Pahelgam Terrorist Attack: ಶವಪೆಟ್ಟಿಗೆಯಲ್ಲಿ ಪತಿ ಭರತ್ ಭೂಷಣ್ ದೇಹ ನೋಡುತ್ತಲೇ ಕುಸಿದುಬಿದ್ದ ಪತ್ನಿ ಸುಜಾತಾ

Updated on: Apr 23, 2025 | 11:39 AM

Pahelgam Terrorist Attack: ನಮ್ಮ ವರದಿಗಾರ ನೀಡಿರುವ ಮಾಹಿತಿಯ ಪ್ರಕಾರ ಭರತ್ ಭೂಷನ್ ಉತ್ತರ ಕರ್ನಾಟಕ ಭಾಗದವರಾಗಿದ್ದು ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲ ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಉಗ್ರರು ಪ್ರವಾಸಿಗರ ಹೆಸರು ಮತ್ತು ಧರ್ಮ ಯಾವುದೆಂದು ಕೇಳಿ ಗುಂಡು ಹಾರಿಸಿ ಕೊಂದಿದ್ದಾರೆ. ಪ್ರವಾಸಿ ಹಿಂದೂ ಅಂತ ಗೊತ್ತಾದ ಕೂಡಲೇ ಅವರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ.

ದೆಹಲಿ, ಏಪ್ರಿಲ್ 23: ಉಗ್ರರ ಹೆಸರಲ್ಲಿ ಬರುವ ಹೇಡಿಗಳ ಹೇಯ ಕೃತ್ಯಕ್ಕೆ ಮತ್ತೊಬ್ಬ ಕನ್ನಡಿಗ ಭರತ್ ಭೂಷಣ್ ಕೂಡ ಬಲಿಯಾಗಿದ್ದಾರೆ. ಪತ್ನಿ ಸುಜಾತಾ (Sujata) ಹಾಗೂ ತಮ್ಮ ಮೂರು ವರ್ಷದ ಮಗುವಿನೊಂದಿಗೆ ಕಾಶ್ಮೀರ ಪ್ರವಾಸ ತೆರಳಿದ್ದ ಭರತ್ ಅವರನ್ನು ಪತ್ನಿ ಹಾಗೂ ಮಗುವಿನೆದುರೇ ಗುಂಡಿಟ್ಟು ಕೊಲ್ಲಲಾಗಿದೆ. ಗುಂಡಿಗೆ ಬಲಿಯಾದವರ ದೇಹಗಳನ್ನು ದೆಹಲಿಗೆ ಸಾಗಿಸಲಾಗಿದ್ದು ಕುಟುಂಬದವರಿಗೆ ಹಸ್ತಾಂತರಿಸುವ ಪ್ರಕ್ರಿಯೆ ಶುರುವಾಗಿದೆ. ಶವಪೆಟ್ಟಿಗೆಗಳನ್ನು ಇಟ್ಟಿರುವ ಸ್ಥಳಕ್ಕೆ ಸುಜಾತಾ ಕನ್ನಡಿಗರ ನೆರವಿಗೆ ಹೋಗಿರುವ ಸಚಿವ ಸಂತೋಷ್ ಲಾಡ್ ಅವರೊಂದಿಗೆ ಅಳುತ್ತಾ, ಅಸ್ಥಿರ ಹೆಜ್ಜೆಗಳನ್ನು ಹಾಕುತ್ತಾ ಬರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಸುಜಾತಾ ಹಿಂದೆ ವ್ಯಕ್ತಿಯೊಬ್ಬರು ಅವರ ಮಗುವನ್ನು ಎತ್ತಿಕೊಂಡು ಬರುತ್ತಿದ್ದಾರೆ. ಶವಪೆಟ್ಟಿಗೆಯಲ್ಲಿ ಪತಿ ದೇಹವನ್ನು ನೋಡಿದ ಕೂಡಲೇ ಸುಜಾತಾ ಕುಸಿದುಬಿದ್ದರು.

ಇದನ್ನೂ ಓದಿ:  Pahelgam Terrorist Attack: ಕನ್ನಡಿಗರನ್ನು ಕರೆತರಲು ತೆರಳಿರುವ ಸಂತೋಷ್ ಲಾಡ್ ಕಂಡು ಪಲ್ಲವಿಗೆ ದುಃಖ ಉಕ್ಕಿಬಂತು!

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