AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಲಕಾವೇರಿಯಲ್ಲಿ ತೀರ್ಥೋದ್ಭವ, ಹಾಸನದಲ್ಲಿ ಅಧಿದೇವತೆ ದರ್ಶನ ಇಂದು

ಮಡಿಕೇರಿ: ಕಾವೇರಿ.. ಕರುನಾಡ ಜೀವನದಿ.. ಅದೆಷ್ಟೋ ಜನರ ಬಾಳು ಬೆಳಗಿಸೋ ದಾಹ ನೀಗಿಸೋ ಮಹಾನದಿ. ಆದ್ರೆ, ಕಾವೇರಿ ಉದ್ಭವಿಸೋ ತಲಕಾವೇರಿಯಲ್ಲಿ ತೀರ್ಥೋದ್ಭವ ವಿಸ್ಮಯ ಕಣ್ತುಂಬಿಕೊಳ್ಳೋಕೆ ಕ್ಷಣಗಣನೆ ಆರಂಭವಾಗಿದೆ. ತಲಕಾವೇರಿ ಹಾಗೂ ತ್ರಿವೇಣಿ ಸಂಗಮ ಭಾಗಮಂಡಲದಲ್ಲಿ ಸಕಲ ರೀತಿಯಲ್ಲಿ ಸಿದ್ಧತೆ ನಡೆದಿದೆ. ಅಕ್ಟೋಬರ್ 17ರ ರಾತ್ರಿ ಅಂದ್ರೆ ಅಕ್ಟೋಬರ್ 18ರಂದು ಮುಂಜಾನೆ 12:59 ನಿಮಿಷಕ್ಕೆ ತುಲಾ ಸಂಕ್ರಮಣದ ರೋಹಿಣಿ ನಕ್ಷತ್ರ ಶುಭ ಕರ್ಕಾಟಕ ಲಗ್ನದಲ್ಲಿ ಕಾವೇರಿ ತೀರ್ಥೊದ್ಭವ ಆಗಲಿದೆ. ಬ್ರಹ್ಮ ಕುಂಡಿಕೆಯಿಂದ ಪವಿತ್ರ ತೀರ್ಥ ಉಕ್ಕಿಬರಲಿದೆ. ಇಂದಿನಿಂದ ಪೂಜಾ […]

ತಲಕಾವೇರಿಯಲ್ಲಿ ತೀರ್ಥೋದ್ಭವ, ಹಾಸನದಲ್ಲಿ ಅಧಿದೇವತೆ ದರ್ಶನ ಇಂದು
ಸಾಧು ಶ್ರೀನಾಥ್​
|

Updated on:Oct 17, 2019 | 11:07 AM

Share

ಮಡಿಕೇರಿ: ಕಾವೇರಿ.. ಕರುನಾಡ ಜೀವನದಿ.. ಅದೆಷ್ಟೋ ಜನರ ಬಾಳು ಬೆಳಗಿಸೋ ದಾಹ ನೀಗಿಸೋ ಮಹಾನದಿ. ಆದ್ರೆ, ಕಾವೇರಿ ಉದ್ಭವಿಸೋ ತಲಕಾವೇರಿಯಲ್ಲಿ ತೀರ್ಥೋದ್ಭವ ವಿಸ್ಮಯ ಕಣ್ತುಂಬಿಕೊಳ್ಳೋಕೆ ಕ್ಷಣಗಣನೆ ಆರಂಭವಾಗಿದೆ. ತಲಕಾವೇರಿ ಹಾಗೂ ತ್ರಿವೇಣಿ ಸಂಗಮ ಭಾಗಮಂಡಲದಲ್ಲಿ ಸಕಲ ರೀತಿಯಲ್ಲಿ ಸಿದ್ಧತೆ ನಡೆದಿದೆ.

