ಬೆಂಗಳೂರು ಪೊಲೀಸರಿಗೆ ಮಂಗಳೂರು ಬಾಂಬ್ ಆರೋಪಿ ಶರಣು! ಡಿಟೇಲ್ಸ್​ ಇಲ್ಲಿದೆ

ಬೆಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ಆರೋಪಿ ಆದಿತ್ಯ ರಾವ್ ಬೆಂಗಳೂರು ಪೊಲೀಸರ ಮುಂದೆ ಶರಣಾಗಿದ್ದಾನೆ. ಬಾಂಬ್ ಇಟ್ಟಿದ್ದ ಶಂಕಿತ ಆರೋಪಿ ಉಡುಪಿ ಮೂಲದ ಆದಿತ್ಯರಾವ್ ಇಂದು ಡಿಜಿ & ಐಜಿಪಿ ನೀಲಮಣಿ ಎನ್.ರಾಜು ಎದುರು ಶರಣಾಗಿದ್ದು, ಮಂಗಳೂರು ಏರ್‌ಪೋರ್ಟ್‌ನಲ್ಲಿ ಬಾಂಬ್ ಇಟ್ಟಿದ್ದು ನಾನೇ ಎಂದು ತಪ್ಪೊಪ್ಪಿಕೊಂಡಿದ್ದಾನೆ. 2 ತಿಂಗಳ ಹಿಂದೆ ಚಿಕ್ಕಬಳ್ಳಾಪುರದ ಕಾರಾಗೃಹದಿಂದ ಬಿಡುಗಡೆಯಾಗಿದ್ದ ಈತ ಒಂದು ವರ್ಷ ಚಿಕ್ಕಬಳ್ಳಾಪುರ ಜೈಲಿನಲ್ಲಿದ್ದ. ಜೈಲಿನಲ್ಲಿ ವಿವಿಧ ಕ್ರೈಂ ಸೇರಿದಂತೆ ಐಪಿಸಿ ಪುಸ್ತಕಗಳು […]

ಬೆಂಗಳೂರು ಪೊಲೀಸರಿಗೆ ಮಂಗಳೂರು ಬಾಂಬ್ ಆರೋಪಿ ಶರಣು! ಡಿಟೇಲ್ಸ್​ ಇಲ್ಲಿದೆ
Follow us
ಸಾಧು ಶ್ರೀನಾಥ್​
|

Updated on:Jan 22, 2020 | 11:06 AM

ಬೆಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ಆರೋಪಿ ಆದಿತ್ಯ ರಾವ್ ಬೆಂಗಳೂರು ಪೊಲೀಸರ ಮುಂದೆ ಶರಣಾಗಿದ್ದಾನೆ. ಬಾಂಬ್ ಇಟ್ಟಿದ್ದ ಶಂಕಿತ ಆರೋಪಿ ಉಡುಪಿ ಮೂಲದ ಆದಿತ್ಯರಾವ್ ಇಂದು ಡಿಜಿ & ಐಜಿಪಿ ನೀಲಮಣಿ ಎನ್.ರಾಜು ಎದುರು ಶರಣಾಗಿದ್ದು, ಮಂಗಳೂರು ಏರ್‌ಪೋರ್ಟ್‌ನಲ್ಲಿ ಬಾಂಬ್ ಇಟ್ಟಿದ್ದು ನಾನೇ ಎಂದು ತಪ್ಪೊಪ್ಪಿಕೊಂಡಿದ್ದಾನೆ.

