AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂಜನಿಯರ್​ ಹುದ್ದೆ ಬಿಟ್ಟು ಸಂಪೂರ್ಣ ಕೃಷಿಯಲ್ಲಿ ತೊಡಗಿಕೊಂಡ ಯುವತಿ; ಬರಪೀಡಿತ ಪ್ರದೇಶದಲ್ಲೇ ‘ಸಾವಯವ‘ ಸಾಧನೆ

ಚಳ್ಳಕೆರೆ ತಾಲೂಕಿನ ದೊಣೆಹಳ್ಳಿ ಗ್ರಾಮದಲ್ಲಿ ಇಂಜಿನಿಯರಿಂಗ್​ ಪದವೀಧರೆ ರೋಜಾ ರೆಡ್ಡಿ ಇಂಜಿನಿಯರಿಂಗ್ ಕೆಲಸ ಬಿಟ್ಟು ಕೃಷಿಯತ್ತ ಚಿತ್ತ ಹರಿಸಿದ್ದಾರೆ.

ಇಂಜನಿಯರ್​ ಹುದ್ದೆ ಬಿಟ್ಟು ಸಂಪೂರ್ಣ ಕೃಷಿಯಲ್ಲಿ ತೊಡಗಿಕೊಂಡ ಯುವತಿ; ಬರಪೀಡಿತ ಪ್ರದೇಶದಲ್ಲೇ ‘ಸಾವಯವ‘ ಸಾಧನೆ
ಇಂಜಿನಿಯರ್ ಪದವೀಧರೆ ರೋಜಾ ರೆಡ್ಡಿ
ರಾಜೇಶ್ ದುಗ್ಗುಮನೆ
| Edited By: |

Updated on: Jan 31, 2021 | 1:21 PM

Share

ಚಿತ್ರದುರ್ಗ: ಬಹುತೇಕ ಜನರು ತಮ್ಮ ಮಕ್ಕಳು ವೈದ್ಯರಾಗಲಿ,‌ ಇಂಜಿನಿಯರ್ ಆಗಲಿ ಎಂದು ಬಯಸುತ್ತಾರೆ. ಆದರೆ,‌ ಕೋಟೆನಾಡಿನಲ್ಲೊಬ್ಬಳು ಯುವತಿ ಇಂಜಿನಿಯರ್ ಕೆಲಸ ಬಿಟ್ಟು ಬಂದು ಕೃಷಿ ಕಾಯಕದಲ್ಲಿ ತೊಡಗಿದ್ದಾರೆ. ವಿಭಿನ್ನ ಕೃಷಿ ಮೂಲಕ ಅಧಿಕ ಆದಾಯದ ಮಾರ್ಗ ಕಂಡುಕೊಂಡು ಮಾದರಿ ಆಗಿದ್ದಾರೆ. ಅವರೇ ಇಂಜಿನಿಯರಿಂಗ್​ ಪದವೀಧರೆ ರೋಜಾ ರೆಡ್ಡಿ.

ಜಿಲ್ಲೆಯ ಗಡಿ ಭಾಗದ ಚಿತ್ರದುರ್ಗ ನಿರಂತರ ಬರಪೀಡಿತ ಪ್ರದೇಶವೂ ಹೌದು. ಬರದಿಂದಾಗಿ ಅನೇಕರು ಕೃಷಿಯಿಂದ ವಿಮುಖರಾಗುವ ಸಂದರ್ಭದಲ್ಲಿ ರೋಜಾ ರೆಡ್ಡಿ ಇಂಜಿನಿಯರ್​ ಕೆಲಸ ಬಿಟ್ಟು ಕೃಷಿಯತ್ತ ಚಿತ್ತ ನೆಟ್ಟಿದ್ದಾರೆ. ತನ್ನ ಪ್ರತಿಭೆ ಬಳಸಿಕೊಂಡು 6 ಎಕರೆ ಜಮೀನಿನಲ್ಲಿ ಸಾವಯವ ಕೃಷಿಯಲ್ಲಿ ತೊಡಗಿದ್ದಾರೆ. ಇರುವ ಅಲ್ಪ ನೀರನ್ನೇ ಬಳಸಿಕೊಂಡು ವಿವಿಧ ತರಕಾರಿಗಳ ಮಿಶ್ರ ಕೃಷಿ ಮೂಲಕ ವರ್ಷ ಪೂರ್ತಿ ನಿರಂತರ ಬೆಳೆ ಮತ್ತು ಆದಾಯ ಬರುವಂತಾಗಿದೆ. ಅಂತೆಯೇ ಆನ್​ಲೈನ್ ಆ್ಯಪ್ ಬಳಸಿಕೊಂಡು ತರಕಾರಿ ಮಾರುಕಟ್ಟೆ‌ ಸೃಷ್ಟಿಸಿಕೊಂಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ರೋಜಾ ರೆಡ್ಡಿ, ಕೃಷಿಯಲ್ಲಿ ತೊಡಗಿರುವ ಇಂಜಿನಿಯರ್ 2018 ರಲ್ಲೇ ಇಂಜಿನಿಯರಿಂಗ್ ಪದವಿ ಪಡೆದು ಬೆಂಗಳೂರಿನ ಐಬಿಎಮ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಲಾಕ್​ಡೌನ್ ಸಮಯದಲ್ಲಿ ಗ್ರಾಮಕ್ಕೆ ಬಂದವರು ತಂದೆಗೆ ಸಾಥ್ ಕೊಡಲು ಯೋಚಿಸಿದರು. ಸಾವಯವ ಕೃಷಿಗೆ ಆದ್ಯತೆ ನೀಡಿ ಕೃಷಿಯಲ್ಲಿ‌ ತೊಡಗಿದರು. ಸದ್ಯ ಕಾಲಿಫ್ಲವರ್​, ಕ್ಯಾಬೇಜ್, ಚೈನಿ ಕ್ಯಾಬೇಜ್,‌ ಬದನೆಕಾಯಿ, ಮುಳ್ಳು ಬದನೆ ಸೇರಿ ವಿವಿಧ ತರಕಾರಿ, ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. ಇಂಜಿನಿಯರ್ ಆಗಿದ್ದಾಗ ಪಡೆಯುತ್ತಿದ್ದ ವೇತನಗಿಂತಲೂ ಹೆಚ್ಚು ಹಣಗಳಿಕೆ ಆಗುತ್ತಿದೆ. ರೋಜಾ ಅವರ ಮಾದರಿ ಕೃಷಿ, ವಿದ್ಯಾವಂತರಿಗೆ ಮತ್ತು ರೈತರಿಗೆ ಮಾದರಿ ಆಗಿದೆ ಎಂದು ಗ್ರಾಮಸ್ಥರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ವಿಕಲಚೇತನನಾದ್ರೂ ಕೃಷಿ ಕಾಯಕದಲ್ಲಿ ತೊಡಗಿ ಇತರರಿಗೆ ಮಾದರಿ.. ಇಲ್ಲಿದೆ ನೋಡಿ ವಿಶೇಷ ರೈತನ ಕೃಷಿ ಬದುಕು

Follow Us
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!