದ ಪರಿಷ್ಕೃತ ಮಾರ್ಗಸೂಚಿ ಪ್ರಕಟವಾಗಿದೆ. ಅಂತೆಯೇ, ಯುಗಾದಿ, ಹೋಳಿ, ಶಬ್ ಎ ಬರತ್, ಗುಡ್ ಫ್ರೈಡೇ ಮುಂತಾದ ಎಲ್ಲಾ ಹಬ್ಬ ಹರಿದಿನಗಳಲ್ಲಿ ಗುಂಪುಗೂಡದಂತೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಆಚರಣೆ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ.

ಕೊರೊನಾ 2ನೇ ಅಲೆ: ಯುಗಾದಿ, ಹೋಳಿ, ಶಬ್ ಎ ಬರತ್, ಗುಡ್ ಫ್ರೈಡೇ ಹಬ್ಬಗಳ ಆಚರಣೆಗೆ ಮಾರ್ಗಸೂಚಿ ಪ್ರಕಟ
ಹೋಳಿ ಆಚರಣೆ (ಸಾಂದರ್ಭಿಕ ಚಿತ್ರ)
Follow us
KUSHAL V
|

Updated on: Mar 25, 2021 | 10:45 PM

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆಯ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಮುಂದಿನ ಹಬ್ಬ, ಹರಿದಿನ ಆಚರಣೆಗೆ ಮಾರ್ಗಸೂಚಿ ಪ್ರಕಟವಾಗಿದೆ. ರಾಜ್ಯ ಸರ್ಕಾರದಿಂದ ಪರಿಷ್ಕೃತ ಮಾರ್ಗಸೂಚಿ ಪ್ರಕಟವಾಗಿದೆ. ಅಂತೆಯೇ, ಯುಗಾದಿ, ಹೋಳಿ, ಶಬ್ ಎ ಬರತ್, ಗುಡ್ ಫ್ರೈಡೇ ಮುಂತಾದ ಎಲ್ಲಾ ಹಬ್ಬ ಹರಿದಿನಗಳಲ್ಲಿ ಗುಂಪುಗೂಡದಂತೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಆಚರಣೆ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ. ಸಾರ್ವಜನಿಕ ಸ್ಥಳ, ಮೈದಾನ, ಪಾರ್ಕ್​, ಮಾರ್ಕೆಟ್​ ಹಾಗೂ ಪ್ರಾರ್ಥನಾ ಮಂದಿರಗಳಲ್ಲಿ ಆಚರಿಸುವುದಕ್ಕೆ ನಿಷೇಧ ಹೇರಲಾಗಿದೆ. ಇದಲ್ಲದೆ, ಆದೇಶ ಉಲ್ಲಂಘಿಸಿದರೆ ಎನ್​ಡಿಎಂಎ ಕಾಯ್ದೆಯಡಿ ಕ್ರಮ ಜರುಗಿಸಲಾಗುವುದು ಎಂದು ಕ್ರಮಕೈಗೊಳ್ಳುವುದಾಗಿ ರಾಜ್ಯ ಸರ್ಕಾರದಿಂದ ಎಚ್ಚರಿಕೆ ನೀಡಲಾಗಿದೆ.

‘ಸ್ಲಂ, ಬಡವರು ವಾಸಿಸುವ ಪ್ರದೇಶಗಳಿಗೆ ಲಸಿಕೆ ತಲುಪಿಸಿ’ ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ಲಂ, ಬಡವರು ವಾಸಿಸುವ ಪ್ರದೇಶಗಳಿಗೆ ಲಸಿಕೆ ತಲುಪಿಸಿ ಎಂದು ಹೈಕೋರ್ಟ್ ಸೂಚನೆ ಕೊಟ್ಟಿದೆ. ಕಟ್ಟಡ ಕಾರ್ಮಿಕರಿರುವ ಕಡೆಯೂ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಕೋರ್ಟ್​ ಸೂಚಿಸಿದೆ. ಕೈಗೊಂಡ ಕ್ರಮಗಳ ಬಗ್ಗೆ ಮಾ.31ಕ್ಕೆ ವಿವರ ನೀಡಲು ಸೂಚನೆ ನೀಡಲಾಗಿದೆ.

‘ಸರ್ಕಾರದ ಮಾರ್ಗಸೂಚಿ‌ ಕಡ್ಡಾಯವಾಗಿ ಪಾಲಿಸಬೇಕು’ ಮಹಾರಾಷ್ಟ್ರದಲ್ಲಿ ದಿನೇದಿನೆ ಕೊರೊನಾ ಕೇಸ್ ಹೆಚ್ಚಳ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿ‌ ಕಡ್ಡಾಯವಾಗಿ ಪಾಲಿಸಬೇಕು. ಮಾರ್ಗಸೂಚಿ ಪಾಲನೆಯಲ್ಲಿ ಯಾವುದೇ ರೀತಿ ರಾಜಿ ಇಲ್ಲ. ಮಾರ್ಗಸೂಚಿ ಉಲ್ಲಂಘಿಸಿದವರ ವಿರುದ್ಧ ಅಷ್ಟೇ ಕ್ರಮ ಅಲ್ಲ ಅದಕ್ಕೆ ಕಾರಣರಾದವರ ವಿರುದ್ಧವೂ ಕ್ರಮಕ್ಕೆ ಆದೇಶಿಸಿದ್ದೇನೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಹೇಳಿದ್ದಾರೆ.