2 ತಿಂಗಳ ಹಿಂದೆ ಚಿಕ್ಕಬಳ್ಳಾಪುರದ ಕಾರಾಗೃಹದಿಂದ ಬಿಡುಗಡೆಯಾಗಿದ್ದ ಈತ ಒಂದು ವರ್ಷ ಚಿಕ್ಕಬಳ್ಳಾಪುರ ಜೈಲಿನಲ್ಲಿದ್ದ. ಜೈಲಿನಲ್ಲಿ ವಿವಿಧ ಕ್ರೈಂ ಸೇರಿದಂತೆ ಐಪಿಸಿ ಪುಸ್ತಕಗಳು ಓದಿದ್ದ. ಆದಿತ್ಯ ರಾವ್ ಜೈಲಿನಲ್ಲಿದ್ದಾಗ ಮಾಡುತ್ತಿದ್ದ ಚಟುವಟಿಕೆಗಳ ಬಗ್ಗೆ ಚಿಕ್ಕಬಳ್ಳಾಪುರ ಪೊಲೀಸರಿಂದ ಮಂಗಳೂರು ಪೊಲೀಸರು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಆದಿತ್ಯರಾವ್ ಯಾರು: ಬಾಂಬ್ ಇಟ್ಟಿದ್ದ ಆರೋಪಿ ನಿರಾಸೆ ಹೊಂದಿರುವ ಇಂಜಿನಿಯರಿಂಗ್ ಪದವೀಧರ ಎಂದು ತಿಳಿದುಬಂದಿದೆ. ಆರೋಪಿ ಆದಿತ್ಯರಾವ್ ಉಡುಪಿಯ ಮಣಿಪಾಲದ ನಿವಾಸಿ. ಆರೋಪಿ ಆದಿತ್ಯರಾವ್ ತಂದೆ ನಿವೃತ್ತ ಬ್ಯಾಂಕ್‌ನ ವ್ಯವಸ್ಥಾಪಕರು. ಆದಿತ್ಯರಾವ್ ತಾಯಿ ಕ್ಯಾನ್ಸರ್​ನಿಂದ ಮೃತಪಟ್ಟಿದ್ದಾರೆ. ಆದಿತ್ಯನ ಸಹೋದರ ಮೂಡುಬಿದರೆಯಲ್ಲಿ ಬ್ಯಾಂಕ್ ನೌಕರ.

ಇಂಜಿನಿಯರ್ ಆದಿತ್ಯರಾವ್ ಏರ್‌ಪೋರ್ಟ್‌ನಲ್ಲಿ ಕೆಲಸ ಮಾಡುವ ಕನಸು ಕಂಡಿದ್ದ ಆದಿತ್ಯ. ಕೆಲಸ ಸಿಗದಿದ್ದಾಗ ಬಾಣಸಿಗ, ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡಿಕೊಂಡಿದ್ದ. ಮಾರ್ಕೆಟಿಂಗ್ ಫೀಲ್ಡ್‌ನಲ್ಲಿ ಕೆಲ ಕಾಲ ಕೆಲಸ ಮಾಡಿದ್ದನು. ಬೆಂಗಳೂರಿನಲ್ಲಿಯೂ ಕೆಲವು ದಿನ ಕೆಲಸ ಮಾಡಿದ್ದ ಆದಿತ್ಯರಾವ್. ಈ ವೇಳೆ ಬಾಂಬ್ ಬೆದರಿಕೆ ಕರೆ ಮಾಡಿ ಜೈಲು ಸೇರಿದ್ದ. ಜೈಲಿನಿಂದ ಬಿಡುಗಡೆಯಾಗಿ ಮಂಗಳೂರಿಗೆ ಹೋಗಿದ್ದನು. ಮಂಗಳೂರಿನಲ್ಲಿ ತಂದೆಯ ಜೊತೆ ವಾಸಿಸುತ್ತಿದ್ದ ಆದಿತ್ಯರಾವ್

ಪೊಲೀಸರಿಗೆ ಬೊಮ್ಮಾಯಿ ಪ್ರಶಂಸೆ, ಕುಮಾರಸ್ವಾಮಿಗೆ ಎಚ್ಚರಿಕೆ: ಪೊಲೀಸರು ಪ್ರಾಮಾಣಿಕ, ನಿಷ್ಪಪಕ್ಷಪಾತ ತನಿಖೆ ನಡೆಸಿದ್ದಾರೆ ಎಂದು ಪೊಲೀಸರ ಕಾರ್ಯಕ್ಕೆ ಬಸವರಾಜ ಬೊಮ್ಮಾಯಿ ಪ್ರಶಂಸಿದ್ದಾರೆ. ಈ ಪ್ರಕರಣದ ಬಗ್ಗೆ ಯಾರ ಮೇಲೆ ನಾವು ಆರೋಪಿಸಿರಲಿಲ್ಲ. ಆತ ನಿರಾಸೆ ಹೊಂದಿರುವ ಇಂಜಿನಿಯರಿಂಗ್ ಪದವೀಧರ. ಈ ಪ್ರಕರಣ ಸಂಬಂಧ ಕುಮಾರಸ್ವಾಮಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೇಳಿಕೆ ನೀಡಿದ್ದರು. ಈ ವಿಚಾರದಲ್ಲಿ ರಾಜಕೀಯ ಪ್ರೇರಿತ ಹೇಳಿಕೆಗಳನ್ನ ನೀಡಬೇಡಿ ಎಂದು ಕುಮಾರಸ್ವಾಮಿ ವಿರುದ್ಧ ಬಸವರಾಜ ಬೊಮ್ಮಾಯಿ ಆಕ್ರೋಶ ಹೊರ ಹಾಕಿದ್ದಾರೆ.

Published On - 9:35 am, Wed, 22 January 20