ಚಾಮರಾಜನಗರಕ್ಕೆ ತಜ್ಞರ ಸಮಿತಿ ಆಗಮಿಸಿ, ಸಾವಿಗೆ ಕಾರಣ ಹುಡುಕಲಿದೆ; ಸಚಿವ ಸುರೇಶ್ ಕುಮಾರ್ ಮಾಹಿತಿ
ಜಿಲ್ಲಾಸ್ಪತ್ರೆಯಲ್ಲಿ 24 ರೋಗಿಗಳು ಸಾವನ್ನಪ್ಪಿದ್ದರೂ ಚಾಮರಾಜನಗರ ಜಿಲ್ಲಾಡಳಿತ ಪದೇಪದೆ ನಿರ್ಲಕ್ಷ್ಯ ತೋರುತ್ತಿದೆ. 24 ರೋಗಿಗಳು ಮೃತಪಟ್ಟು ಮೂರು ದಿನಗಳಾದರೂ ಮೃತರ ಸಂಬಂಧಿಕರಿಗೆ ಕೊರೊನಾ ಪರೀಕ್ಷೆ ಮಾಡಿಲ್ಲ. ಮತ್ತೊಂದೆಡೆ ಜಿಲ್ಲಾಸ್ಪತ್ರೆ ಮೃತರ ಶವವನ್ನು ಸಂಬಂಧಿಕರಿಗೆ ರಾತ್ರೋರಾತ್ರಿ ಹಸ್ತಾಂತರಿಸಿತು.
ಚಾಮರಾಜನಗರ: ಕಳೆದ 24 ಗಂಟೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ 20 ಜನ ಮೃತಪಟ್ಟಿದ್ದಾರೆ ಎಂದು ಮಾತನಾಡಿದ ಸಚಿವ ಸುರೇಶ್ ಕುಮಾರ್, ಈ ಪೈಕಿ 15 ಜನರು ಕೊರೊನಾದಿಂದ ಮೃತಪಟ್ಟಿದ್ದಾರೆ. ಉಳಿದ ಐವರು ನಾನ್ ಕೊವಿಡ್ನಿಂದ ಸಾವನ್ನಪ್ಪಿದ್ದಾರೆ. ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಸಾವು ಆತಂಕಕಾರಿ. ಹೀಗಾಗಿ ಬೆಂಗಳೂರಿನಿಂದ ತಜ್ಞರ ಸಮಿತಿ ಆಗಮಿಸಲಿದೆ. ಇಂದು ಮತ್ತು ನಾಳೆಯೊಳಗಾಗಿ ವೈದ್ಯರ ತಜ್ಞರ ಸಮಿತಿ ಆಗಮಿಸಲಿದೆ. ಸಮಿತಿ ಆಸ್ಪತ್ರೆಯಲ್ಲಿ ಸಾವಿಗೆ ಕಾರಣ ಹುಡುಕಲಿದೆ. ಜಿಲ್ಲಾಸ್ಪತ್ರೆಯಲ್ಲಿ ಇರುವ ನರ್ಸ್ಗಳ ಕೊರತೆಗೆ ಇಂದು ಪರಿಹಾರ ಸಿಗಲಿದೆ. ಇರುವ ನರ್ಸ್ಗಳಲ್ಲಿ ಕೆಲವರಿಗೆ ಕೊವಿಡ್ ಸೋಂಕು ತಗುಲಿದೆ ಎಂದು ಹೇಳಿದರು.
ಚಾಮರಾಜನಗರ ಜಿಲ್ಲಾಡಳಿತದಿಂದ ಪದೇಪದೆ ನಿರ್ಲಕ್ಷ್ಯ ಜಿಲ್ಲಾಸ್ಪತ್ರೆಯಲ್ಲಿ 24 ರೋಗಿಗಳು ಸಾವನ್ನಪ್ಪಿದ್ದರೂ ಚಾಮರಾಜನಗರ ಜಿಲ್ಲಾಡಳಿತ ಪದೇಪದೆ ನಿರ್ಲಕ್ಷ್ಯ ತೋರುತ್ತಿದೆ. 24 ರೋಗಿಗಳು ಮೃತಪಟ್ಟು ಮೂರು ದಿನಗಳಾದರೂ ಮೃತರ ಸಂಬಂಧಿಕರಿಗೆ ಕೊರೊನಾ ಪರೀಕ್ಷೆ ಮಾಡಿಲ್ಲ. ಮತ್ತೊಂದೆಡೆ ಜಿಲ್ಲಾಸ್ಪತ್ರೆ ಮೃತರ ಶವವನ್ನು ಸಂಬಂಧಿಕರಿಗೆ ರಾತ್ರೋರಾತ್ರಿ ಹಸ್ತಾಂತರಿಸಿತು. ಮೃತಪಟ್ಟರು ಎಂಬ ನೋವಿನಲ್ಲಿ ಸಂಬಂಧಿಕರು ಪಿಪಿಇ ಕಿಟ್ ಧರಿಸದೇ ಹಾಗೆಯೇ ಎತ್ತು ಕೊಂಡು ಹೋಗಿದ್ದರು.
ಅಂತ್ಯಸಂಸ್ಕಾರ ಮಾಡಿದ ಬಳಿಕ ಮೃತರ ಸಂಬಂಧಿಗಳ ಎದೆಯಲ್ಲಿ ಡವಡವ ಆರಂಭವಾಗಿದೆ. ಆದರೆ ಇನ್ನೂ ಸಂಬಂಧಿಕರಿಗೆ ಕೊರೊನಾ ಪರೀಕ್ಷೆ ನಡೆಸಿಲ್ಲ. ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಕೊರೊನಾ ಹೆಚ್ಚಾಗುವ ಸಾಧ್ಯತೆಯಿದ್ದು, ಮೃತರ ಕುಟುಂಬಸ್ಥರಲ್ಲಿ ಕೊರೊನಾ ಆತಂಕ ಶುರುವಾಗಿದೆ.
ಇದನ್ನೂ ಓದಿ
ಬೀದಿಗೆ ಬಂದ ಹೂವು ಬೆಳೆಗಾರರ ಬದುಕು; ರಸ್ತೆಯಲ್ಲಿಯೇ ಹೂವುಗಳನ್ನು ಸುರಿದು ರೈತರ ಆಕ್ರೋಶ
ಸಿಎಂ ನಿವಾಸ ಕಾವೇರಿ ಬಳಿ ಬಂದು, ಪತಿಗೆ ಬೆಡ್ ನೀಡುವಂತೆ ಅಂಗಲಾಚಿದ ಮಹಿಳೆ; ಆಸ್ಪತ್ರೆ ತಲುಪುವ ಮುನ್ನವೇ ಪತಿ ಸಾವು
(Suresh Kumar says Expert panel visits chamarajanagar to determine cause of death)
Published On - 11:22 am, Thu, 6 May 21