ಏ.17ರಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಬೈಎಲೆಕ್ಷನ್ ಇರುವ ಹಿನ್ನೆಲೆಯಲ್ಲಿ ಮಾರ್ಗಸೂಚಿ ರಾಜಕೀಯ ಸಮಾವೇಶಗಳಿಗೂ ಅನ್ವಯವಾಗುತ್ತೆ. ಸಮಾವೇಶಗಳಲ್ಲೂ ನಿಯಮ ಕಟ್ಟುನಿಟ್ಟಾಗಿ‌ ಪಾಲಿಸಬೇಕು ಎಂದು ಬೆಳಗಾವಿ ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಹೇಳಿದ್ದಾರೆ.

ಇದೀಗ, ರಾಜ್ಯದಲ್ಲಿ ಇಂದು ಹೊಸದಾಗಿ 2,523 ಜನರಿಗೆ ಕೊರೊನಾ ದೃಢಪಟ್ಟಿದೆ. ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 9,78,478ಕ್ಕೇರಿದೆ. ಕೊರೊನಾ ಸೋಂಕಿನಿಂದ ಇಂದು 10 ಜನರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಇದುವರೆಗೆ ಕೊರೊನಾಗೆ 12,471 ಜನರು ಬಲಿಯಾಗಿದ್ದಾರೆ.ಸೋಂಕಿತರ ಪೈಕಿ 9,47,781 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 18,207 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಗಳೂರಲ್ಲಿ ಇಂದು ಒಂದೇ ದಿನ 1,623 ಜನರಲ್ಲಿ ಸೋಂಕು ಪತ್ತೆಯಾಗಿದೆ. ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 4,22,859ಕ್ಕೇರಿದೆ. ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ 6 ಜನರ ಬಲಿಯಾಗಿದ್ದಾರೆ. ಕೊರೊನಾಗೆ ಇದುವರೆಗೆ 4,569 ಜನರು ಅಸುನೀಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ಲಭ್ಯವಾಗಿದೆ.

ಸಕ್ಕರೆ ನಾಡಿಗೆ ಮತ್ತೊಮ್ಮೆ ಕಾಲಿಟ್ಟ ಕೊರೊನಾ ಮಂಡ್ಯ ಜಿಲ್ಲೆಯಲ್ಲಿ ಇಂದು 43 ಜನರಿಗೆ ಕೊರೊನಾ ದೃಢವಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 19,841ಕ್ಕೆ ಏರಿದೆ. ಜಿಲ್ಲೆಯಲ್ಲಿ ಈವರೆಗೆ ಕೊರೊನಾದಿಂದ 153 ಜನರು ಅಸುನೀಗಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 19,527 ಸೋಂಕಿತರು ಗುಣಮುಖರಾಗಿದ್ದು 161 ಸೋಂಕಿತರಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

MITಯ 111 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಉಡುಪಿ ಜಿಲ್ಲೆಯಲ್ಲಿ ಇಂದು 145 ಜನರಿಗೆ ಕೊರೊನಾ ದೃಢಪಟ್ಟಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 24,580ಕ್ಕೆ ಏರಿದೆ. ಜೊತೆಗೆ, ಇಂದು ಎಂಐಟಿಯ 111 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಎಂದು ವರದಿಯಾಗಿದೆ. ಎಂಐಟಿ ಕಾಲೇಜಿನಲ್ಲಿ ಸೋಂಕಿತರ ಸಂಖ್ಯೆ 520ಕ್ಕೆ ಏರಿದೆ. ಉಡುಪಿ ಜಿಲ್ಲೆಯಲ್ಲಿ ಒಟ್ಟು 613 ಸಕ್ರಿಯ ಪ್ರಕರಣಗಳಿದೆ.

ಮಾಸ್ಕ್​ ಧರಿಸದೇ ಓಡಾಡುತ್ತಿದ್ದ 139 ಜನರಿಗೆ ದಂಡ ಇತ್ತ, ಬೆಣ್ಣೆನಗರಿಯಲ್ಲಿ ಮಾಸ್ಕ್​ ಧರಿಸದೇ ಓಡಾಡುತ್ತಿದ್ದ 139 ಜನರಿಗೆ ದಂಡ ವಿಧಿಸಲಾಗಿದೆ. ದಾವಣಗೆರೆ ನಗರದ ಹಲವೆಡೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. 139 ಜನರಿಂದ 34,750 ರೂಪಾಯಿ ದಂಡ ವಸೂಲಿಯಾಗಿದೆ ಎಂದು ದಾವಣಗೆರೆ ಎಸ್​.ಪಿ ಹನುಮಂತರಾಯ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಪತಿಯಷ್ಟು ಕೆಲಸ ಮಾಡಲು ಆಗದಿದ್ರೂ ನನ್ನ ಕೈಲಾದಷ್ಟು ಮಾಡ್ತೇನೆ -ಮಂಗಳಾ ಅಂಗಡಿ ಕಣ್ಣೀರು

ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್
ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್
ಕರ್ನಾಟಕದಷ್ಟು ಸುಂದರ ಸ್ಥಳ ಮತ್ತು ಜನ ಬೇರೆಲ್ಲೂ ಇಲ್ಲ: ಮೋನಿಕ ಸತ್ಯ
ಕರ್ನಾಟಕದಷ್ಟು ಸುಂದರ ಸ್ಥಳ ಮತ್ತು ಜನ ಬೇರೆಲ್ಲೂ ಇಲ್ಲ: ಮೋನಿಕ ಸತ್ಯ