ದೆಹಲಿ: ಬೈ ಎಲೆಕ್ಷನ್ ಹತ್ತಿರ ಬರ್ತಾಇದ್ದಂತೆ ಅನರ್ಹಗೊಂಡ ಶಾಸಕರೆಲ್ಲಾ ಮತ್ತೆ ಅಖಾಡಕ್ಕಿಳಿಯೋ ನಿರೀಕ್ಷೆಯಲ್ಲಿದ್ರು. ಇನ್ನೇನು ಸುಪ್ರೀಂ ತೀರ್ಪು ನಮ್ಮ ಪರವೇ ಬರುತ್ತೆ ಅಂತಾ ಜೋಶ್ನಲ್ಲಿದ್ರು. ಆದ್ರೆ, ಯಾವಾಗ ಬಿಎಸ್ವೈ ಆಡಿಯೋ ಬಾಂಬ್ ಸಿಡಿಯಿತೋ ಅಲ್ಲಿಗೆ ಅನರ್ಹರ ಆಸೆ, ಆಕಾಂಕ್ಷೆಗಳೆಲ್ಲ ಮಣ್ಣುಪಾಲಾಗೋ ಹಂತ ತಲುಪಿದ್ವು. ಬಿಜೆಪಿಯ ಚುನಾವಣಾ ಸಿದ್ಧತಾ ಸಭೆಯಲ್ಲಿ ಬಿ.ಎಸ್.ಯಡಿಯೂರಪ್ಪ ಸಿಡಿಸಿರುವ ಆಡಿಯೋ ಬಾಂಬ್ ಅನರ್ಹ ಶಾಸಕರ ಪಾಲಿಗೆ ಕಂಟಕವಾಗಿದೆ.
ಈ ವಿಚಾರ ಕುರಿತು ಇಂದು ಸುಪ್ರೀಂಕೋರ್ಟ್ ಕಲಾಪ ಆರಂಭ ಆಗ್ತಿದ್ದಂತೆಯೇ ಆಡಿಯೋ ಮೆನ್ಷನ್ ಮಾಡಲು ಕಾಂಗ್ರೆಸ್ ಮುಂದಾಗಿದ್ದು, ಬೆಳಗ್ಗೆ ನ್ಯಾ. ರಮಣ ನೇತೃತ್ವದ ತ್ರಿಸದಸ್ಯ ಪೀಠದ ಮುಂದೆ ಕಾಂಗ್ರೆಸ್ ಪರ ಹಿರಿಯ ವಕೀಲ ಕಪಿಲ್ ಸಿಬಲ್, ಯಡಿಯೂರಪ್ಪ ಆಡಿಯೋ ಪ್ರಕರಣ ಪ್ರಸ್ತಾಪ ಮಾಡಿದ್ರು. ಅನರ್ಹರ ಪ್ರಕರಣದಲ್ಲಿ ಬಿ.ಎಸ್.ಯಡಿಯೂರಪ್ಪ ಆಡಿಯೋವನ್ನು ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸುವಂತೆ ಮನವಿ ಮಾಡಿದ್ದಾರೆ.
ಅನರ್ಹ ಶಾಸಕರು, ಬಿಜೆಪಿಗೆ ಎದುರಾಯ್ತು ಬಿಗ್ ಟ್ರಬಲ್?
ಬಿ.ಎಸ್.ಯಡಿಯೂರಪ್ಪ ಆಡಿಯೋವನ್ನು ಸಾಕ್ಷಿಯಾಗಿ ಪರಿಗಣಿಸಲು ಕೋರ್ಟ್ ಒಪ್ಪಿಗೆ ನೀಡಿದೆ. ಆಡಿಯೋವನ್ನು ಸಾಕ್ಷಿಯಾಗಿ ಪರಿಗಣಿಸುತ್ತೇವೆ ಎಂದು ನ್ಯಾ. ರಮಣ ತಿಳಿಸಿದ್ದಾರೆ. ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ.
Published On - 1:03 pm, Mon, 4 November 19