ಪಠ್ಯಕ್ರಮ ಫೈಟ್‌: ಶಿಕ್ಷಣ ಇಲಾಖೆ ವಿರುದ್ಧ ಸಿಎಂಗೆ ದೂರು ಕೊಡಲು ಮುಂದಾದ ಖಾಸಗಿ ಶಾಲೆಗಳ ಒಕ್ಕೂಟ

| Updated By: ಗಂಗಾಧರ​ ಬ. ಸಾಬೋಜಿ

Updated on: Oct 09, 2024 | 8:37 PM

ಶಿಕ್ಷಣ ಇಲಾಖೆ ಹಾಗೂ ಖಾಸಗಿ ಶಾಲೆಗಳ ನಡುವೆ ಪಠ್ಯಕ್ರಮ ಫೈಟ್‌ ಶುರುವಾಗಿದೆ. ಶಿಕ್ಷಣ ಇಲಾಖೆಯ ಪಠ್ಯಕ್ರಮದಲ್ಲಿ ಕ್ವಾಲಿಟಿ ಇಲ್ಲವಾ ಅನ್ನೋ ಅನುಮಾನ ಶುರುವಾಗಿದೆ. ಕಡ್ಡಾಯ ಪಠ್ಯಕ್ರಮ ಅನುಸರಿಸುವ ವಿಚಾರದಲ್ಲಿ ಸಂಘರ್ಷ ಶುರುವಾಗಿದೆ. ಹೀಗಾಗಿ ಶಿಕ್ಷಣ ಇಲಾಖೆ ವಿರುದ್ಧ ಸಿಎಂಗೆ ದೂರು ಕೊಡಲು ಖಾಸಗಿ ಶಾಲೆಗಳ ಒಕ್ಕೂಟ ಮುಂದಾಗಿದೆ.

ಪಠ್ಯಕ್ರಮ ಫೈಟ್‌: ಶಿಕ್ಷಣ ಇಲಾಖೆ ವಿರುದ್ಧ ಸಿಎಂಗೆ ದೂರು ಕೊಡಲು ಮುಂದಾದ ಖಾಸಗಿ ಶಾಲೆಗಳ ಒಕ್ಕೂಟ
ಪಠ್ಯಕ್ರಮ ಫೈಟ್‌: ಶಿಕ್ಷಣ ಇಲಾಖೆ ವಿರುದ್ಧ ಸಿಎಂಗೆ ದೂರು ಕೊಡಲು ಮುಂದಾದ ಖಾಸಗಿ ಶಾಲೆಗಳ ಒಕ್ಕೂಟ
Follow us on

ಬೆಂಗಳೂರು, ಅಕ್ಟೋಬರ್​​ 09: ಕೊರೊನಾದಿಂದ ಶೈಕ್ಷಣಿಕ ಪಾಠ ಮತ್ತು ಕಲಿಕೆ ಎರಡು ಹಳ್ಳಹಿಡದಿದೆ. ಇನ್ನು ಮಾತು ಎತ್ತಿದರೆ ಶೈಕ್ಷಣಿಕ ಗುಣಮಟ್ಟದ ಬಗ್ಗೆ ಮಾತನಾಡುವ ಶಿಕ್ಷಣ ಇಲಾಖೆ (education department) , ಕಳೆದ ಐದು ವರ್ಷದಿಂದ ಪಠ್ಯ ಪರಿಷ್ಕರಿಸದೇ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಹಿಂದೇಟು ಹಾಕುತ್ತಿರುವುದು ಖಾಸಗಿ ಶಾಲೆಗಳ ಕೆಂಗೆಣ್ಣಿಗೆ ಗುರಿಯಾಗಿದೆ.

