ಹುಬ್ಬಳ್ಳಿಯ ಲೈಫ್ಲೈನ್ ಆಸ್ಪತ್ರೆಯಲ್ಲಿ ಐದು ಜನರ ನಿಗೂಢ ಸಾವು ಪ್ರಕರಣ; ತನಿಖೆಗೆ ಆದೇಶ
ಮೊನ್ನೆ ರಾತ್ರಿ ಮೇ 4ನೇ ತಾರೀಕಿನಂದು ಹುಬ್ಬಳ್ಳಿಯ ಲೈಫ್ಲೈನ್ ಆಸ್ಪತ್ರೆಯಲ್ಲಿ ಐದು ಜನ ನಿಗೂಢ ಸಾವು ಸಂಭವಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಆರೋಗ್ಯಾಧಿಕಾರಿಯಿಂದ ತನಿಖೆಗೆ ಆದೇಶ ಹೊರಡಿಸಲಾಗಿದೆ.
ಹುಬ್ಬಳ್ಳಿ: ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆಯೂ ಉಲ್ಬಣಗೊಳ್ಳುತ್ತಿದೆ. ಮೊನ್ನೆ ರಾತ್ರಿ ಮೇ 4ನೇ ತಾರೀಕಿನಂದು ಲೈಫ್ಲೈನ್ ಆಸ್ಪತ್ರೆಯಲ್ಲಿ ಐದು ಜನ ನಿಗೂಢ ಸಾವು ಸಂಭವಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಆರೋಗ್ಯಾಧಿಕಾರಿಯಿಂದ ತನಿಖೆಗೆ ಆದೇಶ ಹೊರಡಿಸಲಾಗಿದೆ. ಆಕ್ಸಿಜನ್ ಕೊರತೆಯಿಂದಾಗಿ ಸಾವಿಗೀಡಾಗಿದ್ದಾರೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸುವಂತೆ ಆದೇಶಿಸಲಾಗಿದೆ.
ಜಿಲ್ಲಾ ಆರ್ಸಿಹೆಚ್ ಡಾ.ಎಸ್.ಎಂ ಹೊನಕೇರಿ ನೈತೃತ್ವದಲ್ಲಿ ತನಿಖೆ ನಡೆಸುವಂತೆ ಡಿಹೆಚ್ಓ ಯಶವಂತ ಮದೀನಕರ್ ಅವರು ಆದೇಶ ಹೊರಡಿಸಿದ್ದು, ಮೂರು ದಿನಗಳೊಳಗೆ ವಿಚಾರಣೆ ಮುಗಿಸಿ ವರದಿ ನೀಡಿವಂತೆ ಸೂಚನೆ ನೀಡಲಾಗಿದೆ.
ವಿಜಯಪುರ ಇಂಡಿ ತಾಲೂಕು ಆಸ್ಪತ್ರೆ ವೈದ್ಯರ ನಿರ್ಲಕ್ಷ; ರೋಗಿ ಸಾವು ಎಂದು ಆರೋಪ ಆಸ್ಪತ್ರೆಯ ವೈದ್ಯರು ಕುಟುಂಬಸ್ಥರನ್ನು ಹೆದರಿಸುತ್ತಿದ್ದಾರೆ. ರೋಗಿ ತುಂಬಾ ಗಂಭೀರ ಸ್ಥಿತಿಯಲ್ಲಿದ್ದಾರೆ. ಇನ್ನು, ಅವರು ಬದುಕುವುದಿಲ್ಲ ಎಂದು ವೈದ್ಯರು ಕುಡುಂಬಸ್ಥರನ್ನು ಹೆದರಿಸುತ್ತಿದ್ದಾರೆ. ಸಂಬಂಧಿಕರಲ್ಲಿ ಅಧೈರ್ಯ ತುಂಬುತ್ತಿದ್ದಾರೆ ಎಂದು ಆರೋಪದ ಮಾತು ಕೇಳಿ ಬರುತ್ತಿದೆ. ಆಸ್ಪತ್ರೆಗೆ ಬರುವ ರೋಗಿಗಳಿಗೆ ಧೈರ್ಯ ತುಂಬುವ ಮಾತನ್ನಾಡುವುದನ್ನು ಬಿಟ್ಟು, ಧೈರ್ಯಗೆಡಿಸುತ್ತಿದ್ದಾರೆ. ಇಂಡಿ ತಾಲೂಕು ಆಸ್ಪತ್ರೆಯ ವೈದ್ಯರ ನಿರ್ಲಕ್ಷಕ್ಕೆ ರೋಗಿಗಳು ಬಲಿಯಾಗುತ್ತಿದ್ದಾರೆ ಎಂದು ಆರೋಪ ಮಾಡಲಾಗುತ್ತಿದೆ.
ಕಳೆದ ಮೂರ್ನಾಲ್ಕು ದಿನಗಳಿಂದ ದಾಖಲಾಗಿದ್ದರೂ ಇಂಡಿ ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ನೀಡದ ಕಾರಣ ಕಳೆದ ರಾತ್ರಿ ರೋಗಿ ಸಾವಿಗೀಡಾಗಿದ್ದರು. ಹೀಗಾಗಿ ವೈದ್ಯರು ಹಾಗೂ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳುವಂತೆ ರೋಗಿ ಸಂಬಂಧಿಕರು ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ: ಕೊವಿಡ್ ಭಯ; ದಾವಣಗೆರೆಯಲ್ಲಿ ರೈಲಿಗೆ ತಲೆಕೊಟ್ಟ ಪತ್ರಕರ್ತ