ಕರ್ನಾಟಕದಲ್ಲಿ ಕೊರೊನಾ ಮೂರನೇ ಅಲೆ ಅಕ್ಟೋಬರ್ ಅಥವಾ ನವೆಂಬರ್​ಗೆ ಆರಂಭವಾಗುವ ಸಾಧ್ಯತೆಯಿದೆ: ಸಲಹಾ ಸಮಿತಿ ಎಚ್ಚರಿಕೆ

| Updated By: sandhya thejappa

Updated on: Jun 03, 2021 | 10:43 AM

ಪಾಸಿಟಿವಿಟಿ ರೇಟ್ ಶೇ.5ಕ್ಕೆ ಬಂದಲ್ಲಿ ಹಂತ ಹಂತವಾಗಿ ಅನ್​ಲಾಕ್​ ಪ್ರಕ್ರಿಯೆಯನ್ನು ಆರಂಭಿಸಬಹುದು ಎಂದು ರಾಜ್ಯ ಸಲಹಾ ಸಮಿತಿ ತನ್ನ ಅಭಿಪ್ರಾಯವನ್ನು ಹೇಳಿದೆ. ಇನ್ನು ಎಸ್ಎಸ್ಎಲ್​ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ವಿಚಾರಕ್ಕೆ ಸಂಬಂಧಿಸಿ ಸಲಹಾ ಸಮಿತಿ ಸಲಹೆ ನೀಡಿದೆ.

ಕರ್ನಾಟಕದಲ್ಲಿ ಕೊರೊನಾ ಮೂರನೇ ಅಲೆ ಅಕ್ಟೋಬರ್ ಅಥವಾ ನವೆಂಬರ್​ಗೆ ಆರಂಭವಾಗುವ ಸಾಧ್ಯತೆಯಿದೆ: ಸಲಹಾ ಸಮಿತಿ ಎಚ್ಚರಿಕೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಕೊರೊನಾ ಎರಡನೇ ಅಲೆ ರಾಜ್ಯಾದ್ಯಂತ ಬಂದು ಅಪ್ಪಳಿಸಿದೆ. ಸಾವು, ನೋವು ಇನ್ನು ಕಡಿಮೆಯಾಗಿಲ್ಲ. ಈ ನಡುವೆ ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ಆರಂಭವಾಗುವ ಸಾಧ್ಯತೆ ಹೆಚ್ಚಿದೆ ಎಂದು ಸಲಹಾ ಸಮಿತಿ ಎಚ್ಚರಿಕೆ ನೀಡಿದೆ. ಅಲ್ಲದೇ ಪಾಸಿಟಿವಿಟಿ ರೇಟ್ ಶೇ.10 ಇದ್ದಲ್ಲಿ ಜೂನ್ ಅಂತ್ಯದವರೆಗೂ ಜಾರಿಯಲ್ಲಿರುವ ಲಾಕ್​ಡೌನ್​ನ ಮುಂದುವರಿಸುವಂತೆ ಸೂಚನೆ ನೀಡಿದೆ.

ಪಾಸಿಟಿವಿಟಿ ರೇಟ್ ಶೇ.5ಕ್ಕೆ ಬಂದಲ್ಲಿ ಹಂತ ಹಂತವಾಗಿ ಅನ್​ಲಾಕ್​ ಪ್ರಕ್ರಿಯೆಯನ್ನು ಆರಂಭಿಸಬಹುದು ಎಂದು ರಾಜ್ಯ ಸಲಹಾ ಸಮಿತಿ ತನ್ನ ಅಭಿಪ್ರಾಯವನ್ನು ಹೇಳಿದೆ. ಇನ್ನು ಎಸ್ಎಸ್ಎಲ್​ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ವಿಚಾರಕ್ಕೆ ಸಂಬಂಧಿಸಿ ಸಲಹೆ ನೀಡಿದ ಸಮಿತಿ, ಒಂದೊಮ್ಮೆ ಎಸ್ಎಸ್ಎಲ್​ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲು ಇಚ್ಚಿಸಿದರೆ ಪ್ರತ್ಯೇಕ ಎಸ್ಒಪಿ ಹೊರಡಿಸಬೇಕೆಂದು ತಿಳಿಸಿದೆ.

