ಅಕ್ರಮ ಮರಳು ಸಂಗ್ರಹಣೆ ಅಡ್ಡೆ ಮೇಲೆ ತಹಶೀಲ್ದಾರ್ ದಾಳಿ: 10 ಲಕ್ಷ ಮೌಲ್ಯದ ಮರಳು ಜಪ್ತಿ
ಗ್ರಾಮದ ಸರ್ವೆ ನಂ 74/75 ರಲ್ಲಿ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮರೆಗೆ ಸುರಪುರ ತಹಶೀಲ್ದಾರ್ ಸುಬ್ಬಣ್ಣ ನೇತೃತ್ವದಲ್ಲಿ ಅಡ್ಡೊಡಗಿ ಬಳಿ ದಾಳಿ ನಡೆಸಿದ್ದು, 10 ಲಕ್ಷ ರೂಪಾಯಿ ಮೌಲ್ಯದ ಮರಳು ಜಪ್ತಿ ಮಾಡಿದ್ದಾರೆ.

ತಹಶೀಲ್ದಾರ್ ಮರಳು ಜಪ್ತಿ ನಡೆಸುತ್ತಿರುವ ದೃಶ್ಯ
ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ಅಡ್ಡೊಡಗಿಯಲ್ಲಿ ಅಕ್ರಮವಾಗಿ ಮರಳು ಸಂಗ್ರಹ ಅಡ್ಡೆ ಮೇಲೆ ತಹಶೀಲ್ದಾರ್ ಅವರು ದಾಳಿ ನಡೆಸಿ ಮರಳು ಜಪ್ತಿ ಮಾಡಿದ್ದಾರೆ.
ಗ್ರಾಮದ ಸರ್ವೆ ನಂ 74/75 ರಲ್ಲಿ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮರೆಗೆ ಸುರಪುರ ತಹಶೀಲ್ದಾರ್ ಸುಬ್ಬಣ್ಣ ನೇತೃತ್ವದಲ್ಲಿ ಅಡ್ಡೊಡಗಿ ಬಳಿ ದಾಳಿ ನಡೆಸಿದ್ದು, 10 ಲಕ್ಷ ರೂಪಾಯಿ ಮೌಲ್ಯದ ಮರಳು ಜಪ್ತಿ ಮಾಡಿದ್ದಾರೆ. ಒಟ್ಟು 1500 ಟಿಪ್ಪರ್ ನಷ್ಟು ಮರಳು ಜಪ್ತಿ ಮಾಡಿದ್ದು, ಸುರಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಅಕ್ರಮ ಮರಳು ಸಂಗ್ರಹ ಅಡ್ಡೆ



