ರೋಷನ್ ಬೇಗ್ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಮುಂದಿನ ವಿಚಾರಣೆವರೆಗೂ ಬಂಧಿಸದಂತೆ ಸುಪ್ರೀಂ ಕೋರ್ಟ್ ಸೂಚನೆ
2012ರಲ್ಲಿ ರೋಷನ್ ಬೇಗ್ ವಿರುದ್ಧ, ಅಕ್ರಮ ಆಸ್ತಿ ಗಳಿಕೆಯ ದೂರು ದಾಖಲಾಗಿತ್ತು. ಅಬ್ದುಲ್ ಹಕ್ ಎಂಬವರು ರೋಷನ್ ಬೇಗ್ ವಿರುದ್ಧ ದೂರು ದಾಖಲಿಸಿದ್ದರು.
ಬೆಂಗಳೂರು: ಮಾಜಿ ಸಚಿವ ರೋಷನ್ ಬೇಗ್ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿ, ಮುಂದಿನ ವಿಚಾರಣೆಯವರೆಗೂ ಅವರನ್ನು ಬಂಧಿಸದಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಈ ಮೂಲಕ, ರೋಷನ್ ಬೇಗ್ಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.
2012ರಲ್ಲಿ ರೋಷನ್ ಬೇಗ್ ವಿರುದ್ಧ, ಅಕ್ರಮ ಆಸ್ತಿ ಗಳಿಕೆಯ ದೂರು ದಾಖಲಾಗಿತ್ತು. ಅಬ್ದುಲ್ ಹಕ್ ಎಂಬವರು ರೋಷನ್ ಬೇಗ್ ವಿರುದ್ಧ ದೂರು ದಾಖಲಿಸಿದ್ದರು. ಪ್ರಕರಣ ಸಂಬಂಧ ಲೋಕಾಯುಕ್ತ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದರು. ಬಳಿಕ ಜನಪ್ರತಿನಿಧಿಗಳ ಕೋರ್ಟ್, ಪ್ರಕರಣದ ತನಿಖೆಗೆ ಆದೇಶ ನೀಡಿತ್ತು.
ಈ ಸಂಬಂಧ ರೋಷನ್ ಬೇಗ್, ಪ್ರಕರಣ ರದ್ದುಗೊಳಿಸುವಂತೆ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ, ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿತ್ತು. ಬಳಿಕ ಹೈಕೋರ್ಟ್ ಆದೇಶ ಪ್ರಶ್ನಿಸಿ ರೋಷನ್ ಬೇಗ್, ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ, ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ನೇತೃತ್ವದ ಪೀಠ, ಮುಂದಿನ ವಿಚಾರಣೆಯವರೆಗೂ ರೋಷನ್ ಬೇಗ್ ಬಂಧಿಸದಂತೆ ಆದೇಶ ನೀಡಿದೆ.
IMAದಿಂದ 400 ಕೋಟಿ ರೂ. ಗಿಫ್ಟ್ ಪಡೆದ ಆರೋಪ: CBI ವಶಕ್ಕೆ ರೋಷನ್ ಬೇಗ್
Published On - 3:39 pm, Wed, 13 January 21