ಎಸ್​ಎಸ್​ಎಲ್​ಸಿ ಹಾಲ್ ಟಿಕೆಟ್​ಗಾಗಿ ಶಾಲೆ ಎದುರು ವಿದ್ಯಾರ್ಥಿ, ಕುಟುಂಬದವರಿಂದ ಧರಣಿ

| Updated By: ಸಾಧು ಶ್ರೀನಾಥ್​

Updated on: Jul 16, 2021 | 4:34 PM

ಈ ಬಗ್ಗೆ ಶಾಲೆಯ ಮುಖ್ಯ ಶಿಕ್ಷಕ ಡೆಂಗ್ರೆ ಅವರನ್ನು ಕೇಳಿದರೆ ಮೂಸಾ ಅಕ್ರೂಟ ಹಾಗೂ ಮೋಸಿನ ಮೋಮಿನ್ ಎನ್ನುವ ವಿದ್ಯಾರ್ಥಿಗಳು ಫೋಟೋ ಕೊಟ್ಟಿಲ್ಲ. ಈ ಬಗ್ಗೆ ಪಾಲಕರಿಗೆ ಹೇಳಿದರೂ ಕೊನೆಗಳಿಗೆವರೆಗೂ ತಂದು ಕೊಟ್ಟಿಲ್ಲ ಹೀಗಾಗಿ ಪರೀಕ್ಷೆ ಬಗ್ಗೆ ಆಸಕ್ತಿ ಇರಲಿಕ್ಕಿಲ್ಲ ಎಂದು ನಾವು ಸುಮ್ಮನಾದೆವು. ಉಳಿದ ಎಲ್ಲಾ ವಿದ್ಯಾರ್ಥಿಗಳ ಹಾಲ್ ಟಿಕೆಟ್ ಬಂದಿವೆ ಎಂದು ತಿಳಿಸಿದ್ದಾರೆ.

ಎಸ್​ಎಸ್​ಎಲ್​ಸಿ ಹಾಲ್ ಟಿಕೆಟ್​ಗಾಗಿ ಶಾಲೆ ಎದುರು ವಿದ್ಯಾರ್ಥಿ, ಕುಟುಂಬದವರಿಂದ ಧರಣಿ
ಎಸ್​ಎಸ್​ಎಲ್​ಸಿ ಹಾಲ್ ಟಿಕೆಟ್​ಗಾಗಿ ಶಾಲೆ ಎದುರು ಧರಣಿ
Follow us on

ಬಾಗಲಕೋಟೆ: ಇನ್ನೇನು ಜುಲೈ 19 ಎದುರಿಗೆ ಇದೆ. ಈ ಬಾರಿಯ ಎಸ್​ಎಸ್​ಎಲ್​ಸಿ ಪರೀಕ್ಷೆ ಆರಂಭವಾಗುವ ದಿನ. ಅದರೆ ದುರ್ದೈವ ಅಂದ್ರೆ ಇನ್ನೂ ಅನೇಕ ವಿದ್ಯಾರ್ಥಿಗಳಿಗೆ ಹಾಲ್​ ಟಿಕೆಟ್​​ ಕೈಗೆ ಸೇರಿಲ್ಲ. ಇದಕ್ಕೆ ಶಾಲಾ ಆಡಳಿತ ಮಂಡಳಿಗಳ ದಿವ್ಯ ನಿರ್ಲಕ್ಷ್ಯ ಕಾರಣವಾಗಿದೆ. ಜೊತೆಗೆ ಅದೇಕೋ ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಸಹ ಈ ನತದೃಷ್ಟ ವಿದ್ಯಾರ್ಥಿಗಳ ಸಂಕಷ್ಟಕ್ಕೆ ಸ್ಪಂದಿಸದೆ ಮೌನಕ್ಕೆ ಶರಣಾಗಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ ಎಸ್​ಎಸ್​ಎಲ್​ಸಿ ಹಾಲ್ ಟಿಕೆಟ್​ಗಾಗಿ ವಿದ್ಯಾರ್ಥಿ ಕುಟುಂಬದವರು ಕಳೆದ ನಾಲ್ಕು ದಿನದಿಂದ ಶಾಲೆ ಮುಂದೆ ಧರಣಿ ಕುಳಿತಿದ್ದಾರೆ.

ಬಾಗಲಕೊಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಆಸಂಗಿ ಸರ್ಕಾರಿ ಪ್ರೌಢಶಾಲೆಯಲ್ಲಿ, ಇಬ್ಬರು ವಿದ್ಯಾರ್ಥಿಗಳ ಜತೆ ಅಜ್ಜಿ, ಮಾವ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಬಗ್ಗೆ ಶಾಲೆಯ ಮುಖ್ಯ ಶಿಕ್ಷಕ ಡೆಂಗ್ರೆ ಅವರನ್ನು ಕೇಳಿದರೆ ಮೂಸಾ ಅಕ್ರೂಟ ಹಾಗೂ ಮೋಸಿನ ಮೋಮಿನ್ ಎನ್ನುವ ವಿದ್ಯಾರ್ಥಿಗಳು ಫೋಟೋ ಕೊಟ್ಟಿಲ್ಲ. ಈ ಬಗ್ಗೆ ಪಾಲಕರಿಗೆ ಹೇಳಿದರೂ ಕೊನೆಗಳಿಗೆವರೆಗೂ ತಂದು ಕೊಟ್ಟಿಲ್ಲ ಹೀಗಾಗಿ ಪರೀಕ್ಷೆ ಬಗ್ಗೆ ಆಸಕ್ತಿ ಇರಲಿಕ್ಕಿಲ್ಲ ಎಂದು ನಾವು ಸುಮ್ಮನಾದೆವು. ಉಳಿದ ಎಲ್ಲಾ ವಿದ್ಯಾರ್ಥಿಗಳ ಹಾಲ್ ಟಿಕೆಟ್ ಬಂದಿವೆ ಎಂದು ತಿಳಿಸಿದ್ದಾರೆ.

ಮುಖ್ಯ ಶಿಕ್ಷಕರ ಹೇಳಿಕೆಯನ್ನು ಸುಳ್ಳು ಎನ್ನುತ್ತಿರುವ ಪೋಷಕರು, ಎಲ್ಲವನ್ನು ಕೊಟ್ಟಿದ್ದೇವೆ. ಇವರ ತಪ್ಪಿನಿಂದ ಹಾಲ್ ಟಿಕೆಟ್ ಬಂದಿಲ್ಲ. ಇದಕ್ಕೆ ಶಾಲೆಯ ಮುಖ್ಯಸ್ಥರೇ ಹೊಣೆ. ನಮ್ಮ ಮಕ್ಕಳಿಗೆ ನ್ಯಾಯ ಸಿಗುವವರೆಗೂ ಇಲ್ಲಿಂದ ಹೋಗಲ್ಲ. ಪರೀಕ್ಷೆಯಲ್ಲಿ ಫೇಲಾದ್ರೂ ಚಿಂತೆ ಇಲ್ಲ. ಆದರೆ ಪರೀಕ್ಷೆಗೆ ಕೂರಲು ಅವಕಾಶ ಕೊಡಿಸಬೇಕು. ಇಲ್ಲವಾದಲ್ಲಿ ನಾವು ಪ್ರತಿಭಟನೆ ಬಿಡಲ್ಲ ಎಂದು ಪಾಲಕರು ಎಚ್ಚರಿಕೆ ನೀಡಿದ್ದಾರೆ.

ಶಾಲೆಯಲ್ಲಿ 150 ವಿದ್ಯಾರ್ಥಿಗಳು ಇದ್ದು, ಇಬ್ಬರಿಗೆ ಹಾಲ್ ಟಿಕೆಟ್ ಇಲ್ಲ ಎನ್ನುವುದು ಬೇಸರದ ಸಂಗತಿ. ಜುಲೈ 19 ರಂದು ನಡೆಯಲಿರುವ ಎಸ್​ಎಸ್​ಎಲ್​ಸಿ ಪರೀಕ್ಷೆಗೂ ಮುನ್ನ ಈ ರೀತಿ ಘಟನೆ ನಡೆಯುತ್ತಿದ್ದು, ಮಕ್ಕಳ ಭವಿಷ್ಯದ ಬಗ್ಗೆ ಪೋಷಕರು ಚಿಂತೆಗೀಡಾಗುವಂತಹ ವಾತಾವರಣ ಸದ್ಯ ಸೃಷ್ಟಿಯಾಗಿದೆ.

ಇದನ್ನೂ ಓದಿ:
ಶುಲ್ಕ ಸಮರಕ್ಕೆ ಎಸ್​ಎಸ್​ಎಲ್​ಸಿ ಪರೀಕ್ಷೆಯಿಂದ ವಂಚಿತಳಾದ ಪ್ರತಿಭಾನ್ವಿತ ವಿದ್ಯಾರ್ಥಿನಿ

SLC Exam 2021: ಜುಲೈ 19 ಹಾಗೂ 22ರಂದು ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಗೆ ಕೆಎಸ್​ಆರ್​ಟಿಸಿ ಬಸ್​ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ

Published On - 12:49 pm, Fri, 16 July 21