ಶಿಕ್ಷಣ ಇಲಾಖೆ ಹಾಗೂ ಖಾಸಗಿ ಶಾಲೆಗಳ ನಡುವೆ ಪಠ್ಯಕ್ರಮ ಫೈಟ್‌

ಶಿಕ್ಷಣ ಇಲಾಖೆ ಹಾಗೂ ಖಾಸಗಿ ಶಾಲೆಗಳ ನಡುವೆ ಪಠ್ಯಕ್ರಮ ಫೈಟ್‌ ಶುರುವಾಗಿದೆ. ಶಿಕ್ಷಣ ಇಲಾಖೆಯ ಪಠ್ಯಕ್ರಮದಲ್ಲಿ ಕ್ವಾಲಿಟಿ ಇಲ್ಲವಾ ಅನ್ನೋ ಅನುಮಾನ ಶುರುವಾಗಿದೆ. ಕಡ್ಡಾಯ ಪಠ್ಯಕ್ರಮ ಅನುಸರಿಸುವ ವಿಚಾರದಲ್ಲಿ ಸಂಘರ್ಷ ಶುರುವಾಗಿದೆ. ಶಾಲಾ ಶಿಕ್ಷಣ ಇಲಾಖೆ ರಾಜ್ಯಪಠ್ಯಕ್ರಮದ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ರಾಜ್ಯಪಠ್ಯಕ್ರಮ ಹಾಗೂ ಪಠ್ಯಪುಸ್ತಕಗಳನ್ನ ಕಡ್ಡಾಯವಾಗಿ ಅನುಸರಿಸುವ ಕುರಿತು ಸುತ್ತೋಲೆ ನೀಡಿದೆ ಈಗ ಇದಕ್ಕೆ ಖಾಸಗಿ ಶಾಲೆಗಳ ಒಕ್ಕೂಟದಿಂದ ವಿರೋಧ ಶುರುವಾಗಿದೆ.

ಇದನ್ನೂ ಓದಿ: ಮುಂದಿನ‌ ವರ್ಷದಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಗ್ರೇಸ್​ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ

ಶಿಕ್ಷಣ ಇಲಾಖೆ ವಿರುದ್ಧ ಖಾಸಗಿ ಶಾಲೆಗಳ ಒಕ್ಕೂಟ ವಿರೋಧ ಶುರು ಮಾಡಿವೆ. ಶಾಲಾ ಶಿಕ್ಷಣ ಇಲಾಖೆಯ ಪಠ್ಯಕ್ರಮದಲ್ಲಿ ಗುಣಮಟ್ಟ ಕೊರತೆ ಇದೆ. ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಕಲಿಕಾ ಗುಣಮಟ್ಟ ಕುಸಿಯುತ್ತಿದೆ.  ಹೀಗಾಗಿಯೇ ಮಕ್ಕಳು ಅನುತೀರ್ಣತೆ ಪ್ರಮಾಣ ಹೆಚ್ಚಾಗಿದೆ. ಇದರಿಂದ ಕೇಂದ್ರ ಹಾಗೂ ರಾಜ್ಯ ಪಠ್ಯಕ್ರಮದ ನಡುವೆ ತಾರತಮ್ಯ ಕಂಡು ಬರ್ತಿದೆ. ಶಿಕ್ಷಣ ಇಲಾಖೆ ಸಿಬಿಎಸ್​ಇ ಮಂಡಳಿಗೆ ಪೂರಕವಾದ ರಾಷ್ಟ್ರಮಟ್ಟದಲ್ಲಿ ಸ್ಪರ್ಧೆ ನೀಡುವ ಪಠ್ಯ ನಮ್ಮ ಸರ್ಕಾರಿ ಪಠ್ಯಕ್ರದಲ್ಲಿ ಇಲ್ಲವಾಗಿದೆ. ಇದು ಕಲಿಕಾ ಗುಣಮಟ್ಟ ಕುಸಿಯಲು ಕಾರಣವಾಗಿದೆ.

