ಬೆಂಗಳೂರು: ಬಿಜೆಪಿ ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ಕೊವಿಡ್19 ವಾರ್ರೂಮ್ನಲ್ಲಿ ಕಾರ್ಯನಿರ್ವಹಿಸುವವರ ಬಳಿ ಕ್ಷಮಾಪಣೆ ಕೇಳಿದ್ದಾರೆ ಎಂಬ ವಿಚಾರವನ್ನು ಸ್ವತಃ ತೇಜಸ್ವಿ ಸೂರ್ಯ ಅಲ್ಲಗಳೆದಿದ್ದಾರೆ. ಬಿಬಿಎಂಪಿಯಲ್ಲಿ ಬೆಡ್ ಬ್ಲಾಕಿಂಗ್ ಹಗರಣ ನಡೆದಿರುವುದನ್ನು ಅವರು ಬಹಿರಂಗಗೊಳಿಸಿದ್ದರು. ಈ ಪ್ರಕರಣ ಬಳಿಕ ಪರಸ್ಪರ ಕೋಮುವಾಗ್ವಾದಕ್ಕೂ ಕಾರಣವಾಗಿತ್ತು.
ಒಬ್ಬರಿಗೆ ಸುದ್ದಿ ಮಾಡಲು ಏನು ಸಿಗದಿದ್ದಾಗ ಹೀಗೆ ಸುಳ್ಳು ಸುದ್ದಿಯನ್ನು ಸೃಷ್ಟಿಸುತ್ತಾರೆ ಎಂದು ತೇಜಸ್ವಿ ಸೂರ್ಯ ಅವರ ಕಚೇರಿ ತನ್ನ ಟ್ವಿಟರ್ ಹ್ಯಾಂಡಲ್ನಲ್ಲಿ ಬರೆದುಕೊಂಡಿದೆ. ತೇಜಸ್ವಿ ಸೂರ್ಯ, ಕೊವಿಡ್ ವಾರ್ ರೂಮ್ಗೆ ಭೇಟಿ ನೀಡಿ, ಅಲ್ಲಿನ ಕೆಲಸಗಾರರ ಬಳಿ ಕ್ಷಮೆ ಕೇಳಿದ್ದಾರೆ ಎಂಬ ಎರಡು ಸುದ್ದಿಗೆ ಪ್ರತಿಕ್ರಿಯಿಸಿ ಹೀಗೆ ಹೇಳಿದ್ದಾರೆ.
ತೇಜಸ್ವಿ ಸೂರ್ಯ ಮಂಗಳವಾರ ಕೊವಿಡ್ ವಾರ್ ರೂಮ್ಗೆ ಭೇಟಿ ನೀಡಿದ್ದರು. ಆ ವೇಳೆ, 17 ಮುಸ್ಲಿಂ ಕೆಲಸಗಾರರ ಹೆಸರನ್ನು ಓದಿ ಹೇಳಿದ್ದರು. ಆಸ್ಪತ್ರೆಯ ಬೆಡ್ ಬ್ಲಾಕಿಂಗ್ ಹಗರಣದಲ್ಲಿ ಅವರು ಭಾಗಿಯಾಗಿದ್ದರು ಎಂದು ತಿಳಿಸಿದ್ದರು. ಕರ್ನಾಟಕವು ಕೊರೊನಾ ಸೋಂಕಿನ ತೀವ್ರಗತಿಯ ಹರಡುವಿಕೆಯಿಂದ ತತ್ತರಿಸಿದೆ. ಈ ವೇಳೆ ಹೀಗೆ ಮಾಡಿರುವುದು ಅಕ್ಷಮ್ಯ ಎಂದು ಜನರು ಕೂಡ ಪ್ರತಿಕ್ರಿಯೆ ನೀಡಿದ್ದರು.
ಬಿಜೆಪಿ ಶಾಸಕರ ಜೊತೆಗೆ ಕೊವಿಡ್ ವಾರ್ ರೂಮ್ಗೆ ಭೇಟಿ ನೀಡಿದ್ದ ತೇಜಸ್ವಿ ಸೂರ್ಯ, ಅಲ್ಲಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಅವರಲ್ಲಿ ಒಬ್ಬರಾಗಿದ್ದ ಶಾಸಕ ರವಿ ಸುಬ್ರಹ್ಮಣ್ಯ, ಇವರನ್ನೆಲ್ಲಾ ಕಾರ್ಪೊರೇಷನ್ಗೆ ಅಪಾಯಿಂಟ್ ಮಾಡಿಕೊಂಡಿದ್ದೀರಾ ಅಥವಾ ಮದರಸಾಗಾ ಎಂಬ ಪ್ರಶ್ನೆಯನ್ನೂ ಎತ್ತಿದ್ದರು.
ಮಂಗಳವಾರದ ಈ ಘಟನೆಯ ಬಳಿಕ, ಅಲ್ಲಿನ ಕೆಲಸಗಾರರ ಹೆಸರು, ಸಂಪರ್ಕ ಸಂಖ್ಯೆ ಹಾಗೂ ವಿಳಾಸ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹಂಚಲ್ಪಟ್ಟಿತ್ತು. ಇದರಿಂದ ಅಲ್ಲಿನ ಕೆಲಸಗಾರರಿಗೆ ಬಹಳಷ್ಟು ಸಮಸ್ಯೆಯೂ ಉಂಟಾಗಿತ್ತು. ತೇಜಸ್ವಿ ಸೂರ್ಯ ಕ್ಷಮೆ ಕೇಳಿದ್ದಾರೆ ಅಥವಾ ಇಲ್ಲ ಎನ್ನುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ಅಭಿಪ್ರಾಯಗಳು ಹರಿದಾಡುತ್ತಿವೆ.
Hello! What is fake news here?
You went there.
Said sorry that numbers leaked, people harassed and said you will find who leaked numbers.
You said you read a list which was given to you.
You said ‘being shown as a conspiracy against Muslims’How do I know? I have the audio. https://t.co/kDLzSB6S8N
— Dhanya Rajendran (@dhanyarajendran) May 7, 2021
ಈ ಬಗ್ಗೆ ತಕ್ಷಣವೇ ಪೊಲೀಸರು ತನಿಖೆ ಆರಂಭಿಸಿದ್ದರು. ಬುಧವಾರ, ನಗರದ ಎಲ್ಲಾ ವಲಯಗಳ ಕೊವಿಡ್ ವಾರ್ ರೂಮ್ಗಳಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದರು. ಆ ಮೂಲಕ, ಅಕ್ರಮವಾಗಿ ಬೆಡ್ ಬ್ಲಾಕಿಂಗ್ ದಂಧೆ ನಡೆಸುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದರು. ಬಳಿಕ, ಈವರೆಗೆ 7 ಮಂದಿಯನ್ನು ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಗಾನ್ ಕೇಸ್, ಒನ್ ಟೈಮ್ ಕ್ರಾಪ್: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕುಹಕ
ಕೋಮು ವೈಷಮ್ಯ ಆರೋಪ; ತೇಜಸ್ವಿ ಸೂರ್ಯ ಹಾಗೂ ಮೂವರು ಶಾಸಕರ ವಿರುದ್ಧ ಜೆಡಿಎಸ್ ಯುವ ನಾಯಕಿಯಿಂದ ದೂರು
Published On - 8:18 pm, Fri, 7 May 21