ಈ ಬಾರಿಯೂ ಕೃಷ್ಣ ಮಠದಲ್ಲಿ ಎಡೆ-ಮಡೆ ಸ್ನಾನ ನಡೆಯಲಿಲ್ಲ
ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಸುಬ್ರಹ್ಮಣ್ಯ ಷಷ್ಠಿ ಆಚರಣೆ ಜೋರಾಗಿ ನಡೆಯುತ್ತಿದೆ. ಈ ಮಧ್ಯೆ, ಪರ್ಯಾಯ ಪಲಿಮಾರು ಸ್ವಾಮೀಜಿ ಕೃಷ್ಣ ಮಠದಲ್ಲಿ ಮಡೆಸ್ನಾನ ಮತ್ತು ಎಡೆ ಸ್ನಾನದ ಬಗ್ಗೆ ನಿರ್ಧಾರವನ್ನು ಪುನರ್ ಸ್ಪಷ್ಟಪಡಿಸಿದ್ದಾರೆ. ಕೃಷ್ಣ ಮಠದಲ್ಲಿ ಮಡೆಸ್ನಾನವೂ ಇಲ್ಲ, ಎಡೆ ಸ್ನಾನವೂ ಇಲ್ಲ ಎಂದು ಪರ್ಯಾಯ ಪಲಿಮಾರು ಸ್ವಾಮೀಜಿ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. ಕಳೆದ ವರ್ಷವೂ ಕೃಷ್ಣ ಮಠದಲ್ಲಿ ಎಡೆ- ಮಡೆ ಸ್ನಾನ ನಡೆದಿರಲಿಲ್ಲ: ಯಾವುದೇ ಗೊಂದಲಕ್ಕೆ ಅವಕಾಶವಾಗದಿರಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಹಿಂದೆ ಕೃಷ್ಣ […]
ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಸುಬ್ರಹ್ಮಣ್ಯ ಷಷ್ಠಿ ಆಚರಣೆ ಜೋರಾಗಿ ನಡೆಯುತ್ತಿದೆ. ಈ ಮಧ್ಯೆ, ಪರ್ಯಾಯ ಪಲಿಮಾರು ಸ್ವಾಮೀಜಿ ಕೃಷ್ಣ ಮಠದಲ್ಲಿ ಮಡೆಸ್ನಾನ ಮತ್ತು ಎಡೆ ಸ್ನಾನದ ಬಗ್ಗೆ ನಿರ್ಧಾರವನ್ನು ಪುನರ್ ಸ್ಪಷ್ಟಪಡಿಸಿದ್ದಾರೆ. ಕೃಷ್ಣ ಮಠದಲ್ಲಿ ಮಡೆಸ್ನಾನವೂ ಇಲ್ಲ, ಎಡೆ ಸ್ನಾನವೂ ಇಲ್ಲ ಎಂದು ಪರ್ಯಾಯ ಪಲಿಮಾರು ಸ್ವಾಮೀಜಿ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ.
ಕಳೆದ ವರ್ಷವೂ ಕೃಷ್ಣ ಮಠದಲ್ಲಿ ಎಡೆ- ಮಡೆ ಸ್ನಾನ ನಡೆದಿರಲಿಲ್ಲ: ಯಾವುದೇ ಗೊಂದಲಕ್ಕೆ ಅವಕಾಶವಾಗದಿರಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಹಿಂದೆ ಕೃಷ್ಣ ಮಠದಲ್ಲಿ ಮಡೆಸ್ನಾನ ನಡೆಯುತ್ತಿತ್ತು. ಪೇಜಾವರ ಶ್ರೀ ಗಳ ಸಲಹೆಯಂತೆ ಎಡೆ ಸ್ನಾನ ಆರಂಭಿಸಲಾಗಿತ್ತು. ಆದರೆ ಎಡೆ ಸ್ನಾನವನ್ನೂ ಮಾಡಿಸದಿರಲು ಇದೀಗ ಪಲಿಮಾರು ಶ್ರೀ ನಿರ್ಧಾರ ತೆಗೆದುಕೊಂಡಿದ್ದಾರೆ.
ಭಕ್ತರು ಕೇವಲ ವಿಶೇಷ ಪೂಜೆ ಸಲ್ಲಿಸಿ, ಅನ್ನ ಪ್ರಸಾದ ಸ್ವೀಕರಿಸಿ ತೆರಳಿದರು. ಎಡೆ ಮತ್ತು ಮಡೆ ಸ್ನಾನ ಎರಡರಲ್ಲೂ ವಿವಾದಗಳಿವೆ. ವಿವಾದ ಬೇಡ ಅನ್ನೋ ಉದ್ದೇಶಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ದೇವರ ಸೇವೆ ಅಂದ್ರೆ ಪೂಜೆಯಷ್ಟೇ ಎಂದು ಮುಖ್ಯ ಪಲಿಮಾರು ಮಠದ ವಿದ್ಯಾಧೀಶ ತೀರ್ಥರು ಹೇಳಿದ್ದಾರೆ.