AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀದಿಗೆ ಬಂದ ಹೂವು ಬೆಳೆಗಾರರ ಬದುಕು; ರಸ್ತೆಯಲ್ಲಿಯೇ ಹೂವುಗಳನ್ನು ಸುರಿದು ರೈತರ ಆಕ್ರೋಶ

ಕೊರೊನಾ ಹೆಚ್ಚಾದ ಹಿನ್ನೆಲೆ ರಾಜ್ಯ ಸರ್ಕಾರ ಕಟ್ಟು ನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ. ಈ ಕಾರಣ ರಾಜ್ಯದಲ್ಲಿ ಹೆಚ್ಚಾಗಿ ಕಾರ್ಯಕ್ರಮಗಳು ನಡೆಯುತ್ತಿಲ್ಲ. ನಡೆದರೂ ದೊಡ್ಡ ಮಟ್ಟದಾಗಿ ನಡೆಯುತ್ತಿಲ್ಲ. ಕೊರೊನಾ ನಿಯಮಗಳಿಗೆ ಸೀಮಿತವಾಗಿ ಕಾರ್ಯಕ್ರಮವನ್ನು ಮಾಡುತ್ತಿದ್ದಾರೆ. ಹೀಗಾಗಿ ಹೂವುಗಳಿಗೆ ಬೇಡಿಕೆ ಕಡಿಮೆಯಾಗಿದೆ.

ಬೀದಿಗೆ ಬಂದ ಹೂವು ಬೆಳೆಗಾರರ ಬದುಕು; ರಸ್ತೆಯಲ್ಲಿಯೇ ಹೂವುಗಳನ್ನು ಸುರಿದು ರೈತರ ಆಕ್ರೋಶ
ಹೂವಿನ ರಾಶಿ
sandhya thejappa
|

Updated on: May 06, 2021 | 10:48 AM

Share

ಬೆಂಗಳೂರು: ಕೊರೊನಾ ಸೋಂಕಿನಿಂದ ರೈತರು ಕಂಗಾಲಾಗಿದ್ದಾರೆ. ಕೊರೊನಾ ಮೊದಲನೇ ಅಲೆಯಲ್ಲಿ ನೊಂದು ಬೆಂದ ರೈತರು ಈ ಬಾರಿಯಾದರು ಹಣವನ್ನು ಗಳಿಸಬಹುದೆಂದು ನಿರೀಕ್ಷೆಯಲ್ಲಿದ್ದರು. ಆದರೆ ಕೊರೊನಾ ಎರಡನೇ ಅಲೆ ಬಂದು ಅಪ್ಪಳಿಸಿದೆ. ಇದರಿಂದ ಹೆಚ್ಚು ನಿರೀಕ್ಷೆಯಲ್ಲಿದ್ದ ರೈತರು ಕಣ್ಣೀರಿಡುವಂತಾಗಿದೆ. ರಾಜ್ಯದಲ್ಲಿ ಲಾಕ್​ಡೌನ್​ ಜಾರಿಯಾದ ಹಿನ್ನೆಲೆ ಹೂ ಬೆಳೆಗಾರರು ಬದುಕು ಬೀದಿಗೆ ಬಂದಂತಾಗಿದೆ. ವ್ಯಾಪಾರವಿಲ್ಲದೆ ಬೆಳೆದ ಹೂವನ್ನು ರೈತರು ನಾಶ ಮಾಡಿದ್ದಾರೆ.

ಕೊರೊನಾ ಹೆಚ್ಚಾದ ಹಿನ್ನೆಲೆ ರಾಜ್ಯ ಸರ್ಕಾರ ಕಟ್ಟು ನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ. ಈ ಕಾರಣ ರಾಜ್ಯದಲ್ಲಿ ಹೆಚ್ಚಾಗಿ ಕಾರ್ಯಕ್ರಮಗಳು ನಡೆಯುತ್ತಿಲ್ಲ. ನಡೆದರೂ ದೊಡ್ಡ ಮಟ್ಟದಾಗಿ ನಡೆಯುತ್ತಿಲ್ಲ. ಕೊರೊನಾ ನಿಯಮಗಳಿಗೆ ಸೀಮಿತವಾಗಿ ಕಾರ್ಯಕ್ರಮವನ್ನು ಮಾಡುತ್ತಿದ್ದಾರೆ. ಹೀಗಾಗಿ ಹೂವುಗಳಿಗೆ ಬೇಡಿಕೆ ಕಡಿಮೆಯಾಗಿದೆ. ಇದರಿಂದ ಹೂವನ್ನು ಬೆಳೆದ ರೈತರು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.

ಹೂವುಗಳು ವ್ಯಾಪಾರವಾಗದ ಹಿನ್ನೆಲೆ ಬೆಳೆದ ರಾಶಿ ರಾಶಿ ಹೂವುಗಳನ್ನು ರಸ್ತೆಯಲ್ಲೇ ಎಸೆದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೂವುಗಳು ಹೊಸಕೋಟೆ, ದೊಡ್ಡಬಳ್ಳಾಪುರ ಸೇರಿದಂತೆ ಬೇರೆ ಬೇರೆ ಕಡೆಯಿಂದ ಸಿಟಿಗೆ ಬರುತ್ತಿತ್ತು. ಸದ್ಯ ನಿಯಮಗಳು ಜಾರಿಯಾದ ಕಾರಣ ಹೂವಿನ ಬೆಲೆ ಪಾತಾಳಕ್ಕೆ ಕುಸಿದಿದೆ. ಕೆಆರ್ ಮಾರ್ಕೆಟ್ ನಲ್ಲಿ 10 ಗಂಟೆವರೆಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ಇದೆ.

ಇದನ್ನೂ ಓದಿ

ನರ್ಸ್ ಕೊರತೆ ಆತಂಕದಲ್ಲಿ ಕೋವಿಡ್ ಆಸ್ಪತ್ರೆ; ಕೈಯಲ್ಲಿ ಅಪಾಯಿಟ್ಮೆಂಟ್​ ಆರ್ಡರ್ ಹಿಡಿದು​ ಕುಳಿತಿದೆ ಆಡಳಿತ ಮಂಡಳಿ

Coronavirus India Update: ಭಾರತದಲ್ಲಿ 4.12 ಲಕ್ಷ ಹೊಸ ಕೊವಿಡ್ ಪ್ರಕರಣ ಪತ್ತೆ, 3980 ಮಂದಿ ಸಾವು

(farmers poured flowers on road and farmers were outraged)