ಪರೀಕ್ಷಾ ಕರ್ತವ್ಯಕ್ಕೆ ಬರುವ ಶಿಕ್ಷಕರಿಗೆ ಹಾಗೂ ಸಿಬ್ಬಂದಿಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಿರಬೇಕು. ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಎಕ್ಸಾಂ ಡ್ಯೂಟಿಗೆ ಹಾಕಬೇಕು ಎಂದು ಸಮಿತಿ ಹೇಳಿದೆ.

ಮೂರನೇ ಅಲೆಯ ಬಗ್ಗೆ ತಜ್ಞರ ಸಲಹಾ ಸಮಿತಿ ಹೇಳಿದ್ದೇನು?
ಮೊದಲ ಅಲೆಕ್ಕಿಂತ ಎರಡನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚಾಗಿ ಸೋಂಕು ಕಂಡು ಬಂದಿದೆ. ಮೊದಲ ಅಲೆಗೆ ಹೋಲಿಸಿದರೆ ಎರಡನೇ ಅಲೆಯಲ್ಲಿ 0-9 ವಯಸ್ಸಿನವರಲ್ಲಿ ಸಾವಿನ ಪ್ರಮಾಣ ಶೇ.4, ಸೋಂಕಿನ ಪ್ರಮಾಣ ಶೇ.43 ಏರಿಕೆಯಾಗಿದೆ. 10-19 ವಯಸ್ಸಿನವರಲ್ಲಿ ಸಾವಿನ ಪ್ರಮಾಣ ಶೇ.6 ರಷ್ಟು ಏರಿಕೆಯಾದರೆ, ಸೋಂಕಿನ ಪ್ರಮಾಣ ಶೇ.60 ರಷ್ಟು ಏರಿಕೆಯಾಗಿದೆ. ಹೀಗಾಗಿ ಮೂರನೇ ಅಲೆ ಮಕ್ಕಳಿಗೆ ಗಂಡಾಂತರ ಇದೆ ಎಂದು ತಜ್ಞರು ವರದಿ ನೀಡಿದ್ದಾರೆ.

ನಾಲ್ಕು ತಿಂಗಳಲ್ಲಿ ಆಸ್ಪತ್ರೆ, ವೈದ್ಯರಿಗೆ ತರಬೇತಿ, ಮಾನವ ಸಂಪನ್ಮೂಲ ಹೆಚ್ಚಿಸಲು ಸಲಹೆ ನೀಡಿದ ಸಮಿತಿ, ತಾಲೂಕು ಮಟ್ಟದಲ್ಲೇ ಅತ್ಯಾಧುನಿಕ ಆಸ್ಪತ್ರೆಗಳ ವ್ಯವಸ್ಥೆ ಮಾಡಬೇಕಾಗುತ್ತದೆ. ಮಕ್ಕಳಿಗೆ ಜಿನೋಮಿಕ್ ಟೆಸ್ಟ್ ಮಾಡಬೇಕು. ಶಾಲೆಗೆ ಹೋಗುವ ಮಕ್ಕಳ ಪೋಷಕರು ಲಸಿಕೆ ಹಾಕಿಸಿಕೊಳ್ಳಬೇಕು ಎಂದು ತಿಳಿಸಿದೆ. ಅಲ್ಲದೆ ರಾಜ್ಯದಲ್ಲಿ 40 ಜನ ಬ್ಲ್ಯಾಕ್ ಫಂಗಸ್​ಗೆ ಬಲಿಯಾಗಿದ್ದು, ಚಿಕಿತ್ಸೆ ಪ್ರಮಾಣ ಹೆಚ್ಚಿಸಬೇಕೆಂದು ಹೇಳಿದೆ.

ಇದನ್ನೂ ಓದಿ

ಭಾರತದಲ್ಲಿ ಕೊರೊನಾ 2ನೇ ಅಲೆ ಕೊನೆ ಯಾವಾಗ? ಮೂರನೇ ಅಲೆಯ ಪ್ರಾರಂಭಕ್ಕೆ ಇನ್ನೆಷ್ಟು ತಿಂಗಳು ಬಾಕಿ?-ಇಲ್ಲಿದೆ ನೋಡಿ ತಜ್ಞರು ನೀಡಿದ ವರದಿ

ಅನಾಥವಾಗುತ್ತಿವೆ ಕೊರೊನಾಗೆ ಬಲಿಯಾದ ಶವಗಳು, ಬಿಬಿಎಂಪಿಯಿಂದ 857 ಶವಗಳಿಗೆ ಮುಕ್ತಿ

(Technical Advisory Committee has warned that Corona third wave in Karnataka is likely to start in October or November)

Published On - 10:36 am, Thu, 3 June 21