ಅಕ್ಟೋಬರ್ 17ರ ರಾತ್ರಿ ಅಂದ್ರೆ ಅಕ್ಟೋಬರ್ 18ರಂದು ಮುಂಜಾನೆ 12:59 ನಿಮಿಷಕ್ಕೆ ತುಲಾ ಸಂಕ್ರಮಣದ ರೋಹಿಣಿ ನಕ್ಷತ್ರ ಶುಭ ಕರ್ಕಾಟಕ ಲಗ್ನದಲ್ಲಿ ಕಾವೇರಿ ತೀರ್ಥೊದ್ಭವ ಆಗಲಿದೆ. ಬ್ರಹ್ಮ ಕುಂಡಿಕೆಯಿಂದ ಪವಿತ್ರ ತೀರ್ಥ ಉಕ್ಕಿಬರಲಿದೆ. ಇಂದಿನಿಂದ ಪೂಜಾ ಕೈಂಕರ್ಯಗಳು ನಡೆಯಲಿದ್ದು, ಅರ್ಚಕರ ತಂಡ ಕೂಡ ಕಾವೇರಿಮಾತೆಯ ಸ್ವಾಗತಕ್ಕೆ ಸಜ್ಜಾಗಿದೆ. ಅಲ್ಲದೇ 8 ಕಿಲೋಮೀಟರ್ ದೂರದಿಂದಲೇ ಲೈಟಿಂಗ್ ವ್ಯವಸ್ಥೆಗಾಗಿ 500ಕ್ಕೂ ಹೆಚ್ಚು ಟ್ಯೂಬ್ ಲೈಟ್​ಗಳನ್ನ ಬಳಸಲಾಗಿದೆ. ತಾತ್ಕಾಲಿಕ ಶೌಚಾಲಯ, ಅನ್ನದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಲ್ದೇ, ಭದ್ರತೆಗಾಗಿ 3 ಡಿವೈಎಸ್ಪಿ, 7 ಜನ ಇನ್ಸ್ ಪೆಕ್ಟರ್, 60 ಸಬ್ ಇನ್ಸ್ ಪೆಕ್ಟರ್, 80 ಮಹಿಳಾ ಸಿಬ್ಬಂದಿ, 150 ಹೋಂ ಗಾರ್ಡ್ ಹಾಗೂ 70 ಸಿಸಿ ಕ್ಯಾಮರಾ ಕಣ್ಗಾವಲಿರಿಸಲಾಗಿದೆ.

ಮತ್ತೊಂದು ಕಡೆ ವರ್ಷಕ್ಕೆ ಒಂದು ಬಾರಿಯಷ್ಟೇ ದರ್ಶನ ಭಾಗ್ಯ ಕರುಣಿಸೋ ಹಾಸನದ ಅಧಿದೇವತೆ ಹಾಸನಾಂಬೆ ದರ್ಶನ ಇಂದಿನಿಂದ ಆರಂಭವಾಗಲಿದೆ. ಮಧ್ಯಾಹ್ನ 12.30 ರ ಬಳಿಕ ಗೊನೆಯುಳ್ಳ ಬಾಳೆ ಕಂಬ ಕಡಿದ ನಂತರ ದೇವಿಯ ಗರ್ಭಗುಡಿ ಬಾಗಿಲು ತೆರೆಯಲಿದೆ. ಈ ಬಾರಿ ಅಕ್ಟೋಬರ್ 17 ರಿಂದ 29 ರ ವರೆಗೆ ದೇವಿ ದರ್ಶನ ನಡೆಯಲಿದ್ದು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಬಾರಿ ಮಳೆಯ ಮುನ್ಸೂಚನೆ ಇರುವುದರಿಂದ ಸಾಲುಗಟ್ಟಿ ನಿಲ್ಲುವ ಭಕ್ತರಿಗಾಗಿ ವಾಟರ್ ಫ್ರೂಫ್ ಮೇಲ್ಛಾವಣಿ ಹಾಕಲಾಗಿದೆ. ನೇರ ದರ್ಶನಕ್ಕೆ 1 ಸಾವಿರ ಹಾಗೂ ಶೀಘ್ರ ದರ್ಶನಕ್ಕೆ 300 ರೂಪಾಯಿ ಟಿಕೆಟ್ ವ್ಯವಸ್ಥೆ ಮುಂದುವರಿಸಿದ್ದು, ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.

Published On - 8:26 am, Thu, 17 October 19