PUBG ಆಡುವಾಗ ಗೆಳೆಯರಿಂದ ಅವಮಾನ, ನೇಣು ಬಿಗಿದುಕೊಂಡು ITI ವಿದ್ಯಾರ್ಥಿ ಆತ್ಮಹತ್ಯೆ

| Updated By: ರಾಜೇಶ್ ದುಗ್ಗುಮನೆ

Updated on: Jan 31, 2021 | 1:28 PM

ಐಟಿಐ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದ ರವಿ(16) ನೇಣಿಗೆ ಶರಣಾಗಿದ್ದಾನೆ. ಆನ್ಲೈನ್ ತರಗತಿಗಾಗಿ ಮೊಬೈಲ್ ಬಳಸುತ್ತಿದ್ದ ರವಿ ಯಾವಾಗಲೂ ಪಬ್ಜಿ ಆಟದಲ್ಲೇ ಮುಳುಗಿರುತ್ತಿದ್ದ.

PUBG ಆಡುವಾಗ ಗೆಳೆಯರಿಂದ ಅವಮಾನ, ನೇಣು ಬಿಗಿದುಕೊಂಡು ITI ವಿದ್ಯಾರ್ಥಿ ಆತ್ಮಹತ್ಯೆ
ರವಿ ಮೃತ ವಿದ್ಯಾರ್ಥಿ
Follow us on

ಚೆನ್ನೈ: ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆ ಹೊಸೂರಿನ ಭಾರತಿದಾಸನ್ ನಗರದಲ್ಲಿ ಪಬ್ಜಿ ಆಟ ಆಡುವಾಗ ಸ್ನೇಹಿತರು ಅವಮಾನ ಮಾಡಿದರು ಎಂಬ ಕಾರಣಕ್ಕೆ ತಾಯಿ ಸೀರೆಯಲ್ಲಿ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಐಟಿಐ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದ ರವಿ(16) ನೇಣಿಗೆ ಶರಣಾದ ಯುವಕ. ಆನ್ಲೈನ್ ತರಗತಿಗಾಗಿ ಮೊಬೈಲ್ ಬಳಸುತ್ತಿದ್ದ ರವಿ ಯಾವಾಗಲೂ ಪಬ್ಜಿ ಆಟದಲ್ಲೇ ಮುಳುಗಿರುತ್ತಿದ್ದ. ಇದರಿಂದಾಗಿ ತಾಯಿ ಸೇರಿದಂತೆ ಕುಟುಂಬದವರು ರವಿಗೆ ಬುದ್ಧಿವಾದ ಹೇಳುತ್ತಿದ್ದರು. ಆದರೆ ರವಿ ಮಾತ್ರ ಪಬ್ಜಿ ಆಟವಾಡುವುದನ್ನು ನಿಲ್ಲಿಸುತ್ತಿರಲಿಲ್ಲ.

ವರ್ಷದ ಹಿಂದೆಯಷ್ಟೇ ಪತಿಯಯನ್ನು ಕಳೆದುಕೊಂಡಿದ್ದ ತಾಯಿ ಜಯಲಕ್ಷ್ಮಿ ಕಷ್ಟಪಟ್ಟು ಮಗನನ್ನು ಓದಿಸುತ್ತಿದ್ದಳು. ಹಿರಿಯ ಮಗ ವಿಶ್ವ (18) ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರೆ, ಕಿರಿಯ ಮಗ ರವಿ  ಹೊಸೂರು ಸರ್ಕಾರಿ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದ.

ನಿನ್ನೆ ತಾಯಿ ಜಯಲಕ್ಷ್ಮಿ ಗಾರೆ ಕೆಲಸ ಮುಗಿಸಿ ಮನೆ ಬಳಿ ಬಂದಾಗ ಎಷ್ಟು ಬಾರಿ ಬಾಗಿಲು ಬಡಿದರು ರವಿ ಬಾಗಿಲು ತೆರೆಯಲೇ ಇಲ್ಲ. ಇದರಿಂದ ಗಾಬರಿಗೊಂಡ ತಾಯಿ ಕೊನೆಗೆ ಅಕ್ಕಪಕ್ಕದವರ ನೆರವಿನಿಂದ ಬಾಗಿಲು ಒಡೆದು ಒಳ ನುಗ್ಗಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ವಿಷಯ ತಿಳಿದು ಹೊಸೂರು ನಗರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ವಿದ್ಯಾರ್ಥಿಯ ಶವವನ್ನು ಶವಪರೀಕ್ಷೆಗಾಗಿ ಹೊಸೂರು ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಆನ್​ಲೈನ್​ ಕ್ಲಾಸ್​ನ ದೃಷ್ಟಿಯಿಂದ ಮೊಬೈಲ್ ಕೋಡಿಸಿರುವುದು ಸದ್ಯ ಈ ರೀತಿಯ ತಿರುವು ಪಡೆದುಕೊಂಡಿದ್ದು ಎಲ್ಲಾ ಪೊಷಕರಲ್ಲಿ ಆತಂಕ ಸೃಷ್ಟಿಸಿದೆ. ಪಬ್​ಜಿ ಬ್ಯಾನ್​ ಆದರೂ ಅದನ್ನು ಬೇರೆ ಮಾರ್ಗದ ಮೂಲಕ ಪಬ್​ಜಿ ಡೌನ್​ಲೋಡ್​ ಮಾಡಿಕೊಂಡು ಆಡುತ್ತಿರುವುದನ್ನು ಕೂಡ ತಡೆಯಬೇಕಿದೆ.

PUBG ಗೀಳಿಗೆ ಬಿದ್ದು ಊಟ, ನೀರು ಬಿಟ್ಟಿದ್ದ ಯುವಕ ಏನಾದ ಗೊತ್ತಾ?