ರಾಜ್ಯದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆಗೆ 2005 ಎನ್​ಸಿಎಫ್​ ಮತ್ತು ಎನ್​ಸಿಇಆರ್​ಟಿ ಶಿಫಾರಿಸಿನಂತೆ 1 ರಿಂದ 5 ಹಾಗೂ 6-10 ರವರೆಗೆ ತರಗತಿಗೆಗೆ ಅನುಗುಣವಾಗಿ ಪರಿಷ್ಕರಣೆಯಾಗದೆ ಇರುವುದೇ ಪ್ರಮುಖ ಕಾರಣವಾಗಿದೆ. ಹಿಗಾಗಿ ನಮಗೆ ಪರ್ಯಾಯ ಪಠ್ಯಕ್ರಮ ಬಳಕೆ ಅನಿವಾರ್ಯವಾಗಿದೆ. ಆದರೆ ಶಿಕ್ಷಣ ಇಲಾಖೆ ಮಾತ್ರ ರಾಜ್ಯಪಠ್ಯಕ್ರಮದ ಶಾಲೆಗಳು ಕಡ್ಡಾಯ ರಾಜ್ಯ ಪಠ್ಯಕ್ರಮ ಮಾತ್ರ ಬಳಕೆ ಮಾಡುವಂತೆ ಸೂತ್ತೋಲೆ ನೀಡಿದೆ ಅಂತಾ ಸಂಘರ್ಷ ಶುರು ಮಾಡಿ ಸಿಎಂಗೆ ಈ ಬಗ್ಗೆ ದೂರು ನೀಡಲು ಮುಂದಾಗಿವೆ.

ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಣ ಇಲಾಖೆ ಉಲ್ಟಾ ಪಲ್ಟಾ ಮಾಡ್ತಿದೆ. ಕಳೆದ ಐದು ವರ್ಷದಿಂದ ಪಠ್ಯಪುಸ್ತಕ ಪರಿಷ್ಠರಿಸಲು ಶಿಕ್ಷಣ ಇಲಾಖೆ ಹಿಂದೇಟು ಹಾಕಿದೆ. ಎನ್​ಸಿಇಆರ್​ಟಿ ರಾಜ್ಯ ಪಠ್ಯ ಪರಿಷ್ಕರಿಸುವಂತೆ ಹೇಳಿದರು ಪ್ರಸಕ್ತ ಶಾಲಿನಲ್ಲಿಯೂ ಹಳೆಯ ಪಠ್ಯ ಬೋಧನೆಗೆ ಶಿಕ್ಷಣ ಇಲಾಖೆ ಮುಂದಾಗಿದೆ.‌ ರಾಜ್ಯ ಪಠ್ಯಕ್ರಮ ಮಕ್ಕಳ ವಯಸ್ಸಿಗೆ ಸರಿಯಾದ ರೀತಿಯಲ್ಲಿ ಇಲ್ಲ. ಔಟ್ ಡೇಟ್ ಆಗಿದೆ ಮಕ್ಕಳ ಮಾನಸಿಕ ಬೆಳವಣಿಗೆ ಹಾಗೂ ದೈಹಿಕ ಬೆಳವಣಿಗೆಗೆ ತಕ್ಕಂತೆ ಪಠ್ಯ ಸಿದ್ಧಪಡಿಸುವಂತೆ ಹೇಳಿತ್ತು. ಆದ್ರೆ ಶಿಕ್ಷಣ ಇಲಾಖೆ ಮಾತ್ರ ಈ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಿದೆ ಎಂದು ಖಾಸಗಿ ಶಾಲೆಗಳ ವಿರೋಧ ವ್ಯಕ್ತಪಡಿಸಿದ್ದು, ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತ್ರ ರಾಜ್ಯಪಠ್ಯದ ಶಾಲೆಗಳಲ್ಲಿ ಪಠ್ಯಕ್ರಮ ಗುಣಮಟ್ಟವಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಪೋಷಕರನ್ನ ಸೆಳೆಯೋಕೆ ಖಾಸಗಿ ಶಾಲೆಗಳಿಂದ ಆಫರ್ ಅಸ್ತ್ರ! 6 ತಿಂಗಳ ಮೊದಲೆ ಮಕ್ಕಳ ದಾಖಲಾತಿಗೆ ಸರ್ಕ​ಸ್​

ಮಕ್ಕಳ ಮುಂದಿನ ಭವಿಷ್ಯ ಬಗ್ಗೆ ಬೆಳಕಾಗಬೇಕಾದ ಶಿಕ್ಷಣ ಇಲಾಖೆ ಇದೀಗ ಮಕ್ಕಳ‌ ವಿಷಯದಲ್ಲಿ ಪದೆ ಪದೇ ತಪ್ಪು ಮಾಡುತ್ತಿದೆ. ಇನ್ನಾದರೂ ಪಠ್ಯ ಬೋಧನೆಯನ್ನು ಸರಿಪಡಿಸಲು ಮುಂದಾಗಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:34 pm, Wed, 9 October 24